Breaking News

ಗುಂಡಿ ,‌ಧೂಳು ಮುಕ್ತ ನಗರವೆಂಬ ಹಣೆ ಪಟ್ಟಿಯನ್ನು ಕಳಚಿದ್ದೇವೆ-ನಗರಸಾಭಾಧ್ಯಕ್ಷೆ ಉಷಾ ದಾಸರ

ಗದಗ: ಬೆಟಗೇರಿ 13ನೇ ವಾರ್ಡಿನ ಸದಸ್ಯರಾದ ಮುತ್ತಣ್ಣ ಮುಶಿಗೇರಿ ಅವರ ಸಮ್ಮುಖದಲ್ಲಿ 5.60 ಲಕ್ಷ ರೂ. ವೆಚ್ಚದ ಚರಂಡಿ ಕಾಮಗಾರಿಗೆ ನಗರಸಭಾಧ್ಯಕ್ಷೆ ಉಷಾ ದಾಸರ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿ, ಜನರ ಜೀವನದ ಗುಣಮಟ್ಟ ಸುಧಾರಿಸಬೇಕೆಂದರೆ. ಮೂಲ ಭೂತ ಸೌಕರ್ಯಗಳು ಅತ್ಯವಶ್ಯಕ. ಅಲ್ಲದೇ, ಮೂಲಭೂತ ಸೌಲಭ್ಯಗ ಳು ಅಭಿವೃದ್ಧಿಯ ಮೊದಲ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರ ಗಳಂತೆ, ಬಿಜೆಪಿಯ ಲೋಕಲ್ ಸರ್ಕಾರವೂ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಬೇಕೆಂಬ ಉದ್ದೇಶದಿಂದಾಗಿ ನಿರಂತರವಾಗಿ ಶ್ರಮಿಸುತ್ತಲೇ ಇದೆ ಎಂದರು.

ಅವಳಿ ನಗರದ ಜನರ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕುಡಿಯುವ ನೀರು, ರಸ್ತೆ, ಚರಂಡಿ, ಒಳ ಚರಂಡಿ, ವಸತಿ, ಬೀದಿ ದೀಪಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಡಳಿತ ಪಕ್ಷ ಕಾರ್ಯಪ್ರವೃತ್ತವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಹೊಸ ಭರವಸೆ ಮೂಡಿಸಿದ್ದೇವೆ.

ದೀರ್ಘ ವರ್ಷಗಳ ಕಾಂಗ್ರೆಸ್‌ನ ದುರಾಡಳಿತದಿಂದಾಗಿ ಜಿಲ್ಲಾ ಕೇಂದ್ರವಾಗಿರುವ ಗದಗ-ಬೆಟಗೇರಿ ಅವಳಿ ನಗರಗಳು ಗುಂಡಿ-ಧೂಳಿನ ನಗರವೆಂಬ ಹಣೆಪಟ್ಟಿ ಪಡೆದಿತ್ತು. ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ಅವರಿಗಿರುವ ಗದಗ ಮೇಲಿನ ಸಹಕಾರ,‌ ಮುತುವರ್ಜಿಯಿಂದಾಗಿ, ಯುವ ನಾಯಕರಾದ ಅನೀಲ್ ಮೆಣಸಿನಕಾಯಿ ಅವರ ಪ್ರೀತಿ, ಕಾಳಜಿಯಿಂದಾಗಿ ಗದಗ-ಬೆಟಗೇರಿ ಅವಳಿ ನಗರದ ಎಲ್ಲ ಮುಖ್ಯ ರಸ್ತೆಗಳ ಸುಧಾರಣೆ ಕೈಗೊಂಡಿದ್ದೇವೆ. ಇದರೊಂ ದದಿಗೆ ಗುಂಡಿ ,‌ ಧೂಳು ಮುಕ್ತ ನಗರವೆಂಬ ಹಣೆಪಟ್ಟಿಯನ್ನು ಕಳಚಿದ್ದೇವೆ. ಜನರ ಓಡಾಟಕ್ಕೆ, ವಾಹನಗಳ ಸುಗಮ ಸಂಚಾರಕ್ಕೆ ಅತ್ಯುತ್ತಮ ರಸ್ತೆಗಳನ್ನು ಒದಗಿಸಿ ದ್ದೇವೆ. ಬಡಾವಣೆಗಳಲ್ಲೂ ರಸ್ತೆಗಳ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ.

ಬಿಜೆಪಿಯ ಜನಪರ ಆಡಳಿತದಿಂದಾಗಿ ಗದಗ-ಬೆಟಗೇರಿ ಅವಳಿ ನಗರ ವಿದ್ಯುತ್ ದೀಪಗಳಿಂದ ಬೆಳಗುತ್ತಿದೆ. ನಾವು ಕತ್ತಲು ಮುಕ್ತ ನಗರವನ್ನಾಗಿಸಿದ್ದೇವೆ. ಈ ಬಾ ರಿ ಜನರು ಕಾಂಗ್ರೆಸ್ ಮುಕ್ತ ಮಾಡಲಿದ್ದಾರೆಂಬ ವಿಶ್ವಾಸವಿದೆ. ಅಲ್ಲದೇ, ಅಭಿ ವೃದ್ಧಿ ಕಾರ್ಯಗಳ ಮೂಲಕ ಭಾರತೀಯ ಜನತಾ ಪಕ್ಷ ಜನರ ಭರವಸೆಯ ಪಕ್ಷ ವಾಗಿ ಹೊರಹೊಮ್ಮುತ್ತಿದೆ ಎಂದು ನಗರಸಾಭಾಧ್ಯಕ್ಷೆ ಉಷಾ ದಾಸರ ಅಭಿಪ್ರಾ ಯ ಪಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಲಕ್ಷ್ಮೀ ಕಾಕಿ, ಬಿಜೆಪಿ ಮಹಿಳಾ ಮೋ ರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನಿರ್ಮಲಾ ಕೊಳ್ಳಿ ಸೇರಿದಂತೆ ವಾರ್ಡಿನ ಪ್ರಮುಖರು ಇದ್ದರು.

Share News

About BigTv News

Check Also

ಅಂಕಲ್ ಕಿರುಕುಳಕ್ಕೆ ಬೇಸತ್ತು ಯುವತಿ ದುಡುಕಿನ ನಿರ್ಧಾರ

ಗದಗ ಜಿಮ್ಸ್ ನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದ ಯುವತಿಗೆ 47 ವರ್ಷದ ಕಿರಣ ಕಾರಬಾರಿ ಎಂಬಾತ ಮದುವೆ ಆಗು ಅಂತಾ ಕಿರುಕುಳ …

Leave a Reply

Your email address will not be published. Required fields are marked *

You cannot copy content of this page