ಹುಬ್ಬಳ್ಳಿ: ಕಲಬುರ್ಗಿಯಿಂದ ಗಡಿಪಾರು ಆದೇಶದಲ್ಲಿದ್ದ ಆರೋಪಿತ ಮೌನುದ್ದೀನ್ ಲಾಲ್‌ಸಾಬ (47) ಎಂಬ ವ್ಯಕ್ತಿ ಹೊಟ್ಟೆ ನೋವು ನೆಪ ಹೇಳಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ, ಹುಬ್ಬಳ್ಳಿಯಲ್ಲಿ ನಡೆದಿದೆ.
ಆರೋಪಿ, ಕಲಬುರ್ಗಿ ಕಮಲಾಪುರ್ ಗ್ರಾಮದ ಮೈನುದ್ದೀನ್ ಲಾಲ್‌ಸಾಬ್ ಗಡಿಪಾರು ಆಗಿದ್ದ. ಅದರಂತೆ ಆರೋಪಿಯನ್ನು ಬಸ್ ಮುಖಾಂತರ ಗದಗ ಜಿಲ್ಲೆಗೆ ಕರೆದುಕೊಂಡು ಹೋಗುವಾಗ, ಹುಬ್ಬಳ್ಳಿ ಗೋಕುಲ ಬಸ್ ನಿಲ್ದಾಣದಲ್ಲಿ ರವಿವಾರ ಬೆಳಗ್ಗೆ 8.30ಕ್ಕೆ ಹೊಟ್ಟೆ ನೋವು ಎಂದು, ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದವನು, ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾ ಗಿದ್ದಾನೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.