ನವಲಗುಂದ : ಹೋಳಿ ಹುಣ್ಣಿಮೆಯಲ್ಲಿ ದಹನವಾದ ಶ್ರೀರಾಮಲಿಂಗ ಕಾಮದೇವರು ಯುಗಾದಿಯ ದಿನ ಈ ಪಟ್ಟಣದಲ್ಲಿ ಮರುಜನ್ಮ ಪಡೆಯಲಿದ್ದಾನೆ. ಬಾಲ ಕಾಮಣ್ಣ ಕುಳಿತ ಭಂಗಿಯಲ್ಲಿ ಯುಗಾದಿ ಪಾಡ್ಯದ ದಿನದಂದು ಮರುಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಪಟ್ಟಣದಲ್ಲಿ ಹಲವಾರು ದಶಕಗಳಿಂದ ನಡೆದುಕೊಂಡು ಬಂದಿರುವ ಈ ಕಾರ್ಯದಲ್ಲಿ ಭಕ್ತರು ಭಾಗಿಯಾಗುತ್ತಾರೆ. ಪೂಜೆ ಸಲ್ಲಿಸುತ್ತಾರೆ. ಬಾಲ ಕಾಮಣ್ಣನ ಮೂರ್ತಿಯನ್ನು ಕಂಡು ಸಂಭ್ರಮಿಸುತ್ತಾರೆ. ಇನ್ನೂ ಶ್ರೀರಾಮಲಿಂಗ ಕಾಮದೇವರನ್ನು ನಾಳೆ ಮಾರ್ಚ 22 ರ ಬುಧವಾರ ಬೆಳಿಗ್ಗೆ 6 ಗಂಟೆಗೆ ಪ್ರತಿಷ್ಠಾಪನೆ ಮಾಡಿ ರಾತ್ರಿ 9 ರವರೆಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ತರಹದ ಸಿದ್ಧತೆ ಟ್ರಸ್ಟ್ ಕಮೀಟಿ ಮಾಡಿಕೊಂಡಿದೆ.