ಹುಬ್ಬಳ್ಳಿ ನಗರದ ಐತಿಹಾಸಿಕ ಹಾಗೂ ಹಠಯೋಗಿ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ರಥೋತ್ಸವಕ್ಕೆ ಹೆಲಿಕ್ಯಾಪ್ಟರ್ ದಿಂದ ಪುಷ್ಪಾರ್ಚನೆ ಮಾಡುವ ಅದ್ದೂರಿಯಾಗಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ನಡೆಯಿತು.
ಸುಮಾರು ೫೦೦೦ ಅಡಿ ಎತ್ತರದಲ್ಲಿನ ಹೆಲಿಕ್ಯಾಪ್ಟರ್ ಮೂಲಕ ಶ್ರೀ ಸಿದ್ಧೇಶ್ವರ ರಥೋತ್ಸವ ವೇಳೆ ಪುಷ್ಪಾರ್ಚಣೆ ಮಾಡಿದ್ದು ಜನಮನ ಸೆಳೆಯಿತು. ಮೊದಲು ಹೂಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮುಖಾಂತರ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ವೀರಗಾಸೆ ನೃತ್ಯ, ಕಹಳೆ, ಮಂಗಳವಾದ್ಯಗಳು ಮೊಳಗಿದವು. ರಥಕ್ಕೆ ಹಾಗೂ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವ ಎಳೆಯಲಾಯಿತು. ರಥೋತ್ಸವಕ್ಕೆ ಬಂದಿದ್ದ ಭಕ್ತರು ಬಾಳೆಹಣ್ಣು, ಉತ್ತುತ್ತಿ ರಥಕ್ಕೆ ಎಸೆದು ಭಕ್ತಿ, ಭಾವ ಮೆರೆದರು. ರಥ ಎಳೆಯುತ್ತಿದ್ದಂತೆ ಭಕ್ತರ ಭಾವಾವೇಷ ಮುಗಿಲು ಮುಟ್ಟಿತ್ತು.
ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಮೂಲಿಮಠ, ಸೌದತ್ತಿ ಹಾಗೂ ಶ್ರೀ ಸಿದ್ದಯ್ಯನವರು ಹಿರೇಮಠ, ಶ್ರೀ ಸಿದ್ದನಗೌಡರು ಕಾಮ್ ಜೇನು, ಶ್ರೀ ಸಿದ್ದೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರಾದ ರಾಜಣ್ಣ ಕೊರವಿ, ಅಡಿವೆಪ್ಪ ಮೆಣಸಿನಕಾಯಿ, ಹಾಗೂ ಗ್ರಾಮದ ಗುರುಹಿರಿಯರ ಸಮಕ್ಷಮದಲ್ಲಿ ಜಂಗಮ ವಟುಗಳಿಗೆ ಐಯಾಚಾರ ಹಾಗೂ ಲಿಂಗ ದೀಕ್ಷ ಕಾರ್ಯಕ್ರಮವನ್ನ ಶ್ರೀ ಸಿದ್ದೇಶ್ವರ ಕೈಲಾಸ ಮಂಟಪದಲ್ಲಿ ನೆರವೇರಿಸಲಾಯಿತು.
ಭ್ರಮೆ ಮುಹೂರ್ತದಲ್ಲಿ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿಯವರ ಗದ್ದಿಗೆಯ ರುದ್ರಾಭಿಷೇಕ ಹಾಗೂ ಮಹಾಪೂಜೆ, ಸದ್ಗುರು ಸಿದ್ದೇಶ್ವರ ಸ್ವಾಮಿ ಕೈಲಾಸ ಮಂಟಪದಲ್ಲಿ ಸಾಮೂಹಿಕ ವಿವಾಹಗಳ, ಸದ್ಗುರು ಸಿದ್ದೇಶ್ವರರ ಪಲ್ಲಕ್ಕಿ ಉಣಕಲ್ಲಿನ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಸಂಚರಿಸಿ ಸಾಯಂಕಾಲ ದೇವಸ್ಥಾನಕ್ಕೆ ಆಗಮಿಸಿತು. ಇನ್ನು ಭಕ್ತ ಸಮೂಹದ ಸಮ್ಮುಖದಲ್ಲಿ, ಕರಡಿ ಮಜಲು,ಜಗ್ಗಲಿಗೆ, ಡೊಳ್ಳು, ಬೇಂಡ್ ಬಾಜ, ಹೆಜ್ಜೆ ಕುಣಿತ ಹಾಗೂ ಇತರ ವಾದ್ಯಗಳೊಂದಿಗೆ ಲಕ್ಷಾಂತರ ಭಕ್ತರ ಸಮೂಹದಲ್ಲಿ ಸದ್ಗುರು ಶ್ರೀ ಸಿದ್ದಪ್ಪ ರಥೋತ್ಸವ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು.
