Breaking News

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ- ಅಲ್ತಾಫ್ ಹಳ್ಳೂರ

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರಿದ್ದರೂ ಪ್ರಯೋಜನವಾಗಿಲ್ಲ. ಅಭಿವೃದ್ಧಿ ಬದಲು, ಜಾತಿ ಮತ್ತು ಧರ್ಮಾಧಾರಿತ ರಾಜಕಾರಣವೇ ಇವರಿಗೆ ಮುಖ್ಯವಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.

ಹಬ್ಬದ ಹೆಸರಿನಲ್ಲಿ ಹಲಾಲ್‌ ಮಾಂಸ ವಿರೋಧ ಮಾಡುವ ಬಿಜೆಪಿಯವರೇ, ಅದನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಚುನಾವಣೆಗಾಗಿ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪಿಸಿದರು. ‌ದರ್ಗಾ ತೆರವು, ಮೈದಾನದ ಹೆಸರು ಬದಲಾವಣೆಯಂತಹ ಕೆಲಸಗಳಲ್ಲಿ ನಿರತರಾಗಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವಾಗುತ್ತಿದೆ.

ಎಸ್‌ಡಿಪಿಐ, ಎಐಎಂಐಎಂ ಅಭ್ಯರ್ಥಿಗಳು ಕಾಂಗ್ರೆಸ್ ಗೆಲುವಿಗೆ ಸವಾಲಲ್ಲ. ಎಐಎಮ್‌ಐಎಮ್ ಬಿಜೆಪಿಯ ಬಿ ಟೀಮ್ ನ ಕೋಮು ರಾಜಕೀಯದ ಆಟ ಹೆಚ್ಚು ದಿನ‌ ನಡೆಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.

Share News

About BigTv News

Check Also

Featured Video Play Icon

ಈ ನೆಲದ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆ:ಮೂಜಗು ಸ್ವಾಮೀಜಿ ಬೇಸರ…

ಹುಬ್ಬಳ್ಳಿ: ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ ಉಳಿಯದಂತಾಗಿದೆ. ಈ ನೆಲದ ಕಾನೂನು ಉಳಿಸಿಕೊಳ್ಳಬೇಕಾದ್ರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ …

Leave a Reply

Your email address will not be published. Required fields are marked *

You cannot copy content of this page