Breaking News

ಅಲ್ಪಸಂಖ್ಯಾತರ 4% ಮೀಸಲಾತಿಯನ್ನು ಕಸಿದುಕೊಂಡಿದ್ದಕ್ಕೆ ಅಷ್ಪಕ್ ಕುಮಟಾಕರ್ ಆಗ್ರಹ

ಹುಬ್ಬಳ್ಳಿ: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ 4% ಮೀಸಲಾತಿಯನ್ನು ಕಸಿದುಕೊಂಡಿದ್ದಕ್ಕೆ ನಾನು ತೀರ್ವ ಕಂಡನೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಕಾಂಗ್ರೆಸ್ ನೇತಾ ಅಷ್ಪಕ್ ಕುಮಟಾಕರ್ ಹೇಳಿದ್ದಾರೆ.

ನಮ್ಮ ಮೀಸಲಾತಿಯನ್ನು ಕಸಿದುಕೊಂಡು ಯಾರಿಗಾದ್ರೂ ಮುಖಕ್ಕೆ ತುಪ್ಪ ಹಚ್ಚುವುದಕ್ಕೆ ಹೋದ್ರೆ ಅದನ್ನು ಯಾರು ಕೂಡ ಸಹಿಸುವುದಿಲ್ಲ. ನಾನು ಹಲವಾರು ಬಾರಿ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರೊಂದಿಗೆ ಚರ್ಚೆ ಮಾಡಿದ್ದೇನೆ. ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾದ ವಿಜಯಾನಂದ ಕಶಪ್ ರವರು ನಮ್ಮ ಪರವಾಗಿದ್ದಾರೆ. ನಾವು ಮುಸ್ಲಿಮರು ಅಣ್ಣ ತಮ್ಮರಂತಿದ್ದೇವೆ. ನಮ್ಮಿಬ್ಬರ ನಡುವೆ ಜಗಳ ಹಚ್ಚುವ ಕೆಲಸವನ್ನು ಈ ಬಿಜೆಪಿ ಮಾಡಿದೆ. ನಾವು ಯಾವತ್ತೂ ಅಲ್ಪಸಂಖ್ಯಾತ ರ ಜೊತೆಗೆ ಇದ್ವಿ ಅಷ್ಟೇ ಅಲ್ಲ ಅವರು ಕೂಡ ಲಿಂಗಾಯತ ಸಮುದಾಯದೊಂದಿಗೆ ಇದ್ದರು. ಇವರ ಮೀಸಲಾತಿಯನ್ನು ಕಸಿದುಕೊಂಡಿದ್ದು ಯಾವ ನ್ಯಾಯ ಎಂದು ಹೇಳಿದ ವಿಜಯಾನಂದ ಅಶೋಕ್ ರವರ ಹೇಳಿಕೆಗೆ ನಾನು ಸ್ವಾಗತ ಕೋರುತ್ತೇನೆ.

ಲಿಂಗಾಯತ ಸಮುದಾಯ ಮತ್ತು ಮುಸಲ್ಮಾನರನ್ನು ಬಿಜೆಪಿ ಸರ್ಕಾರ ಬೇರೆ ಮಾಡುವುದಕ್ಕೆ ನೋಡ್ತಾ ಇದೆ. ಬಿಜೆಪಿಯವರು ವಿಷದ ಬೀಜ ಬಿತ್ತುವಂತಹ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ನಾಲ್ಕು ಪರ್ಸೆಂಟ್ ಮೀಸಲಾತಿಯನ್ನು ಕಸಿದುಕೊಂಡಿದ್ದು ಕರ್ನಾಟಕದಲ್ಲಿರುವ ಎಲ್ಲಾ ಸಮುದಾಯದ ಜನರಿಗೆ ನೋವಾಗಿದೆ. ದಲಿತರು, ಅಲ್ಪಸಂಖ್ಯಾತರು, ಮುಸ್ಲಿಂಮರು, ಕುರುಬರು ಒಕ್ಕಲಿಗರು ಪ್ರತಿಯೊಂದು ಸಮುದಾಯದವರು ಹೇಳುತ್ತಿದ್ದಾರೆ ಅನ್ಯಾಯವಾಗಿದೆ ಅಂತ. ಅಲ್ಪಸಂಖ್ಯಾತರ ಮೀಸಲಾತಿಯನ್ನು ಕಸಿದುಕೊಂಡರೆ ಉಳಿದ ಧರ್ಮದವರು ಸಮುದಾಯದವರು ನಮಗೆ ಮತ ಹಾಕ್ತಾರೆ ಎನ್ನುವಂತ ಮೂಢನಂಬಿಕೆಯಲ್ಲಿ ಬಿಜೆಪಿಯವರು ಇದ್ದಾರೆ. ಆದರೆ ಅದು ಆಗುವುದಿಲ್ಲ ಯಾಕೆಂದರೆ ಅಲ್ಪಸಂಖ್ಯಾತರೊಂದಿಗೆ ಕರ್ನಾಟಕದ ಪ್ರತಿಯೊಂದು ಲಿಂಗಾಯತರ ಸಮುದಾಯದವರಿದ್ದಾರೆ ಎಂದು ಹೇಳಿದ್ದಾರೆ.

ತಾವೇನು ತಪ್ಪು ಮಾಡಿದ್ದೀರೋ ಮುಂದಿನ ದಿನಗಳಲ್ಲಿ ಕರ್ನಾಟಕದ ಜನತೆ ಪಕ್ಷಾತೀತವಾಗಿ ನಿಮ್ಮ ವಿರುದ್ಧ ಮತ ಚಲಾಯಿಸುವುದರ ಮೂಲಕ ಉತ್ತರ ನೀಡುತ್ತಾರೆ ಎಂದು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ್ದಾರೆ.

Share News

About BigTv News

Check Also

ಹಲ್ಲೆ ಪ್ರಕರಣ: ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ..

Bangalore ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ …

Leave a Reply

Your email address will not be published. Required fields are marked *

You cannot copy content of this page