ಹುಬ್ಬಳ್ಳಿ ನಗರದ ವಿದ್ಯಾನಗರ ಪೊಲೀಸರು ಭರ್ಜರಿ ಬೇಟೆಯಾಡಿದ್ದು, 07 ಕಳ್ಳತನ ಪ್ರಕರಣಗಳನ್ನು ಭೇದಿಸಿ, ಒಟ್ಟು ನಾಲ್ಕು ಆರೋಪಿ ಹಾಗೂ ಇಬ್ಬರು ಸಂಘರ್ಷಕ್ಕೆ ಒಳಗಾದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಮಾರು ಹತ್ತು ದಿನಗಳ ಅಂತರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಉಪ ಪೊಲೀಸ ಆಯುಕ್ತ ಗೋಪಾಲ್ ಬ್ಯಾಕೋಡಿ ಅವರು ವಿಶೇಷ ತನಿಖಾ ತಂಡ ರಚಿಸಿದ್ದರು. ಉತ್ತರ ವಿಭಾಗದ ಎಸಿಪಿ ಬಾಳಪ್ಪ ನಂದಗನ್ವಿ ಇವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ಪವಾರ್ ಅವರ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡದ ವಿದ್ಯಾಗಿರಿ ಠಾಣಾ ವ್ಯಾಪ್ತಿಯ ರಜತ್ ಗಿರಿ ಮೆಡ್ ಪ್ಲಸ್ ಔಷದಿ ಅಂಗಡಿ ಹಾಗೂ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಮೆಡ್ ಪ್ಲಸ್ ಔಷದ ಅಂಗಡಿ ಟಾರ್ಗೆಟ್ ಮಾಡಿದ ಕಳ್ಳರು ಒಟ್ಟು 1,57,000 ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿ ಆಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಹಾಗೆ ನವನಗರ ಪೊಲೀಸ್ ಠಾಣಾ ಹಾಗೂ ವಿದ್ಯಾನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ಟವರ್ ಗಳಿಗೆ ಅಳವಡಿಸಿದ 24 ಬ್ಯಾಟರಿ ಹಾಗೂ 07 RSU ಕಾರ್ಡ್ ಗಳ ಒಟ್ಟು 4,17,000/- ಕಿಮ್ಮತ್ತಿನ ವಸ್ತುಗಳು ಹಾಗೂ ಕೃತ್ಯಕ್ಕೆ ಬಲಿಸಿದ ಒಂದು ಸ್ಕೂಟಿ ಕೂಡ ವಶಪಡಿಸಿಕೊಂಡ್ಡು ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಬುಲ್ಲೆಟ್ ಬೈಕ್ ಟಾರ್ಗೆಟ್ ಮಾಡಿ ಕಳ್ಳತನ ಮಾಡುತಿದ್ದ ಇಬ್ಬರು ಸಂಘರ್ಷಕ್ಕೆ ಒಳಗಾದ ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 8,00,000/- ಕಿಮ್ಮತ್ತಿನ ಮೂರು ಬುಲ್ಲೆಟ್ ಬೈಕ್ ಗಳನ್ನೂ ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಸಂತೋಷ ಕ ಪವಾರ ಅವರ ನೇತೃತ್ವದಲ್ಲಿ ವಿದ್ಯಾನಗರ ಠಾಣೆಯ ಪಿ.ಎಸ್.ಐ ಶ್ರೀಮಂತ ಹುಣಸಿಕಟ್ಟಿ, ಪೊಲೀಸ ಸಿಬ್ಬಂದಿಗಳಾದ ರಮೇಶ ಹಲ್ಲೆ, ಸುನೀಲ ಲಮಾಣಿ, ಶಿವಾನಂದ ಎನ್.ತಿರಕಣ್ಣವರ, ಸಯ್ಯದಅಲಿ ತಹಶೀಲ್ದಾರ, ವಾಯ್ ಎಮ್. ಶೆಂಡೈ, ಎಸ್.ಬಿ.ಯಳವತ್ತಿ., ಎನ್.ಬಿ.ನಾಯ್ ವಾಡಿ, ಮಂಜುನಾಥ ಏಣಗಿ ಹಾಗೂ ಶರಣಗೌಡಾ ಮೂಲಿಮನಿ ಇವರ ಕಾರ್ಯ ವೈಖರಿಯನ್ನು ಮಾನ್ಯ ಪೊಲೀಸ ಆಯುಕ್ತ ರಮನ್ ಗುಪ್ತಾ ಅವರು ಶ್ಲಾಘಿಸಿದ್ದಾರೆ.

