Breaking News

ನೀರಿನ ಸಮಸ್ಯೆ ಪರಿಹರಿಸಲು 31ರಂದು ಪಾಲಿಕೆ ಎದುರಿಗೆ ಪ್ರತಿಭಟನೆ

ಧಾರವಾಡ 29 : ನಗರದಲ್ಲಿ ನೀರು ಸರಬರಾಜು ಸಮಸ್ಯೆ ಉಲ್ಬಣಗೊಂಡಿದ್ದು , ಈ ಸಮಸ್ಯೆಯನ್ನು ಪರಿಹರಿಸಲು ಮಹಾನಗರ ಪಾಲಿಕೆ ಮತ್ತು ನೀರು ಸರಬರಾಜು ಮಂಡಳಿ , ಎಲ್ & ಟಿ ಸಂಸ್ಥೆಯವರನ್ನು ಒತ್ತಾಯಿಸಲು ಧಾರವಾಡ ನಗರದ 11 ನೇ ವಾರ್ಡಿನ ನಾಗರಿಕ ಸಂಘಗಳ ಒಕ್ಕೂಟ, ಧಾರವಾಡ – ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘ ಮತ್ತು ಇತರ ವಾರ್ಡನ ಸಂಘಗಳ ಜಂಟಿ ಆಶ್ರಯದಲ್ಲಿ ಇದೇ ದಿ. 31 ರಂದು ಬೆಳಿಗ್ಗೆ 11.00 ಗಂಟೆಗೆ ಧಾರವಾಡ ಮಹಾನಗರ ಪಾಲಿಕೆಯ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಗಳು ಭೀಮಸೇನ್ ಕಾಗಿ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೀರು ಸರಬರಾಜು ಸರಿ ಮಾಡುವದು ಮತ್ತು ಧಾರವಾಡ ನಗರದಲ್ಲಿ ವಿವಿಧ ಬಡಾವಣೆಗಳಲ್ಲಿ ಕಾಯಿಪಲ್ಲೆ ಸಂತೆಗಳನ್ನು ಮಾಡುವದಕ್ಕಾಗಿ ಧಾರವಾಡ ವಲಯ I ರ ಸಹಾಯಕ ಕಮೀಶನರರಿಗೆ ಹಲವಾರು ಬಾರಿ ಮನವಿ ಕೊಟ್ಟಿದ್ದರೂ ಅದಕ್ಕೆ ಅವರು ಸ್ಪಂದಿಸದೇ ಇರುವದನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಧಾರವಾಡ ನಗರ ಇತರ ಬಡಾವಣೆಗಳ ನಿವಾಸಿ ಸಂಘಗಳು ಮತ್ತು ಸಂಘಟನೆಗಳು ನಮ್ಮನ್ನು ಬೆಂಬಲಿಸಲು ಕೋರಲಾಗಿದೆ . ಇತರ ಇದಕ್ಕಾಗಿ 11 ನೇ ವಾರ್ಡಿನ ನಾಗರಿಕ ಸಂಘದ ಕಾರ್ಯಾಧ್ಯಕ್ಷರು ಎಮ್.ಬಿ. ಕಟ್ಟೆ . ಮೋಬೈಲ್ 99805 53516 ಪ್ರಧಾನ ಕಾರ್ಯದರ್ಶಿಗಳು ಭೀಮಸೇನ್ ಕಾಗಿ 90197 52653 ಮತ್ತು ರಮೇಶ ಇಟ್ನಾಳ್ ಮೋ : 94490 75069 ಇವರನ್ನು ಸಂಪರ್ಕಿಸಲು ಕೋರಿದೆ ಎಂದರು.

ಅಲ್ಲದೇ ಧಾರವಾಡ ಹುಬ್ಬಳ್ಳಿ ಮಹಾನಗರ ಸಮಗ್ರ ಅಭಿವೃದ್ಧಿ ಸಂಘದವರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು ಸಂಘದ ಅಧ್ಯಕ್ಷರು ವಿಠಲ ಕಮ್ಮಾರ 95133 55239 ಇವರನ್ನೂ ಕೂಡಾ ಸಂಪರ್ಕಿಸಲು ಕೋರಲಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿ,ಎಸ್ ಬ್ಯಾಡಗಿ,ಶಿವಕಿರಣ ಅಡಗಿ,ಡಾ ಬಸವರಾಜ ಸಿದ್ದಾಶ್ರಮ್ ನಾಗೇಶ ಕಟಕೋಳ,ಆರ್ ಎಮ್ ಹೋಸಮನಿ ಉಪಸ್ಥಿತರಿದ್ದರು.

Share News

About BigTv News

Check Also

ನನ್ನ ಮೇಲೆ ಹನಿಟ್ರ್ಯಾಫ್ ಗೆ ಯತ್ನ ; ಸಚಿವ ರಾಜಣ್ಣ

ಕರ್ನಾಟಕ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಫ್ ಬಲೆಗೆ ಬಿಳಿಸುವ ಯತ್ನ ನಡೆದಿದೆ ಏನೋ ಸುದ್ದಿ ಬಾರಿ ಸದ್ದು ಮಾಡಿದ್ದು. ಸಹಕಾರ ಸಚಿವ …

Leave a Reply

Your email address will not be published. Required fields are marked *

You cannot copy content of this page