Breaking News

ಮಿಲ್ಲತ್ತ ನಗರದಲ್ಲಿ ನಡೆದ ಬಾಲಕನ ಕೊಲೆಯ ಆರೋಪಿಯ ಬಂಧನ

ಹುಬ್ಬಳ್ಳಿ : ಮಿಲ್ಲತ್ತ ನಗರದಲ್ಲಿ ನಡೆದ ಬಾಲಕನ ಕೊಲೆಯ ಆರೋಪಿಯನ್ನು ಬಂದನ ಮಾಡುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಭೇದಿಸುವಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ . ಹುಬ್ಬಳ್ಳಿ ಸೆಟ್ಲಮೆಂಟ್ ನ ನಿವಾಸಿ ರವಿ ವೆಂಕಟೇಶ ಬಳ್ಳಾರಿ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ , ಕಳೆದ ಗುರುವಾರ ಸಂಜೆ 5 ಗಂಟೆಗೆ ಮಿಲ್ಲತ್ತ ನಗರದ ಬಳಿ ಇರುವ ಆಟದ ಮೈದಾನದ ಬಳಿಯಲ್ಲಿ ಆಡುತ್ತಿದ್ದ ಬಾಲಕ ನದೀಮ್ ಆರೋಪಿ ರವಿಯನ್ನು 5 ರೂಪಾಯಿ ಕೊಡು ಅಂದಿದ್ದ. ಅದೇ ರೀತಿಯಾಗಿ ರವಿ ಬಾಲಕನಿಗೆ 5ರೂಪಾಯಿ ಕೂಡಾ ಕೊಟ್ಟಿದ್ದ ಆದ್ರೆ ಬಾಲಕ ನದೀಮ್ ಇನ್ನು 5 ರೂಪಾಯಿ ಕೊಡು ಅಂತಾ ರವಿಗೆ ದುಂಬಾಲು ಬಿದ್ದಿದ್ದ. ಆದ್ರೆ ರವಿ 5 ರೂಪಾಯಿ ಕೊಡದೆ ಇದ್ದಾಗ ನದೀಮ್ ರವಿಗೆ ಬೈದಿದ್ದಾನೆ . ಇದರಿಂದ ಕೋಪಗೊಂಡ ರವಿ ನದೀಮ್ ಕೆನ್ನೆಗೆ ಹೊಡೆದ ಪರಿಣಾಮ ನದೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ನಂತರ ಬಾಲಕ ಮೇಲೆ ಏಳದೆ ಇದ್ದಾಗ , ಶವವನ್ನು ಮೈದಾನದಲ್ಲಿ ಇದ್ದ ಪೊದೆಯೊಳಗೆ ಎಸೆದು ಶವದ ಮೇಲೆ ಕಲ್ಲು ಹಾಕಿ ಪೈಶಾಚಿಕ ಕೃತ್ಯ ಮೆರೆದು ಅಲ್ಲಿಂದ ಕಾಲ್ಕಿತ್ತಿದ್ದ,

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪೊಲೀಸರು ಎಲ್ಲ ಮಾಹಿತಿಗಳನ್ನು ಕಲೆ ಹಾಕಿದಾಗ ಆರೋಪಿಯಾದ ರವಿ ವೆಂಕಟೇಶ ಬಳ್ಳಾರಿ ಈ ರೀತಿಯಾದ ಪೈಶಾಚಿಕ ಕೃತ್ಯ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿ ಈ ಹಿಂದೆ ಕೂಡಾ ಪೋಕ್ಲೋ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ ಸದ್ಯ ಪೊಲೀಸರು ಆರೋಪಿಯನ್ನು ಬಂಧನ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ .

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *