ಹುಬ್ಬಳ್ಳಿ: ಮಜೇಥಿಯಾ ಫೌಂಡೇಶನ್ ಹಾಗೂ ಕೆಸಿಟಿಆರ್’ಐ ಸಹಯೋಗದೊಂದಿಗೆ ಇಲ್ಲಿನ ನವನಗರದ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಉಚಿತವಾದ ಹಾಸ್ಪೈಸ್ – ಪ್ಯಾಲಿಯೆಟಿಸ್ ಕೇಂದ್ರ ಪ್ರಾರಂಭಿಸಲಾಗಿದ್ದು, ಇದರಲ್ಲಿನ ರಮಿಲಾ ಪ್ರಶಾಂತಿ ಮಂದಿರ ಉದ್ಘಾಟನೆ ಸಮಾರಂಭವನ್ನು ಏ.6 ರಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹಾಸ್ಪೈಸ್ ಕೇಂದ್ರದ ವ್ಯವಸ್ಥಾಪಕ ಸಮಿತಿಯ ಟ್ರಸ್ಟಿಗಳಾದ ಡಾ.ಕೆ.ರಮೇಶ ಬಾಬು ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಿನ ಉದ್ಘಾಟನೆ ಕಾರ್ಯಕ್ರಮಕ್ಕೆ ಕೊಪ್ಪಳದ ಸಂಸ್ಥಾನ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕರುಣಾಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಗುರುಮಿತ್ ಸಿಂಗ್ ರಾಂಧವಾ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ, ಕೆಸಿಟಿಆರ್’ಐ ಅಧ್ಯಕ್ಷ ಡಾ.ಬಿ.ಆರ್.ಪಾಟೀಲ್ ಆಗಮಿಸಲಿದ್ದಾರೆ, ಅಧ್ಯಕ್ಷತೆಯನ್ನು ಜಿತೇಂದ್ರ ಮಜೇಥಿಯಾ ವಹಿಸಲಿದ್ದಾರೆ ಎಂದರು.
ಇನ್ನು ಹಾಸ್ಪೈಸ್ ವ್ಯಕ್ತಿಗಳ ಅನಾರೋಗ್ಯವು ಯಾವುದೇ ರೀತಿಯ ಗುಣಪಡಿಸುವ ಚಿಕಿತ್ಸೆ ಸಾಧ್ಯವಾಗದ ಹಂತವನ್ನು ತಲುಪಿದಾಗ, ಅಂತಹ ರೋಗಿಗಳನ್ನು ಆರಾಮ, ಶಾಂತಿ ಮತ್ತು ಸಾಂತ್ವನವನ್ನು ಒದಗಿಸುವ ಮೂಲಕ ನಿರ್ವಹಿಸಲಾಗುತ್ತದೆ. ಅಂತಹ ಆರೈಕೆಯ ವ್ಯವಸ್ಥೆಯನ್ನು ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಟ್ರಸ್ಟಿಗಳಾದ ಎಚ್.ಆರ್.ಪ್ರಲ್ಹಾದ್ ರಾವ್, ಅಮೃತ ಪಟೇಲ್, ಅಜಿತ್ ಕುಲಕರ್ಣಿ, ಡಾ.ವಿ.ಬಿ.ನಿಟಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
