ಹುಬ್ಬಳ್ಳಿ: ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಏಪ್ರಿಲ್ 13 ರಂದು ನಾಮ ಪತ್ರ ಸಲ್ಲಿಕೆ ದಿನ ಆರಂಭ, ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ನಾಮ ಪತ್ರ ಪರಿಶೀಲನೆ ಏಪ್ರಿಲ್ 21 ಕ್ಕೆ. ನಾಮ ಪತ್ರ ಹಿಂಪಡೆಯುವ ಕೊನೆಯ ದಿನಾಂಕ ಏಪ್ರಿಲ್ 24. ಇವುಗಳು ಚುನಾವಣೆಯ ನಿಯಮಗಳು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಚುನಾವಣಾ ಅಧಿಕಾರಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಹೇಳಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೇ 10 ಕ್ಕೆ ಮತದಾನ ನಡೆಯುತ್ತದೆ. ಮೇ 13 ಕ್ಕೆ ಮತ ಏಣಿಕೆ ನಡೆಯುತ್ತದೆ. ಮೇ 15ಕ್ಕೆ ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳುತ್ತದೆ ಎಂದರು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಮತ ಕ್ಷೇತ್ರದಲ್ಲಿ 2,46,177 ಮತದಾರರಿದ್ದಾರೆ. ಈ ಮತಗಳಲ್ಲಿ 1, 21,927 ಗಂಡು ಮತದಾರರು, 1,24,063 ಹೆಣ್ಣು ಮತದಾರರು, ಹಾಗೂ ಇತರೆ 38 ಜನರಿದ್ದಾರೆ. ಗಂಡು ಸೇವಾ ಮತದಾರರು 79 ಜನರಿದ್ದಾರೆ. ಹೆಣ್ಣು ಸೇವಾ ಮತದಾರರು 8 ಜನರಿದ್ದಾರೆ. ಇನ್ನು ಏಪ್ರಿಲ್ 1 ಕ್ಕೆ ಯಾರು 18 ವರ್ಷ ಆಗಿರುತ್ತೋ ಅವರನ್ನು ಕೂಡ ಮತದಾರರ ಪಟ್ಟಿಗೆ ತೆಗೆದುಕೊಳಲಾಗುತ್ತದೆ ಎಂದರು.