ಹುಬ್ಬಳ್ಳಿ: ಸೈಬರ್ ಕ್ರೈಮ್ ವಂಚನೆಗೆ ಒಳಗಾದವರು ಒಂದು ಗಂಟೆಯ ಒಳಗಾಗಿಯೇ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಲ್ಲದೇ ಸೈಬರ್ ವಂಚನೆಗಳು ಪೇಸ್ ಲೇಸ್ ಪ್ರಕರಣಗಳಾಗಿದ್ದು, ಜನರು ವ್ಯವಹಾರ ಮಾಡುವಾಗ ಸಾಕಷ್ಟು ಜಾಗರೂಕತೆಯಿಂದ ಮಾಡಬೇಕು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸೈಬರ್ ಪ್ರಕರಣಗಳಲ್ಲಿ ಸಾರ್ವಜನಿಕರ ಎಚ್ಚರಿಕೆಯಿಂದ ಇರಬೇಕು. ಪ್ರಕರಣ ನಡೆದ ತಕ್ಷಣವೇ 1930ಗೆ ಕರೆ ಮಾಡಿ ದೂರನ್ನು ನೀಡಬೇಕು ಅವರು ಕೂಡ ಒಂದು ಗಂಟೆಯ ಒಳಗಾಗಿಯೇ. ಅಲ್ಲದೇ ಸಾಕಷ್ಟು ಜಾಗೃತರಾಗುವುದು ನಿಜಕ್ಕೂ ಅವಶ್ಯವಾಗಿದೆ ಎಂದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕೆಲವೊಂದು ಪೊಲೀಸ್ ಠಾಣೆಗಳು ಬಾಡಿಗೆ ಇರುವ ಹಿನ್ನೆಲೆಯಲ್ಲಿ ಹೊಸ ಕಟ್ಟಡದ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಚುನಾವಣಾ ಬಂದೋಬಸ್ತ್ ಬಗ್ಗೆ ಚರ್ಚೆ ಮಾಡಿ ಮಾಧ್ಯಮಕ್ಕೆ ಮಾಹಿತಿ ನೀಡುತ್ತೇನೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಟೆಕ್ನಾಲಜಿ ಬಳಕೆ ಮಾಡುವ ಮೂಲಕ ಕ್ರೈಮ್ ಗಳಿಗೆ ಕಡಿವಾಣ ಹಾಕುವ ಕಾರ್ಯವನ್ನು ಮಾಡುತ್ತಿದ್ದೇವೆ. ಅಲ್ಲದೆ ಜನರಿಗೆ ಅವಶ್ಯಕ ಇರುವ ಬಗ್ಗೆ ಕೂಡ ಸಾಕಷ್ಟು ಬದಲಾವಣೆ ತಂದಿದ್ದೇವೆ ಎಂದು ಅವರು ಹೇಳಿದರು.

