Breaking News

ಒಬ್ಬೊಬ್ಬ ಕಾರ್ಯಕರ್ತ ವಿನಯ ಕುಲಕರ್ಣಿಯಾಗಿ ಕೆಲಸ ಮಾಡಬೇಕು- ಶಿವಲೀಲಾ ಕುಲಕರ್ಣಿ

ಧಾರವಾಡ: ಕಾಂಗ್ರೆಸ್ ಪಕ್ಷದಿಂದ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ವಿನಯ್ ಕುಲಕಣಿ೯ ಟಿಕೆಟ್ ಘೋಷಣೆ ಮಾಡಿದ್ದೆ ತಡ,ತಾಲೂಕಿನ ಶಿವಳ್ಳಿಯ ಗ್ರಾಮದೇವಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ವಿನಯ ಕುಲಕರ್ಣಿಯವರ ಅನುಪಸ್ತಿತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಶ್ರೀಮತಿ ಶಿವಲೀಲಾ ವಿನಯ‌ ಕುಲಕರ್ಣಿಯವರು ಚಾಲನೆ ನೀಡಿದರು. ಮನೆ ಮನೆಗೆ ತೆರಳಿ ವಿನಯ ಕುಲಕರ್ಣಿಯವರ ಪರವಾಗಿ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು, ವಿನಯ ಕುಲಕರ್ಣಿಯವರ ಜನಪ್ರೀಯತೆ ಯನ್ನು ಸಹಿಸಲಾರದ ಕುತಂತ್ರಿಗಳು, ಷಡ್ಯಂತ್ರ ಮಾಡಿ ಅವರಿಗೆ ಧಾರವಾಡಕ್ಕೆ ಬರದ ಹಾಗೇ ನಿರಂತರ ಪ್ರಯತ್ನ ಮಾಡುತ್ತಿದ್ದು, ತಾವೆಲ್ಲಾ ಕಾರ್ಯಕರ್ತರು ಒಬ್ಬೊಬ್ಬ ಕಾರ್ಯಕರ್ತ ವಿನಯ ಕುಲಕರ್ಣಿಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ನಮ್ಮ ಗೆಲುವು ನಿಶ್ಚಿತವಾಗಿದ್ದು,ತಾವೆಲ್ಲ ಶ್ರಮ ವಹಿಸಿ ದುಡಿಯಬೇಕು. ನೀವೆ ನಮ್ಮ ಶಕ್ತಿ ಎಂದರು. ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ ಮುಖಂಡರುಗಳಾದ ಪರಮೇಶ್ವರ ಕಾಳೆ, ಅಣ್ಣಪ್ಪ ಚಿನಗುಡಿ, ಶಿವಾನಂದ ಲಂಬಿ, ಸಿದ್ದು ಮುಳ್ಳೂರ, ಫಿರೋಜ ನಾಯ್ಕರ, ಶಿವಪ್ಪ ತಳವಾರ, ಪಾರೂಕ ಜಮಾದಾರ, ಶಂಕರವ್ವ ಮಲ್ಲಿಗವಾಡ ,ಜಯಪ್ಪ ಮುದ್ದಿ, ಮಂಜು ಸುಳ್ಳದ, ಮುಂತಾದವರು ಉಪಸ್ಥಿತರಿದ್ದರು.

Share News

About BigTv News

Check Also

ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಧಾರವಾಡ: 2024-25 ನೇ ಸಾಲಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಲ್ಯಾಪ್‍ಟಾಪ್ ಯೋಜನೆಯಡಿ ಸೌಲಭ್ಯವನ್ನು ಒದಗಿಸಲು ಸಫಾಯಿ …

Leave a Reply

Your email address will not be published. Required fields are marked *

You cannot copy content of this page