ಹುಬ್ಬಳ್ಳಿ: ಕಲಘಟಗಿ ಟಿಕೆಟ್ ಕೊನೆಗೂ ನಾಗರಾಜ್ ಛಬ್ಬಿ ಪಾಲಾಗಿದೆ. ಇದರಿಂದ ಹಾಲಿ ಶಾಸಕ ಸಿಎಂ ನಿಂಬಣ್ಣವರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶಾಸಕ ಸಿಎಮ್ ನಿಂಬಣ್ಣವರ ಮನೆಗೆ ಭೇಟಿ ನೀಡಿದ ನಾಗರಾಜ್ ಛಬ್ಬಿ, ಸಿ ಎಂ ನಿಂಬಣ್ಣವರ್ ಕಾಲು ಮುಟ್ಟಿ ನಮಸ್ಕಾರ ಮಾಡಿ, ನಿಂಬಣ್ಣವರ್ ಮನವೊಲಿಕೆ ಮಾಡಿ ಚರ್ಚೆ ನಡೆಸಿದರು.
ಟಿಕೆಟ್ ವಂಚಿತ ಶಾಸಕ ಸಿಎಮ್ ನಿಂಬಣ್ಣನವರ್ ಮಾತನಾಡಿದ್ದು, ನಾಗರಾಜ ಛಬ್ಬಿ ನನ್ನ ಮನೆಗೆ ಬಂದಿದ್ದರು, ಅತಿಥಿಗಳು ಮನೆಗೆ ಬಂದಾಗ ಸತ್ಕಾರ ಮಾಡುವ ನಮ್ಮ ಧರ್ಮ ಮಾಡಿದ್ದೇನೆ. ಅವರು ಚುನಾವಣೆ ಸ್ಪರ್ಧಿಸಲು ಪಕ್ಷದ ಟಿಕೆಟ್ ತಂದಿದ್ದಾರೆ, ಅವರಿಗೆ ಒಳಿತಾಗಲಿ. ನಾಗರಾಜ ಛಬ್ಬಿಗೆ ಅಡ್ಡಿಪಡಿಸುವುದಿಲ್ಲ, ಅವರ ವಿರುದ್ಧ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ನನ್ನ ಹೋರಾಟ ಸ್ಥಳೀಯ ಬಿಜೆಪಿ ಅಭ್ಯರ್ಥಿ ವಿರುದ್ಧ ಇಲ್ಲ. ನನ್ನದೇನಿದ್ದರು ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆ ಹೋರಾಟ ಎಂದಿದ್ದಾರೆ.
ಸಿಎಮ್ ನಿಂಬಣ್ಣವರಿಗೆ ಸ್ವಲ್ಪ ನೋವಿದೆ. ಎರಡು ಮೂರು ದಿನದಲ್ಲಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡ್ತೀವಿ. ಸಿಎಮ್ ನಿಂಬಣ್ಣವರ ಸಪೋರ್ಟ್ ಮಾಡ್ತಾರೆ, ಸ್ವಲ್ಪ ನೋವಿತ್ತು ಹೇಳಿಕೊಂಡಿದ್ದಾರೆ. ಅದೆಲ್ಲ ಸರಿ ಹೋಗುತ್ತೆ. ಕಾಂಗ್ರೆಸ್ ನಲ್ಲಿದ್ದೆ ಬಿಜೆಪಿ ಹೊಸ ಮನೆ, ಯಾವದೂ ಸರಿ ತಪ್ಪು ನೊಡಕೊಂಡು ಹೋಗ್ತಿನಿ. ಬಿಜೆಪಿಯಲ್ಲಿರೋ ಉತ್ಸಾಹ ಕಾಂಗ್ರೆಸ್ ನಲ್ಲಿ ನಾನು ನೋಡಿಲ್ಲ.ಇಲ್ಲಿ ಬಂದು ನಾನ ಏನೂ ಮಾಡಲ್ಲ, ಕಾರ್ಯಕರ್ತರು ಜೋಶ್ ಇದ್ದಾರೆ ಎಂದು ನಾಗರಾಜ್ ಛಬ್ಬಿ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





