ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಗೆ ಟಿಕೆಟ್ ಸಿಗತ್ತೆ ಅನ್ನೋ ವಿಶ್ವಾಸ ಇದೆ. ನಾನು ಹಾಗೂ ಶೆಟ್ಟರ್ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಶೆಟ್ಟರ್ ಗೆ ಟಿಕೆಟ್ ಸಿಗತ್ತೆ ಅನ್ನೋ ನೀರಿಕ್ಷೆ ಇದೆ. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಎಲ್ಲವೂ ಸುಲಲಿತವಾಗಿ ಪರಿಹಾರ ಆಗತ್ತೆ ಎಂಬ ವಿಶ್ವಾಸವಿದೆ ಎಂದರು.
ಭಾರತೀಯ ಜನತಾ ಪಾರ್ಟಿಯಲ್ಲಿ 52 ಜನ ಹೊಸ ಮುಖಕ್ಕೆ ಕೊಡಲಾಗಿದೆ. ಕಾಂಗ್ರೆಸ್ ನಂತೆ ವಂಶಕ್ಕೆ ಟಿಕೆಟ್ ಕೊಡಲ್ಲ. ಅಪ್ಪಮಕ್ಕಳಿಗೆ ಟಿಕೆಟ್ ಕೊಡಲ್ಲ.ಸವದಿ ಕಾಂಗ್ರೆಸ್ ಗೆ ಹೋಗಬಾರದು ಅನ್ನೋದು ನಮ್ಮ ಅಪೇಕ್ಷೆ ಇದೆ. ಸವದಿ ಅವರಿಗೆ ನಮ್ಮ ಪಾರ್ಟಿ ಎಲ್ಲವನ್ನು ಕೊಟ್ಟಿದೆ. ಕಾಂಗ್ರೆಸ್ ಯುಸ್ ಆ್ಯಂಡ್ ಥ್ರೋ ಪಾರ್ಟಿ. ಸವದಿ ಅವರನ್ನ ನಮ್ಮ ಪಾರ್ಟಿ ಉಪಮುಖ್ಯಮಂತ್ರಿ ಮಾಡಿದ್ದೇವೆ. ಇಲ್ಲಿ ಅವರಿಗೆ ಉತ್ತಮ ಭವಿಷ್ಯ ಇತ್ತು. ದಯವಿಟ್ಟು ಅಲ್ಲಿಗೆ ಹೋಗುವದು ಬೇಡ ಎಂದರು.
ಬಿಜೆಪಿಯಲ್ಲಿ ಟಿಕೆಟ್ ಬಹಳ ರಶ್ ಇತ್ತು. ಹಾಗಾಗಿ ಕೆಲ ಕಡೆ ಗೊಂದಲ ಆಗಿದೆ. ಯಾವ ಪಾರ್ಟಿ ಗೆಲ್ಲುತ್ತೆ, ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. 90 ಪರ್ಸೆಂಟ್ ಸಮಸ್ಯೆ ಬಗೆಹರಿಯತ್ತೆ. ಇಂದು ನಾಳೆ ಸಮಸ್ಯೆ ಬಗೆಹರಿಯತ್ತೆ. ಭಾರತೀಯ ಜನತಾ ಪಾರ್ಟಿ ಎಮೋಷನಲ್ ಕಾರ್ಯಕರ್ತರು ನಮ್ಮ ಜೊತೆ ಇರ್ತಾರೆ ಎಂದರು.
ನಾಡಿನ ಜನತೆಗೆ ಅಂಬೇಡ್ಕರ್ ಜಯಂತಿಯ ಶುಭಾಶಯ ತಿಳಿಸಿದ ಅವರು, ಅಂಬೇಡ್ಕರ್ ಬಲವಾದ ಆರ್ಥಿಕ ಬುನಾದಿ ಹಾಕಿದ್ದಾರೆ. ಅಂಬೇಡ್ಕರ್ ಅವರಿಗೆ ಸಿಗಬೇಕಾದ ಪ್ರಾಶಸ್ತ್ಯ ಕಾಂಗ್ರೆಸ್ ಕಾಲದಲ್ಲಿ ಸಿಕ್ಕಿರಲಿಲ್ಲ. ನಾವು ಅಂಬೇಡ್ಕರ್ ಹುಟ್ಟಿದ ಸ್ಥಳ ,ಅಧ್ಯಯನ ಸ್ಥಳ ಅಭಿವೃದ್ಧಿ ಮಾಡಿದ್ದೇವೆ. ಅವರಿಗೆ ಗೌರವ ಕೊಡೋ ಕೆಲಸ ನಮ್ಮ ಸರ್ಕಾರ ಮಾಡಿದೆ. ದೇಶದಲ್ಲಿ ಉತ್ತಮ ಸರ್ಕಾರ ಇದೆ. ಮೋದಿ ಪ್ರಧಾನಿ ಆಗಲಿಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ ಎಂದರು.
