ಹುಬ್ಬಳ್ಳಿ: ಲಕ್ಷ್ಣಣ ಸವದಿ ಕಾಂಗ್ರೆಸ್ ಸೇರಿರೋದ್ರಿಂದ ಅನಕೂಲ ಆಗಿದೆ ಎಂದು ಏರಪೋರ್ಟ್ ನಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಉತ್ತರ ಕರ್ನಾಟಕದಲ್ಲಿ ಸಹಾಯ ಆಗತ್ತೆ ಎಂದಿದ್ದಾರೆ. ಸವದಿ ಸೀನಿಯರ್ ಲೀಡರ್ ಅವರಿಗೆ ಬಿಜೆಪಿಯಲ್ಲಿ ಅವಮಾನ ಆಗಿದೆ. ಹಾಗಾಗಿ ಪಕ್ಷಕ್ಕೆ ಬಂದಿದ್ದಾರೆ..
ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡ, ಹಾಗೂ ಜಗದೀಶ್ ಶೆಟ್ಟರ್ ಕಡೆ ಇಂದ ಯಾರೂ ನಮ್ಮನ್ನ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಪಟ್ಟಿ ಇವತ್ತು ಇಲ್ಲ ನಾಳೆ ಆಗಬಹುದು ಎಂದು ಬೆಳಗಾವಿಯ ಯಮನಕರಡಿಯಲ್ಲಿ ಪ್ರಚಾರ ಸಭೆಗೆ ಹೊರಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಮಳೆ ಹಿನ್ನಲೆ ಹುಬ್ಬಳ್ಳಿ ಏರಪೋರ್ಟ್ ನಲ್ಲಿ ವಿಮಾನ ಲ್ಯಾಂಡ್ ಆಗಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.