ಹುಬ್ಬಳ್ಳಿ: ಒಂದೆಡೆ ಶೆಟ್ಟರ್ ನಿವಾಸದಲ್ಲಿ ಜೋಶಿಯಿಂದ ಸಂಧಾನ ಸಭೆ ನಡೆದಿದ್ದು, ಮತ್ತೊಂದೆಡೆ ನಿವಾದ ಹೊರಗೆ ಕಾರ್ಯಕರ್ತರ ಆಕ್ರೋಶ ಮುಗಿಲೆರುತ್ತಿದೆ.
ಶೆಟ್ಟರ್ ಗೆ ಟಿಕೇಟ್ ನೀಡಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಟಿಕೆಟ್ ನೀಡದೇ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಜಗದೀಶ ಶೆಟ್ಟರ್ ಗೆ ಟಿಕೆಟ್ ನೀಡೋ ವಿಚಾರವಾಗಿ ಮಹಿಳೆ ಕಣ್ಣೀರು ಸುರಿಸಿದ್ದು, ಟಿಕೆಟ್ ನೀಡದೇ ಹೋದಲ್ಲಿ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮಹಿಳಾ ಕಾರ್ಯಕರ್ತೆ ಎಚ್ಚರಿಕೆ ನೀಡಿದ್ದಾರೆ.


