Breaking News

ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ-ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಬೆಳಿಗ್ಗೆ ಎಲ್ಲ ಕಾರ್ಯಕರ್ತರ ಸಭೆ ಕರೆದಿದ್ದೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ನಮ್ಮ ಜೊತೆ ಸಮಾಲೋಚನೆ ಮಾಡಲು ಸಿಎಂ, ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ ಅವರು ನಮ್ಮ ಮನೆಗೆ ಬರಲಿದ್ದಾರೆ. ಮೂವರೂ ಸೇರಿ ನಮ್ಮ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸಮಾಲೋಚನೆ ನಂತರ ನಿರ್ಧಾರ ಪ್ರಕಟ ಮಾಡಲಿದ್ದೇವೆ.

ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಇದೆ. ಕುಟುಂಬದಲ್ಲಿ ಯಾರಿಗೂ ಟಿಕೆಟ್ ನೀಡುವ ಪ್ರಮೇಯ ಇಲ್ಲ. ಸ್ಪರ್ಧೆ ಮಾಡುವುದಿದ್ದರೆ ನಾನೇ ಮಾಡುತ್ತೇನೆ ಎಂದು ಹೇಳಿದ್ದೇನೆ. ಮುಂದಿನ ನಿರ್ಧಾರದ ತಯಾರಿ ಮಾಡಿ ಕೊಂಡಿದ್ದೇನೆ. ಮೂವರೂ ನಾಯಕರು ಮನೆಗೆ ಬಂದು ಏನು ಮಾತನಾಡುತ್ತಾರೆ ಕಾಯ್ದು ನೋಡುತ್ತೇನೆ. ಅವರು ಬಂದು ಸಮಾಲೋಚನೆ ನಡೆಸಿದ ನಂತರ ನಿರ್ಧಾರ ಬಗ್ಗೆ ತಿಳಿಸುತ್ತೇನೆ.

ಒಬ್ಬ ಶಾಸಕನಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ. ಸ್ಪೀಕರ್ ಕಾಗೇರಿ ಅವರ ಬಳಿ ಭೇಟಿಯಾಗಲು ಸಮಯ ಕೇಳಿದ್ದೆ, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆ ಹೋಗಲು ಆಗಿಲ್ಲ. ಇವತ್ತಿನ ಚರ್ಚೆಯಿಂದ ಇದು ಅಂತಿಮವಾಗುತ್ತೆ.

ನಾಮಪತ್ರ ಸಲ್ಲಿಸಲು ಇನ್ನೂ 20 ರವರೆಗೂ ಟೈಂ ಇದೆ. ಸ್ಪರ್ಧೆಯಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂಬ ಸಂದೇಶವನ್ನಾ ಶೆಟ್ಟರ್ ನೀಡಿದ್ದಾರೆ.

Share News

About BigTv News

Check Also

ಹಲ್ಲೆ ಪ್ರಕರಣ: ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ ವಜಾ..

Bangalore ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ನಿರೀಕ್ಷಣಾ ಜಾಮೀನು ಅರ್ಜಿ …

Leave a Reply

Your email address will not be published. Required fields are marked *

You cannot copy content of this page