ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಿದ ಜಗದೀಶ್ ಶೆಟ್ಟರ್ ಗೆ ಬಿಜೆಪಿಯಲ್ಲಿ ಬಾರಿ ಅಪಮಾನ ಮಾಡಲಾಗಿದೇ ಆದ್ದರಿಂದ ನನಗೆ ಬಹಳ ನೋವುಂಟು ಮಾಡಿದೇ ಎಂದು ಪತ್ನಿ ಶಿಲ್ಪಾ ಶೆಟ್ಟರ್ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೇ ಈಗ ಬಿಜೆಪಿಯಲ್ಲಿ ತಳಮಳ ಸೃಷ್ಟಿಯಾಗಿದ್ದು, ಪತ್ನಿ ಶಿಲ್ಪಾ ಶೆಟ್ಟರ್ ತಮ್ಮ ಪತಿ ಬಗ್ಗೆ ಮನದಾಳದ ಮಾತನ್ನಾಡಿದ್ದಾರೆ. ಸುಮಾರು ವರ್ಷಗಳಿಂದ ಪಕ್ಷ ಕಟ್ಟಿದವರಿಗೆ ಟಿಕೆಟ್ ಕೇಳುವ ಪರಿಸ್ಥಿತಿ ಬಂದಿದ್ದು ನನಗೆ ಬೇಸರವಾಗಿದೆ. ಇನ್ನೂ ಅದೆಷ್ಟೋ ದಿನ ಅವರಿಗೆ ಅಪಮಾನ ಮಾಡುತ್ತಾರೆ ನೋಡೊಣಾ, ನನ್ನ ಜೊತೆ ಶೆಟ್ಟರ್ ಅಳಲು ತೋಡಿಕೊಂಡಿದ್ದಾರೆ. ನನಗೆ ಬಹಳ ಅವಮಾನ ಮಾಡಿತ್ತಿದ್ದಾರೆ. ನಾನು ರಾಜಕೀಯ ಬಿಡುತ್ತೇನೆ ಎಂದು ಹೇಳಿದ್ದರು. ಅಂತಹ ಪರಿಸ್ಥಿತಿ ತರಲು ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದ್ದರಿಂದ ನಮ್ಮ ಯಜಮಾನರ ನಿರ್ಣಾಯಕ್ಕೆ ನಾನು ಬದ್ದ ಎಂದರು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.