ಧಾರವಾಡ: ಶ್ರೀ ಸಾಯಿ ಮಹಿಳಾ ಸೇವಾ ಸಂಘ ರಾಜನಗರ ಗುಲಗಂಜಿಕೊಪ್ಪ ವಾರ್ಷಿಕೋತ್ಸವ ಭಾರತ ಹೈಸ್ಕೂಲ್ ನ ಸಭಾ ಭವನದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ರೇಷ್ಮೆ ಮಾರಟ ಮಂಡಳಿ ಅಧ್ಯಕ್ಷೆ ಶ್ರೀಮತಿ ಸವಿತಾ ಅಮರಶೆಟ್ಟಿ ಅಗಮಿಸಿ ಕಾರ್ಯ ಕ್ರಮ ಉದ್ಘಾಟಿಸಿ, ನಮ್ಮ ಸಂಘದ ಕಾರ್ಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಹೆಣ್ಣು ಮಕ್ಕಳು ಇನ್ನೂ ಮುಂದೆ ಎಲ್ಲರಂಗದಲ್ಲಿಯೂ ಬರಬೇಕಿದೆ ಎಂದು ಹೇಳಿದರು. ನಮ್ಮ ಸಂಘದ ಎಲ್ಲಾ ಕಾರ್ಯಕ್ಕು ಬೆನ್ನೆಲಬಾಗಿ ಸದಾ ಇರುವೆ ಎಂದು ಭರವಸೆ ಕೊಟ್ಟರು.ಈ ಸಂದರ್ಭದಲ್ಲಿ ರಾಜೇಶ್ವರಿ ಅಳಗವಾಡಿ, ಗರಿಜಾ ಶೆಟ್ಟರ ಶಿಶೆಕಲಾ ತೊರಲಿ, ಸಂಘದ ಅಧ್ಯಕ್ಷರಾದ ಶ್ರೀ ಮತಿ ಸುನಂದಾ ಶೆಲ್ಲಿಕೆರಿ, ಉಪಾಧ್ಯಕ್ಷೆ ಶಶ ಲತಾ ಹಳೆಮನಿ, ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
