Breaking News

ಗೂಂಡಾ ಕಾಯಿದೆ ಅಡಿಯಲ್ಲಿ ಚೇತನ ಹಿರೇಕೆರೂ ಅರೆಸ್ಟ್

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಹಾಗೂ ಜಿಲ್ಲಾಡಳಿತದಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗೂಂಡಾ ಕಾಯಿದೆ ಅಡಿಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಚೇತನ ಹಿರೇಕೆರೂರನ್ನು ಗೋಕುಲ ರೋಡ್ ಪೊಲೀಸರು ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿದ್ದಾರೆ.

ಈಗಾಗಲೇ ಜಿಲ್ಲೆಯಿಂದ ಸುಮಾರು ಹತ್ತು ಜನರನ್ನು ಗಡಿಪಾರು ಮಾಡಿದ್ದು, ಚುನಾವಣೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗ್ರತೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಈ ಹಿಂದೆ ಕೂಡ ಕೆಲವೊಂದು ಪ್ರಕರಣಗಳಲ್ಲಿ ಭಾಗಿಯಾಗಿರುವ ಚೇತನ ಹಿರೆಕೇರೂರು ಪಾಲಿಕೆಯ ಚುನಾಯಿತ ಪ್ರತಿನಿಧಿಯೂ ಆಗಿದ್ದಾನೆ.

ಇನ್ನೂ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ನಾಮಪತ್ರ ಸಲ್ಲಿಸುವ ರ್ಯಾಲಿಯಲ್ಲಿ ಭಾಗಿಯಾಗಿದ್ದ ಪಾಲಿಕೆ ಸದಸ್ಯನ ಬಂಧನವಾಗಿದ್ದು, ಗೂಂಡಾ ಕಾಯ್ದೆ ಅಡಿ ಕಾರ್ಪೋರೇಟರ್ ಬಂಧಿಸಿ ಬೆಳಗಾವಿ ಹಿಂಡಲಗಾ ಜೈಲ್ ಗೆ ಕಳಿಸಿದ್ದಾರೆ ಎಂಬುವಂತ ಮಾಹಿತಿ ಲಭ್ಯವಾಗಿದೆ.

Share News

About BigTv News

Check Also

SSLC PUC ಉದ್ಯೋಗ ಸುದ್ದಿ

ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಮತ್ತು ಜಾನುವಾರು …

Leave a Reply

Your email address will not be published. Required fields are marked *

You cannot copy content of this page