Breaking News

ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ನೆಗೆಟೀವ್ ಕ್ಯಾಂಪೇನ್ ಎದುರಿಸಿದ್ದೇನೆ- ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ರಾಹುಲ್ ಗಾಂಧಿ ಹುಬ್ಬಳ್ಳಿಗೂ ಪ್ರಚಾರಕ್ಕೆ ಬರಬಹುದು.ಉತ್ತರ ಕರ್ನಾಟಕದ ಪ್ರವಾಸಕ್ಕೆ ನಿಮ್ಮನ್ನು ಜೋಡಣೆ ಮಾಡ್ತೀವಿ. ಪ್ರವಾಸಕ್ಕೆ ಅಂತಾ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ.

ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ಆಗಿದೆ. ಚುನಾವಣೆ ಅಂದ ಮೇಲೆ ನೆಗೆಟೀವ್, ಪಾಜಿಟೀವ್ ಕ್ಯಾಂಪೇನ್ ಇದ್ದೆ ಇರುತ್ತೆ. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ನೆಗೆಟೀವ್ ಕ್ಯಾಂಪೇನ್ ಎದುರಿಸಿದ್ದೇನೆ. ಸೋಷಿಯಲ್ ಮೀಡಿಯಾದಲ್ಲಿ ಇರುವವರು ಮನೆಯಲ್ಲಿ ಕುಳಿತು ಬರೆಯುತ್ತಾರೆ. ಅದು ಜನರ ಮೇಲೆ ಇಂಪ್ಯಾಕ್ಟ್ ಆಗಲ್ಲಾ. ಜನರ ಮುಂದೆ ಹೋಗಿ ಕ್ಯಾಂಪೇನ್ ಮಾಡಬೇಕು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.

ನಾಗಪುರದಿಂದ ಯಾರೇ ಬಂದರೂ ಅವರಿಂದ ಯಶಸ್ವಿ ಚುನಾವಣೆ ಮಾಡಲು ಅಗಾಲ್ಲಾ. ಸ್ಥಳೀಯವಾಗಿ ನಮಗೆ ಗುರುತಿರುತ್ತೆ, ಹೊರಗಿನಿಂದ ಬಂದವರಿಗೆ ನಾಲೇಜ್ ಇರಲ್ಲಾ. ತಿಳಿದುಕೊಳ್ಳುವಷ್ಟರಲ್ಲಿ ಎಲೆಕ್ಷನ್ ಮುಗಿದಿರುತ್ತೆ, ಅನುಭವದಲ್ಲಿ ಇದನ್ನೆಲ್ಲಾ ನೋಡಿದ್ದೇನೆ.

ನಾಗಪುರದಿಂದ ನೂರಾರು ಜನರ ತಂಡ‌ಬಂದಿದೆ ಅಂತಾ ಹೇಳ್ತಾರೆ, ಆದರೆ ನಾನು ನೋಡಿಲ್ಲ. ಆಕಸ್ಮಾತ್ ಬಂದಿದ್ರೆ ನಾನೊಂದು ಹೇಳ್ತೀನಿ. ಇತ್ತೀಚೆಗೆ ನಾಗಪುರದಲ್ಲಿ ಪದವೀಧರರ ಕ್ಷೇತ್ರದ ಚುನಾವಣೆ ನಡೀತು, ಇಷ್ಟೆಲ್ಲಾ ಎಕ್ಸ್‌ಪರ್ಟ್ ಇರುವವರು ನಾಗಪುರದ ಪದವೀಧರರ ಚುನಾವಣೆಯಲ್ಲಿ ಯಾಕೆ ಸೋತರು? ತಿಳಿಸಲಿ.

ನಾನು ಕಾನೂನು ಬಾಹಿರ ಕೆಲಸ ಮಾಡಲ್ಲಾ, ನನ್ನ ಚಲನವಲನದ ಮೇಲೆ ಏನು‌ ನಿಗಾ ಇಡ್ತಾರೆ? ಲಿಂಗಾಯತರಿಗೆ ಈ ಬಾರಿ ಹೆಚ್ಚು ಟಿಕೆಟ್ ಕೊಡಲಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಜೊತೆ ನಾನು ಮಾತಾಡ್ತೇನೆ. ಕಾಂಗ್ರೆಸ್ ವರಿಷ್ಠರು ಈಗಾಗಲೆ ಅವರ ಜೊತೆ ಮಾತಾಡಿದ್ದಾರೆ, ಎಲ್ಲಾ ಸರಿ ಹೋಗುತ್ತೆ. ಹುಬ್ಬಳ್ಳಿ – ಧಾರವಾಡ ಕೇಂದ್ರ ಕ್ಷೇತ್ರದ ಜನ ನನ್ನ ಜೊತೆ ಇದ್ದಾರೆ. ಕಾಂಗ್ರೆಸ್ ಪಾರ್ಟಿ ನನ್ನ ಜೊತೆ ಶಕ್ತಿಯಾಗಿ ನಿಂತಿದೆ. ಜನರ ಆಶಿರ್ವಾದ ನನ್ನ ಜೊತೆ ಇರುವವರೆಗೆ ಯಾರೂ ನನ್ನನ್ನು ಸೋಲಿಸಲು ಅಗಾಲ್ಲಾ. ಯಾರೇ ನನ್ನನ್ನು ಟಾರ್ಗೆಟ್ ಮಾಡಿದ್ರು ನಾನು ತಲೆ ಕೆಡಿಸಿಕೊಳ್ಳಲ್ಲಾ. ನಾನು ಜನರ ಮಧ್ಯೆ ಇದ್ದು ಕೆಲಸ ಮಾಡ್ತೀನಿ, ಜನರ ವಿಶ್ವಾಸ ನನ್ನ ಜೊತೆಗಿದೆ. ಹೀಗಾಗಿ ನಾನು ಗೆದ್ದು ಬರ್ತೀನಿ. ಲಿಂಗಾಯತರ ಬಗ್ಗೆ ಸಿದ್ದರಾಮಯ್ಯ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ನೋಡದ ವಿಷಯಗಳ ಬಗ್ಗೆ ನಾನು ಕಮೆಂಟ್ ಮಾಡಲ್ಲಾ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.

Share News

About BigTv News

Check Also

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ: ಅವಳಿನಗರದಲ್ಲಿ ಹೆಚ್ಚಿದ ಬೆಟ್ಟಿಂಗ್ ಭರಾಟೆ

ಹುಬ್ಬಳ್ಳಿ: ಲೋಕ ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಜೋರಾಗಿದೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕಾಂಚಾಣ ಕುಣಿಯುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್‌ಗಳ …

Leave a Reply

Your email address will not be published. Required fields are marked *

You cannot copy content of this page