Breaking News

ಕಾಂಗ್ರೆಸ್ ನವರು ಅಧಿಕಾರದ ಮದಲಿನಲ್ಲಿ ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ-ಸಿಎಮ್

ಹುಬ್ಬಳ್ಳಿ: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ, ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ. ಇನ್ನು ಅಧಿಕಾರದ ಮದದಲ್ಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಸಿಎಮ್ ಬಸವರಾಜ ಬೊಮ್ಮಾಯಿ ವಾಗ್ದಾಳಿ.

ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ. ವೋಟ್ ಬ್ಯಾಂಕ್ ಅಂತಾ ತಿಳಿದುಕೊಂಡು ಏನ್ ಬೇಕಾದರೂ ಮಾತಾಡಿದ್ರೆ ನಡೆಯತ್ತೆ ಅನ್ನೋ ಅಮಲಿನಲ್ಲಿ ಇದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಎಲ್ಲಕಿಂತ ನೋವಾಗಿರೋದು ಸಿದ್ದರಾಮಯ್ಯ ಖರ್ಗೆ ಮಾತಾಡಿರೋದು.

ಸಿದ್ದರಾಮಯ್ಯ ಖರ್ಗೆ 50 ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ. ಕೊನೆಯ ಹಂತದಲ್ಲಿ ಗೌರವ ಯುತವಾಗಿ ನಡೆದುಕೊಂಡರಿಗೆ ಶೋಭೆ ತರತ್ತೆ. ಇಲ್ಲದಿದ್ದರೆ ಜನ ಇಷ್ಟು ವರ್ಷ ಇವರು ಏನ್ ಮಾಡಿದ್ರು ಅಂತಾ ಕೇಳ್ತಾರೆ.

ಮೋದಿ ಅವರನ್ನು ಯಾವಾಗ ಬೈದ್ರು, ಅವಾಗ ಮೋದಿ ವೋಟ್ ಜಾಸ್ತಿ ಆಗಿವೆ. ಮುಖ್ಯಮಂತ್ರಿ ಆದಾಗ ಬೈದರು, ಮೋದಿ ಮೂರು ಬಾರಿ ಮುಖ್ಯಮಂತ್ರಿ ಆದರೂ, ಪ್ರಧಾನ ಮಂತ್ರಿ ಆದರು. ಇದೀಗ ವಿಷ ಸರ್ಪ ಜನರ ಭಾವನೆ ಕೆರಳುಸತ್ತಿದ್ದಾರೆ. ಜನ ತಕ್ಕ ಪಾಠ ಕಲಿಸುತ್ತಾರೆ.

ಸಿದ್ದರಾಮಯ್ಯ ಸಹಜ ನನ್ನ ಟಾರ್ಗೆಟ್ ಮಾಡೋದು. ಅವರ ವೋಟ್ ಬ್ಯಾಂಕ್ ಛಿದ್ರ ಆಗಿದೆ. ಅವರ ವೋಟ್ ಬ್ಯಾಂಕ್ SC ST. ಅವರ ಕಾಲ ಕೆಳಗೆ ಇದ್ದ ವೋಟ್ ಸರಿದು ಹೋಗಿದೆ. ಹಾಗಾಗಿ ನನ್ನ ಟಾರ್ಗೆಟ್ ಡ್ಯಾಂ ಒಡೆದಿದ್ದು ಕಾಂಗ್ರೆಸ್ ದು ಎಂದು ಸಿಎಂ ಹೇಳಿದರು.

‌SC ST OBC ವೋಟ್ ಅವರ ಕೈ ತಪ್ಪಿ ಅವರ ಡ್ಯಾಂ ಒಡೆದಿದೆ. ಸಿದ್ದರಾಮಯ್ಯ ಇದೀಗ ಡಿಕೆ ಶಿವಕುಮಾರ್ ಗೆ ಪೈಪೋಟಿ ಕೊಡ್ತೀದಾರೆ‌. ಆ ಮಟ್ಟಕ್ಕೆ ಸಿದ್ದರಾಮಯ್ಯ ಇಳದೀದ್ದಾರೆ. ಆಂತರಿಕವಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಜೊತೆ ಪೈಪೋಟಿಗೆ ಇಳದಿದ್ದಾರೆ. ಸಿದ್ದರಾಮಯ್ಯ ಮೇಲೆ 8 ಸಾವಿರ ಕೋಟಿ ಭ್ರಷ್ಟಾಚಾರ ಆರೋಪ ಇದೆ. ಅದಕ್ಕೆ ಉತ್ತರ ಕೊಡಬೇಕಾಗತ್ತೆ ಎಂದು ಹೀಗೆ ಮಾತಾಡ್ತಿದಾರೆ. ನನ್ನ ಮೇಲೆ ಏನಾದರೂ ಇದ್ದರೆ ಹೇಳಲಿ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.

Share News

About BigTv News

Check Also

ಪಿಎಸ್‌ಐ-ಪಿಸಿ ಮೇಲೆ ಲೋಕಾಯುಕ್ತ ದಾಳಿ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ!

ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …

Leave a Reply

Your email address will not be published. Required fields are marked *