Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / _ಬಂಗಾಳಿ ಆಹಾರ ಸವಿಯೋದಕ್ಕೆ ಅದ್ಭುತ ಅವಕಾಶ- ಅಕ್ಟೋಬರ್ ೧೯-೨೮ರವರೆಗೆ ಫುಡ್ ಫೆಸ್ಟಿವಲ್

_ಬಂಗಾಳಿ ಆಹಾರ ಸವಿಯೋದಕ್ಕೆ ಅದ್ಭುತ ಅವಕಾಶ- ಅಕ್ಟೋಬರ್ ೧೯-೨೮ರವರೆಗೆ ಫುಡ್ ಫೆಸ್ಟಿವಲ್

Spread the love

ಹುಬ್ಬಳ್ಳಿ ಮಹಾನಗರ ಜನತೆಯ ಸೇವೆಗೆ ಸಮರ್ಪಣೆಗೊಂಡಿರುವ ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಹೊಸ ಅಭಿರುಚಿಯ ಖಾದ್ಯ ಪದಾರ್ಥಗಳನ್ನು ಸವಿಯಲು ಇದೇ 19 ರಿಂದ 28ರ ವರೆಗೆ ಬಂಗಾಳಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಟೇಲ್ ವ್ಯವಸ್ಥಾಪಕ ಆರ್.ಕೆ.ಮಹಾರಾಣಾ ತಿಳಿಸಿದರು.ನಗರದಲ್ಲಿಂದು ಕ್ಲಾರ್ಕ್ಸ್ ಇನ್ ಹೋಟೆಲನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಭಾರಿ ಹಮ್ಮಿಕೊಳ್ಳಲಾಗಿರುವ ಬಂಗಾಳಿ ಆಹಾರ ಮೇಳದಲ್ಲಿ ಸೂಪ, ತರಕಾರಿ ಸಲಾಡ್ಸ್, ಉಪ್ಪು, ಖಾರಾ, ಹುಳಿಯ ಚಾರ್ಟ್ಸ್, ಮೇದಿನಾ ಪುರೇನಾ, ಚಿಂಗಡಿ ಚೂಪ, ಭೇಟಕಿ ಮಚ್ಚೀರ ಭಾಜಾ, ದಾರ್ಜಲಿಂಗ್ ಸಸ್ಯಹಾರಿಯ ಸ್ಪ್ರಿಂಗ್ ರೋಲ್, ಬೇಹಾಲೇಹರ ಚಿಕನ್, ಪಕೋಡಾ, ಬ್ಯಾಂಕುರಾರ ಆಲು ಚೂಪ, ಎಗ್ಗ ದೇವಲ್, ದಾರ್ಜಲಿಂಗ್ ದೀಮ್ ಸಮ್, ಪಾರ್ಕ ಸ್ಟ್ರೀಟ್ ಮೊಘಾಲಯಿ, ನದಿರಾ ಜಾಂಗಿ ಆಲು ಪೋಸ್ಟೋ, ಲೂಚಿ ಜೊತೆಗೆ ಛೊಲರ ದಾಲ, ಪಿಪಿ ಸಸ್ಯಹಾರಿ ಸೇರಿದಂತೆ ಹಲವಾರು ಬಗೆಯ ಭಕ್ಷ ಭೋಜನಗಳು ಮೇಳದಲ್ಲಿ ದೊರೆಯುತ್ತವೆ ಎಂದರು.ಬಂಗಾಳದ ಅಡುಗೆಯಲ್ಲಿ ವಿಶೇಷ ಪರಿಣಿತ ಹೊಂದಿರುವ ಬಾಣಸಿಗರು ಸಂಜಯ ಮೊಂದಲ ನೇತೃತ್ವದ ತಂಡ ಹೊಟೇಲಗೆ ಆಗಮಿಸಿದೆ ಎಂದು ಅವರು ಹೇಳಿದರು. ಊಟದ ದರವನ್ನು ವಯಸ್ಕರಿಗೆ 499 ರೂಪಾಯಿ ಹಾಗೂ 249 ರುಪಾಯಿ ದರವನ್ನು ನಿಗದಿಪಡಿಸಲಾಗಿದ್ದು, ಸಸ್ಯಹಾರಿ ಹಾಗೂ ಮಂಸಹಾರಿ ಖಾಧ್ಯಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. 44 ವಿಧದ ಖಾದ್ಯಗಳ ವ್ಯವಸ್ಥೆ ಮಾಡಲಾಗಿದೆ ಅಲ್ಲದೇ ಮೆನು ಬದಲಾವಣೆ ಕೂಡ ಮಾಡಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಾಜು ಕೋಟಿ, ಪ್ರದೀಪ, ಸಂಜಯ ಮಂದೂಲಿ ಸೇರಿದಂತೆ ಇತರರು ಇದ್ದರು.ಈ ಸಂದರ್ಭದಲ್ಲಿ ಪ್ರದೀಪ್, ಕೋಟಿ, ಸಂಜಯ ಮೊಂಡಲ ಸೇರಿದಂತೆ ಇತರರು ಇದ್ದರು.

Check Also

ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ: ಪ್ರಮೋದ್​ ಮುತಾಲಿಕ್​

Spread the loveವಿಜಯಪುರ: ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!