Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸರ್ಕಾರದ ನಡೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ.‌

ಸರ್ಕಾರದ ನಡೆ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ.‌

 

ಧಾರವಾಡ: ವಿಶ್ವವಿದ್ಯಾಲಯಗಳಲ್ಲಿ ಇಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಶನ್ ಸಿಸ್ಟಮ್ (EDGS) ತಂತ್ರಾಂಶ ಬಳಸುವ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ 156 ರೂ ಗಳನ್ನೂ ವಿದ್ಯಾರ್ಥಿಗಳಿಂದ ವಸೂಲಿಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ದೇಶದ ಬೇರೆ ಬೇರೆ ರಾಜ್ಯಗಳಿಂದ ಶಿಕ್ಷಣ ಪಡೆಯಲು ನಮ್ಮ ರಾಜ್ಯಕ್ಕೆ ಬರುತ್ತಾರೆ. ಆದರೆ ಇದೆಲ್ಲದರ ನಡುವೆ ಇಂದು ಸರ್ಕಾರ ವಿದ್ಯಾರ್ಥಿಗಳು ಅಂಕಪಟ್ಟಿಯಿಂದ ಹಣ ಮಾಡಲು ಹೊರಟಿರುವುದನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ.2019 ರ ಮೇ.5 ರಂದು ಎಲೆಕ್ಟ್ರಾನಿಕ್ ಡ್ಯಾಕ್ಯುಮೆಂಟ್ಸ್ ಜನರೇಷನ್ ಸಿಸ್ಟಮ್ ತಂತ್ರಾಂಶವನ್ನು ಬಳಸಲು ಎಮ್ ಎಸ್ ಕಿಯೋನಿಕ್ಸ್ ಸಂಸ್ಥೆಗೆ ವಹಿಸಲು ಸೂಚಿಸಲಾಗಿದೆ. ಅದನ್ನು ಎಬಿವಿಬಿ ಸ್ವಾಗತಿಸುತ್ತದೆ.ಆದರೆ ಇದರ ಹೆಸರಿನಲ್ಲಿ ಪ್ರತಿ ಅಂಕಪಟ್ಟಿಗೆ 156 ರೂ ಗಳನ್ನು ಪ್ರತಿ ವಿದ್ಯಾರ್ಥಿಯಿಂದ ವಸೂಲಿ ಮಾಡಲು ಹೊರಟಿರುವುದನ್ನು ಖಂಡಿಸುತ್ತದೆ.1 ರೊಗಳಿಂದ 3 ವರೆಗೆ ಬೇರೆ ಬೇರೆ ವಿವಿಗಳಲ್ಲಿ ಅಂಕಪಟ್ಟಿಗೆ ಖರ್ಚು ಮಾಡುತ್ತಿದ್ದನು ಸರಾಸರಿ 156 ದೊರೆಯುತ್ತಾರೆ.ರೂ.ಗಳಿಗೆ ಏರಿಕೆ ಮಾಡಿ ಆದೇಶ ಹೊರಡಿಸಿರುವುದು ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಈ ಕೂಡಲೇ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು, ಅಂಕಪಟ್ಟಿ ತಯಾರಿಸಿಸುವ ಹೊರಗುತ್ತಿಗೆಯಲ್ಲಿ ಆಗುತ್ತಿರುವ ಮೋಸಕ್ಕೆ ಕಡಿವಾಣ ಹಾಕಿ ಒಂದು ಪ್ರತಿಗೆ ಇಷ್ಟಂತೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು, ಹಾಗೂ ರಾಜ್ಯದ ವಿವಿಯಲ್ಲಿರುವ ಸಂಪನ್ಮೂಲಗಳ ಬಳಸಿ digitalization ಮುಂದಾಗಬೇಕಾಗಬೇಕೆಂದು ಆಗ್ರಹಿಸಿ ವಿವಿ ಕುಲಪತಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಹನುಮಂತ ಬಗಲಿ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!