Hiring Reporter’s For more Information Contact Above Number 876 225 4007 . Program producer
Home / Breaking News / ಬಿಆರ್ ಟಿಎಸ್ ಅವವ್ಯಸ್ಥೆ ವಿರುದ್ಧ ಎಎಪಿ ವಿನೂತನ ಪ್ರತಿಭಟನೆ

ಬಿಆರ್ ಟಿಎಸ್ ಅವವ್ಯಸ್ಥೆ ವಿರುದ್ಧ ಎಎಪಿ ವಿನೂತನ ಪ್ರತಿಭಟನೆ

Spread the love

ಹುಬ್ಬಳ್ಳಿ; ಹುಧಾ ನಡುವಿ‌ನ ಬಿಆರ್ ಟಿಎಸ್ ಕಳಪೆ ಕಾಮಗಾರಿಗೆ ಅಂತ್ಯ ಎಂಬುಂದೆ ಕಂಡುಬರುತ್ತಿಲ್ಲ. ಇದೀಗ ಸನಾ ಕಾಲೇಜು ಪಕ್ಕದ ಬಿಆರ್ ಟಿಎಸ್ ಬಸ್ ನಿಲ್ದಾಣದಲ್ಲಿ ಅವೈಜ್ಞಾನಿಕ ಪಾದಚಾರಿ ಅಂಡರ್ ಪಾಸ್ ನಿರ್ಮಾ ಣದಿಂದ ಅಂಡರ್ ಪಾಸ್ ನಲ್ಲಿ ನೀರು ನಿಂತು ಕೆರೆಯಂತಾಗಿದ್ದು, ಜನರ ಸಂಚಾರಕ್ಕೆ ಸಂಚಕಾರವಾ ಗಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ ಇಂದು ಕಸಬರಗಿಯಿಂದ ಸ್ವಚ್ಛಗೊಳಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿತು.

ಇಲ್ಲಿನ ಬೈರಿದೇವರಕೊಪ್ಪದ ಸನಾ ಕಾಲೇಜು ಪಕ್ಕದ ಬಿಅರ್ ಟಿಎಸ್ ಅಂಡರ್ ಪಾಸ್ ಸಂಪೂರ್ಣ ಹದಗೆಟ್ಟು ಹೋಗಿದ್ದು, ಇದರ ಅದ್ವಾನದಿಂದಾಗಿ ಜನರು ಪ್ರಾಣ ಹಿಡಿದು ರಸ್ತೆ ದಾಟುವಂತಾಗಿದೆ. ಇನ್ನೂ ಯೋಜನೆಯಲ್ಲಿ ಏಕೈಕ ಅಂಡರ್ ಪಾಸ್ ಇದಾಗಿದ್ದರು ಸಹ ಅದರ ನಿರ್ವಹಣೆಯಲ್ಲಿ ಬಿಆರ್ ಟಿಎಸ್ ಎಡವಿದೆ. ಕಳೆದ ಒಂದು ವರ್ಷದಿಂದ ಅಂಡರ್ ಪಾಸ್ ನಲ್ಲಿ ನೀರು ನಿಂತು ಕೆರೆಯಂತಾಗಿದ್ದು, ಜನರ ಆರೋಗ್ಯದ ಜೊತೆಗೆ ಚೆಲ್ಲಾಟ ಮಾಡುತ್ತಿತ್ತು, ಇನ್ನೂ ಬಿಆರ್ ಟಿಎಸ್ ಬಸ್ ನಿಲ್ದಾಣ ದಿಂದ ಬಸ್ಸು ಇಳಿದು ರಸ್ತೆ ದಾಟಲು ಇರುವ ಏಕೈಕ ದಾರಿ ಎಂದರೆ ಅದು ಅಂಡರ್ ಪಾಸ್, ಆ ರಸ್ತೆಯ ಸ್ಥಿತಿಯೇ ಹದಗೆಟ್ಟ ಕಾರಣ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಂಡರ್ ಪಾಸ್ ಸ್ವಚ್ಛಗೊಳಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಸ್ವಚ್ಛ ಭಾರತ ಘೋಷಣೆ ಮಾಡುವ ನಾಯಕರು ಬಿಆರ್ ಟಿಎಸ್ ಅಂಡರ್ ಪಾಸ್ ಕಣ್ಣಿಗೆ ಬಿದ್ದಂತೆ ಕಂಡುಬಂದಿಲ್ಲ ಎನಿಸುತೆ, ಜನಸ್ನೇಹಿಯಾಗಬೇಕಿದ್ದ ಪಾದಚಾರಿ ಅಂಡರ್ ಪಾಸ್ ಜನವಿರೋಧಿಯಾಗಿದೆ. ಪಾದಾದಾರಿ ಅಂಡರ್ ಪಾಸ್ ನಲ್ಲಿ ನಾಮಫಲಕ ವಿಲ್ಲ, ಲೈಟ್ ಇಲ್ಲ, ಸಿಸಿ ಟಿವಿ ಇದ್ದರೂ ಕ್ಯಾಮರಾ ಇಲ್ಲ. ಇದರಿಂದ ಮಹಿಳೆಯರು, ಸಾರ್ವಜನಿಕ ರಕ್ಷಣೆ ಹೇಗೆ.? ಸ್ಮಾರ್ಟ್ ಸಿಟಿಯ ಜಪ ಮಂತ್ರಿಸುವ ನಾಯಕರಿಗೆ ಪಾದಚಾರಿ ರಸ್ತೆ ಸರಿಪಡಿಸುವ ಇಚ್ಛೆ ಇಲ್ಲವೇ? ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು ಹಾಗೂ ಶಾಸಕರು ಕಾಡಿಕಾರ್ ಗೆ ಭೇಟಿ ನೀಡಿ‌ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ಎಎಪಿ ಆಗ್ರಹ ಮಾಡುವುದು.

ಇನ್ನು ಬಿಆರ್ ಟಿಎಸ್ ಪದಾಚಾರಿ ಅಂಡರ್ ಪಾಸ್ ಅವ್ಯವಸ್ಥೆ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ ಮಾಡುವ ಸುದ್ದಿ ತಿಳಿದ ಅಧಿಕಾರಿಗಳು ಬೆಳಂಬೆಳ್ಳಿಗ್ಗೆಯೇ ಕೆರೆಯಂತಾದ ಅಂಡರ್ ಪಾಸ್ ನ‌‌ಲ್ಲಿನ ನೀರನ್ನು ತೆರವುಗೊಳಿಸಿದ್ದಾರೆ. ಇದು ಎಎಪಿ ಪಕ್ಷಕ್ಕೆ ಸಿಕ್ಕ ಜಯವಾಗಿದೆ. ಇನ್ನೂ ಪೂರ್ಣಪ್ರಮಾಣದ ಸಮಸ್ಯೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಆಪ್ ನ ಮುಖಂಡರು, ಕಾರ್ಯಕರ್ತರು ಜನವಿರೋಧಿ ಬಿಆರ್ ಟಿಎಸ್ ವಿರುದ್ಧ, ಹಾಗೂ ಕುಂಬಕರ್ಣ ನಿದ್ದೆಗೆ ಜಾರಿದ ಜನಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗ್ಗುತ್ತ ಅಂಡರ್ ಪಾಸ್ ಕಾರಿಡಾರ್ ನ್ನು ಸ್ವಚ್ಛ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ, ಕಾರ್ಯಕಾರಿ ಸಮಿತಿಯ ಸದಸ್ಯ ಅನಂತಕುಮಾರ ಭಾರತೀಯ, ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಶಶಿಕುಮಾರ್ ಸುಳ್ಳದ, ಯುವ ಘಟಕದ ಉಸ್ತುವಾರಿ ಡೇನಿಯಲ್ ಐಕೋಸ್, ಶಿವಕಿರಣ ಅಗಡಿ, ವಿನಾಯಕ ಚೌಹಾಣ, ಪ್ರವೀಣ ತೊಂಡಿಹಾಳ, ಶಿವಕುಮಾರ್ ಬಾಗಲಕೋಟ, ಆದಿತ್ಯ ನಾಯಕ, ಮೊಹಮ್ಮದ್ ಅರಾಫತ್, ಅಭಿಷೇಕ ಲದ್ವಾ ಸೇರಿದಂತೆ ಮುಂತಾದವರು ಇದ್ದರು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!