Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಸಡಗರ ಸಂಭ್ರಮದಿಂದ ನಡೆದ ಶ್ರೀ ವೀರಭದ್ರೆಶ್ವರ ಸ್ವಾಮಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆ.

ಸಡಗರ ಸಂಭ್ರಮದಿಂದ ನಡೆದ ಶ್ರೀ ವೀರಭದ್ರೆಶ್ವರ ಸ್ವಾಮಿಯ ಉತ್ಸವ ಮೂರ್ತಿ ಭವ್ಯ ಮೆರವಣಿಗೆ.

 

ಮಂಡ್ಯ: ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಉತ್ಸವ ಮೂರ್ತಿಯ ವೈಭವದ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು.
ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನವು ಮೆರವಣಿಗೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.
ರಾಜ್ಯಪ್ರಶಸ್ತಿ ಪುರಸ್ಕೃತ ಡಾ.ರುದ್ರೇಶ್ ಪ್ರಸಾದ್ ಅವರ ವೀರಭದ್ರ ನೃತ್ಯವು ನೆರೆದಿದ್ದ ನೂರಾರು ಭಕ್ತರು ಹಾಗೂ ಸಾರ್ವಜನಿಕರಲ್ಲಿ ಭಕ್ತಿಯ ಪರಾಕಾಷ್ಠೆಯನ್ನು ಮೂಡಿಸಿತ್ತು.
ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಬಸವರಾಜಗುರೂಜಿ ಮೆರವಣಿಗೆ ಹಾಗೂ ಪೂಜಾ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
ಕೃಷ್ಣರಾಜಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ
ಯಕ್ಷಗಾನದ ಗಾರುಡಿಗೊಂಬೆಗಳು, ಡೊಳ್ಳುಕುಣಿತ, ಕೋಲಾಟ, ಪೂಜಾ ಮತ್ತು ಪಟ ಕುಣಿತವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು.

Share

About Vijayalakshmi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!