Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಅನರ್ಹ ಶಾಸಕ ನಾರಾಯಣಗೌಡರ ಅಭಿಮಾನಿಗಳಿಂದ ಬೃಹತ್ ಕಾರ್ಯಕರ್ತರ ಸಭೆ.‌

ಅನರ್ಹ ಶಾಸಕ ನಾರಾಯಣಗೌಡರ ಅಭಿಮಾನಿಗಳಿಂದ ಬೃಹತ್ ಕಾರ್ಯಕರ್ತರ ಸಭೆ.‌

ಮಂಡ್ಯ: ಜಿಲ್ಲೆಯ ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರವಾದ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ಅನರ್ಹಶಾಸಕ ಡಾ. ನಾರಾಯಣಗೌಡರ ಬಳಗ ಹಾಗೂ ಅಭಿಮಾನಿಗಳ ವತಿಯಿಂದ ಬೃಹತ್ ಕಾರ್ಯಕರ್ತರ ಸಭೆಯು ನಡೆಯಿತು.
ಮೈತ್ರಿ ಸರ್ಕಾರದ 14ತಿಂಗಳ ಆಡಳಿತದಲ್ಲಿ ಅನುಭವಿಸಿದ ಮಾನಸಿಕ ಯಾತನೆ ಹಾಗೂ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅನುದಾನವನ್ನು ನೀಡದ ಹಿನ್ನೆಲೆಯಲ್ಲಿ ಮನನೊಂದು ಬೇಸತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ತಾಲ್ಲೂಕಿನ ಅಭಿವೃದ್ಧಿಗೆ ಒಂದು ಸಾವಿರ ಕೋಟಿರೂಪಾಯಿಗಳ ವಿಶೇಷ ಅನುದಾನವನ್ನು ನೀಡಿದ್ದಾರೆ.
ತಾಲ್ಲೂಕಿನ ಇತಿಹಾಸದಲ್ಲಿಯೇ ಸಾಮಾನ್ಯ ನಿಷ್ಠಾವಂತ ಕಾರ್ಯಕರ್ತರಾದ ಕೆ.ಜೆ.ತಮ್ಮಣ್ಣ ಮತ್ತು ಕೆ.ಶ್ರೀನಿವಾಸ್ ಅವರಿಗೆ ಜಿಲ್ಲಾ ಮಟ್ಟದಲ್ಲಿ ಮನ್ ಮುಲ್ ಮತ್ತು
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಟ್ಟಿದ್ದಾರೆ.
ಸಾಮಾನ್ಯ ಸಾಮಾಜಸೇವಕನಾಗಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದ
ನನ್ನನ್ನು ಕ್ಷೇತ್ರದ ಶಾಸಕನನ್ನಾಗಿ ಮಾಡಿದ ತಾಲ್ಲೂಕಿನ ಜನತೆಗೆ ಹಾಗೂ ಮತದಾರ ಬಂಧುಗಳಿಗೆ ಮೋಸ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ನನ್ನ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದೇನೆ. ತಾಲ್ಲೂಕಿನ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರು ನಾಡಿನ ಮುಖ್ಯಮಂತ್ರಿಗಳಾಗಿರುವ ಈ ಸಂದರ್ಭದಲ್ಲಿ
ನನ್ನನ್ನು ಮತ್ತೊಮ್ಮೆ ಶಾಸಕನನ್ನಾಗಿ ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮನವಿ ಮಾಡಿದರು.
ಹಣ ಆಸ್ತಿ ಮಾಡಲು ರಾಜಕಾರಣ ಮಾಡುತ್ತಿಲ್ಲ ಬಿಜೆಪಿ ಪಕ್ಷಕ್ಕೆ ಸೇಲ್ ಆಗಿಲ್ಲ.‌ಹಸಿದವರಿಗೆ ಊಟ ಹಾಕುವುದು ನಮ್ಮ ಸಂಸ್ಕೃತಿ.
ನಾನು ಬಿಜೆಪಿ ಪಕ್ಷಕ್ಕೆ ಸೇಲ್ ಆಗಿದ್ದೇನೆ.
ಹಣಕ್ಕಾಗಿ ರಾಜಕಾರಣ ಮಾಡ್ತಿದ್ದಾನೆ ಎಂದು ವಿರೋಧಿಗಳು ಟೀಕೆ ಮಾಡ್ತಾರೆ. ನಾನು ಯಾವುದೇ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಬಂಗಲೆಯನ್ನು ಕಟ್ಟಿಲ್ಲ.
ದಲಿತರ ಭೂಮಿಯನ್ನು ನುಂಗಿ ನೀರು ಕುಡಿದಿಲ್ಲ, ನನ್ನ ಜಮೀನಿಗೆ ಹೋಗಲು ಸರ್ಕಾರದ ಹಣದಿಂದ ರಸ್ತೆಯನ್ನು ನಿರ್ಮಿಸಿಕೊಂಡಿಲ್ಲ, ಮುಂಬೈ ಮಹಾನಗರದಲ್ಲಿ ಉದ್ಯಮಿಯಾಗಿ ನನ್ನ ಬದುಕು ಕಟ್ಟಿಕೊಂಡಿರುವ ನಾನು ಆರ್ಥಿಕವಾಗಿ ಚೆನ್ನಾಗಿದ್ದೇನೆ. ನನ್ನ ದುಡಿಮೆಯ ಹಣವೇ ನನಗೆ ಸಾಕು, ಭಗವಂತ ನೀಡಿರುವುದೇ ಸಾಕಷ್ಟಿದೆ. ಸಾಮಾನ್ಯ ರೈತನ ಮಗನಾದ ನಾನು ಎರಡು ಮೂರು ದಿನ ಹಸಿವಿನಿಂದ ನೀರು ಕುಡಿದುಕೊಂಡು ದಿನ ಕಳೆದಿದ್ದೇನೆ, ರೈಲ್ವೆ ನಿಲ್ದಾಣದಲ್ಲಿ ಮಲಗಿ ದಿನದೂಡಿದ್ದೇನೆ. ಆದರೆ ನಾನು ಸ್ವಾಭಿಮಾನವನ್ನು ಎಂದಿಗೂ ಬಿಟ್ಟುಕೊಟ್ಟು ಜೀವನ ನಡೆಸಿಲ್ಲ.
ತಂದೆತಾಯಿಗಳನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ನಾನು ತಾಲ್ಲೂಕಿನ ಜನತೆಯನ್ನೇ ತಂದೆತಾಯಿಗಳ ರೂಪದಲ್ಲಿ ಕಾಣುತ್ತಿದ್ದೇನೆ. ಹಸಿವಿನ ಬೆಲೆ ನನಗೆ ಗೊತ್ತಿದೆ. ಊಟ ಹಾಕಿ ಮನೆಗೆ ಬಂದ ಅತಿಥಿಗಳನ್ನು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ.
ದೇವರ ಪೂಜೆ ಮಾಡಿ ಹರಕೆ ತೀರಿಸಿ ಮರಿ ಕಡಿದು ಊಟ ಹಾಕಿಸುವುದರಲ್ಲಿ ತಪ್ಪೇನಿದೆ. ನಾವುಗಳು ಮಾತ್ರ ಕಾರ್ಯಕರ್ತರ ಮನೆಗಳಿಗೆ ಹೋಗಿ ಊಟ ಮಾಡಿಕೊಂಡು ಬರಬಹುದು ಆದರೆ ನಮಗಾಗಿ ದುಡಿದ ಕಾರ್ಯಕರ್ತರಿಗೆ ಊಟ ಹಾಕಿಸಬಾರದು.‌ಇದು ನ್ಯಾಯವೇ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು

ಮೊಳಗಿದ ಜಯಘೋಷಗಳು: ಅಕ್ಕಿಹೆಬ್ಬಾಳು ಹೋಬಳಿಯ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದು ತಾಲ್ಲೂಕಿನ ಅಭಿವೃದ್ಧಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾರಾಯಣಗೌಡರನ್ನೇ ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡಲು ದುಡಿಯುವುದಾಗಿ ಘೋಷಿಸಿದರು. ‌ಅಕ್ಕಿಹೆಬ್ಬಾಳು ಗ್ರಾಮದಲ್ಲಿ ವಾಲ್ಮೀಕಿ ಭವನದ ನಿರ್ಮಾಣಕ್ಕೆ 50ಲಕ್ಷರೂ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಟ್ಟ ಶಾಸಕ ನಾರಾಯಣಗೌಡರು,
ಮಂಡ್ಯ ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್ ಮತ್ತು ಮನ್ ಮುಲ್ ನಿರ್ದೇಶಕರಾದ ಕೆ.ಜಿ.ತಮ್ಮಣ್ಣ ಅವರನ್ನು ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.

Share

About Bora nayak BIG TV NEWS, Mandya

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!