Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೆಹಲಿ / ಮಾಧ್ಯಮದಲ್ಲಿ ಪ್ರತಿಭಟನೆಯ ಸುದ್ದಿ ನೋಡಿ ಹೃದಯಾಘಾತದಿಂದ ವ್ಯಕ್ತಿ ಸಾವು.

ಮಾಧ್ಯಮದಲ್ಲಿ ಪ್ರತಿಭಟನೆಯ ಸುದ್ದಿ ನೋಡಿ ಹೃದಯಾಘಾತದಿಂದ ವ್ಯಕ್ತಿ ಸಾವು.

 

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್​ ಲಿಮಿಟೆಡ್​ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ. 4,355 ಕೋಟಿ ರೂ.ಗಳ ಹಗರಣ ಬೆಳಕಿಗೆ ಬಂದ ನಂತರ ಮೃತಪಟ್ಟವರ ಸಂಖ್ಯೆ ಏಳಕ್ಕೆ ತಲುಪಿದೆ. ‘ಪಿಎಂಸಿ ಬ್ಯಾಂಕ್​ ಠೇವಣಿದಾರ ಕುಲದೀಪ್ ಕೌರ್ ವಿಗ್ (64) ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ’ ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಬಹು ಸಾವಿರ ಕೋಟಿ ರೂ. ಹಗರಣ ಬೆಳಕಿಗೆ ಬಂದ ಬಳಿಕ ಆರ್​ಬಿಐ, ನಗದು ಹಿಂಪಡೆಯಲು ನಿರ್ಬಂಧ ಹೇರಿತ್ತು. ಬ್ಯಾಂಕಿನ ಹಣಕಾಸು ಬಿಕ್ಕಟ್ಟು ಪರಿಹರಿಸುವಂತೆ ಪಿಎಂಸಿ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಬ್ಯಾಂಕ್​ನಲ್ಲಿ ಠೇವಣಿ ಇರಿಸಿರುವ ನವಿ ಮುಂಬೈ ಖಾರ್ಘರ್ ಸೆಕ್ಟರ್ 10ರ ನಿವಾಸಿ ಕೌರ್ ಅವರು ರಾತ್ರಿ ಮನೆಯಲ್ಲಿ ಕುಳಿತು ಟಿವಿಯಲ್ಲಿ ಈ ಪ್ರತಿಭಟನೆ ವೀಕ್ಷಿಸುತ್ತಿದ್ದರು. ಬ್ಯಾಂಕ್​ನಲ್ಲಿರುವ ತನ್ನ ಠೇವಣಿ ಬಗ್ಗೆ ಆತಂಕಗೊಂಡು ತೀವ್ರವಾದ ಒತ್ತಡಕ್ಕೆ ಒಳಗಾಗಿ ಹೃದಯಘಾತಕ್ಕೆ ಈಡಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.15 ವರ್ಷಗಳಿಗಿಂತ ಹೆಚ್ಚು ಕಾಲ ಪಿಎಂಸಿ ಬ್ಯಾಂಕ್​ನಲ್ಲಿ ಖಾತೆಗಳನ್ನು ಹೊಂದಿದ್ದೇವೆ. ಕೆಲವು ಸ್ಥಿರ ಠೇವಣಿಗಳನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಕಳೆದ ಒಂದು ತಿಂಗಳಿಂದ ಈ ಹಗರಣ ಬೆಳಕಿಗೆ ಬಂದಿದೆ. ಇದು ನಮಗೆ ಆತಂಕ ಉಂಟುಮಾಡಿದೆ. ಆರೋಗ್ಯ ವಿಮೆ ನವೀಕರಿಸಲು ಹಣವಿಲ್ಲ. ಬ್ಯಾಂಕ್​ ಬಿಕ್ಕಟ್ಟಿಗೆ ಇನ್ನೂ ಎಷ್ಟು ಜನ ಸಾಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share

About ramu BIG TV NEWS, Kolar

Check Also

ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ

ನವದೆಹಲಿ: ‘ವಾಟ್ಸ್​ಆಯಪ್​’ಗೆ ಪ್ರತಿಸ್ಪರ್ಧಿಯಾದ ಮೆಸೇಜಿಂಗ್ ಆಯಪ್ ‘ಟೆಲಿಗ್ರಾಂ’, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡೌನ್ಲೋಡ್​ ಆದ ನಾನ್-ಗೇಮಿಂಗ್ ಆಯಪ್​ …

Leave a Reply

Your email address will not be published. Required fields are marked *

error: Content is protected !!