Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಪೋಲಿಸರ ಹಲ್ಲೇ ಇಂದ ವ್ಯಕ್ತಿ ಸಾವು ಸಂಬಂಧಿಗಳಿಂದ ಆರೋಪ ಮನೆ ಎದುರು ಶವವಿಟ್ಟು ಪ್ರತಿಭಟನೆ

ಪೋಲಿಸರ ಹಲ್ಲೇ ಇಂದ ವ್ಯಕ್ತಿ ಸಾವು ಸಂಬಂಧಿಗಳಿಂದ ಆರೋಪ ಮನೆ ಎದುರು ಶವವಿಟ್ಟು ಪ್ರತಿಭಟನೆ

ಹುಬ್ಬಳ್ಳಿ;- ವಿಚಾರಣೆ ನೆಪದಲ್ಲಿ ಪೋಲಿಸರು ಹಲ್ಲೆ ಮಾಡಿದ್ದರಿಂದಲೇ ತಮ್ಮ ತಂದೆ ಮೃತಪಟ್ಟಿದ್ದಾರೆ. ಪೋಲಿಸ ಆಯುಕ್ತರು ಸ್ಥಳಕ್ಕೆ ಭೇಟಿಕೊಟ್ಟು ತಪ್ಪಿತಸ್ಥ ಪೋಲಿಸರ ಮೇಲೆ ಕ್ರಮ ಕೈಗೊಳ್ಳುವವರೆಗೂ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಆರೋಪಿಸಿ ಸೆಟ್ಲಮೆಂಟ್ ನ ಶಾಂತಿನಿಕೇತನ ಕಾಲೋನಿಯಲ್ಲಿ ಮೃತರ ಸಂಬಂಧಿಕರು ಗುರುವಾರ ತಡರಾತ್ರಿವರೆಗೂ ಶವವನ್ನು ಮನೆ ಬಳಿ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಪೋಲಿಸರ ಹಲ್ಲೇಯಿಂದಲೇ ಲಕ್ಷ್ಮಣ ಇಂದರಗಿ ಮೃತಪಟ್ಟಿದ್ದಾರೆಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಏನಿದು ಘಟನೆ:- ಮೂರ್ತಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ ಇಂದರಗಿ ಶಾಮೀಲಾಗಿದ್ದಾರೆಂದು ಈತನ ತಂದೆ ಲಕ್ಷ್ಮಣ ಇಂದರಗಿ ಅವರನ್ನು ಶರಹ ಠಾಣೆ ಪೋಲಿಸರು ವಿಚಾರಣೆಗೆಂದು ಠಾಣೆಗೆ ಕರೆಸಿಕೊಂಡು ಹೋಗಿದ್ದರು. ನಾಲ್ಕೈದು ದಿನ ಠಾಣೆಯಲ್ಲಿಯೇ ಇಟ್ಟುಕೊಂಡು ಕೈ, ಕಾಲು, ಬೆನ್ನು ಪಾದಕ್ಕೆ ಮನಬಂದಂತೆ ಹಲ್ಲೇ ಗೈದು ಹಿಂಸೆ ಮಾಡಿದ್ದರಿಂದ ಹಾಗೂ ಕಿರುಕುಳ ಕೊಟ್ಟಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದರು. ನಂತರ 10 ದಿನ ಉಪಕಾರಾಗೃಹದ ವಶಕ್ಕೆ ಒಪ್ಪಿಸಿದ್ದರು. 15 ದಿನನಲ್ಲಿ ಆರೋಗ್ಯ ತೀವ್ರ ಹದಗೆಟ್ಟಿತ್ತು. ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೇ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ. ಅಲ್ಲದೇ ವಿಚಾರಣೆ ನೆಪದಲ್ಲಿ ಪೋಲಿಸರು ಮೃತನ ಪತ್ನಿ, ಮಕ್ಕಳಾದ ಪ್ರಕಾಶ ಮತ್ತು ಮನೋಜ ಹಾಗೂ ಸೊಸೆ ಬೀಗರನ್ನು ಠಾಣೆಗೆ ಕರೆಸಿಕೊಂಡು ಕಿರುಕುಳ ಕೊಟ್ಟಿದ್ದಾರೆ. ಜೊತೆಗೆ ಮೃತನ ಪತ್ನಿಯಿಂದ ಲಿಖಿತ ಹೇಳಿಕೆ ಬರೆಯಿಸಿಕೊಂಡಿದ್ದಾರೆ. ಮಕ್ಕಳಿಬ್ಬರನ್ನು ಉಪಕಾರಗೃಹ ವಶಕ್ಕೆ ಒಪ್ಪಿಸಿದ್ದಾರೆಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!