Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ದೇವರಿಗೂ ಬಿಡದ ಮಳೆಯ ಕಂಟಕ

ದೇವರಿಗೂ ಬಿಡದ ಮಳೆಯ ಕಂಟಕ

ಮಂಡ್ಯ:-  ನೀನೆ ಸುರಿದ ಮಳೆಗೆ ಜನರು ಅಷ್ಟೇ ಅಲದೇ ದೇವರಿಗೂ ಸಂಕಷ್ಟ ಎದುರಾಗಿದ್ದು, ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದ ಗರ್ಭಗುಡಿಯು ನೆನ್ನೆ ಸುರಿದ ಭಾರಿ ಮಳೆಗೆ ಸೋರುತ್ತಿದೆ.

800 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ದೇಗುಲದ ಗರ್ಭಗುಡಿಯ ಮೇಲ್ಚಾವಣಿಯಲ್ಲಿ ರಂಧ್ರಗಳು ಬಿದ್ದಿದ್ದು, ಈ ಹಿನ್ನಲೆಯಲ್ಲಿ ಹಲವು ವರ್ಷಗಳಿಂದ ಸೋರಿಕೆಯಾಗುತ್ತಿದೆ. ಈ ಬಗ್ಗೆ ಅರ್ಚಕರು ಮತ್ತು ಗ್ರಾಮಸ್ಥರು ಪ್ರಾಚ್ಯವಸ್ತು ಸಂಶೋದನಾ ಸಂರಕ್ಷಣಾ ಇಲಾಖೆಯವರಿಗೆ ದೂರು ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ. ಪೂರ್ವಜರ ದೇವಾಲಯವನ್ನು ಉಳಿಸಿಕೊಂಡು ಹೋಗಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಪುರಸಭೆ ಸದಸ್ಯ ಹೆಚ್.ಆರ್.ಲೋಕೇಶ್ ಸಂಬಂದಪಟ್ಟ ಇಲಾಖಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Share

About solaragoppa

Check Also

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ …

Leave a Reply

Your email address will not be published. Required fields are marked *

error: Content is protected !!