Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕಸಾಪ ವತಿಯಿಂದ ಶಾಲೆಗೊಂದು ಕಾರ್ಯಕ್ರಮ.

ಕಸಾಪ ವತಿಯಿಂದ ಶಾಲೆಗೊಂದು ಕಾರ್ಯಕ್ರಮ.

 

ಮಂಡ್ಯ : ಕೃಷ್ಣರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ 33ನೇ ವರ್ಷದ ಶಾಲೆಗೊಂದು ಕಾರ್ಯಕ್ರಮವು ಪಟ್ಟಣದ ಗ್ರಾಮ ಭಾರತಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಿತು.
ಹಿಂದಿ ಕನ್ನಡ ಸಾಹಿತ್ಯ ಚಕ್ರವರ್ತಿ ಮಂದಗೆರೆ ಸುಬ್ಬರಾಯ ಕೃಷ್ಣಮೂರ್ತಿ ಅವರ ಬದುಕು ಬರಹ ಹಾಗೂ ಸಾಹಿತ್ಯ ಪರಿಚಯ ಕುರಿತ ಶಾಲೆಗೊಂದು ಕಾರ್ಯಕ್ರಮವನ್ನು ತಹಶೀಲ್ದಾರ್ ಎಂ. ಶಿವಮೂರ್ತಿ ಉದ್ಘಾಟಿಸಿ ಮಾತನಾಡಿ ಕನ್ನಡ ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವಜನರು ಅಭಿಮಾನವನ್ನು ಬೆಳೆಸಿಕೊಳ್ಳಬೇಕು, ಕನ್ನಡಿಗರು ನಾವೆನ್ನಲು ಅಭಿಮಾನ ಬೆಳೆಸಿಕೊಳ್ಳಬೇಕು.
ಕನ್ನಡ ಸಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುತ್ತಿರುವ ಸಾಹಿತ್ಯ ಪರಿಷತ್ತಿನ ಕಾರ್ಯವು ಶ್ಲಾಘನೀಯ ಎಂದು ತಹಶೀಲ್ದಾರ್ ಶಿವಮೂರ್ತಿ ಅಭಿಮಾನದಿಂದ ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಭಾಗವಹಿಸಿದ್ದ ಪ್ರೊ.ಕಾಳೇಗೌಡನಾಗವಾರ ಮಾತನಾಡಿ ಕೃಷ್ಣರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 33ವರ್ಷಗಳಿಂದ ನಿರಂತರವಾಗಿ ಕನ್ನಡದ ತೇರನ್ನು ಎಳೆಯುವ, ಕನ್ನಡದ ಕಂಪನ್ನು ಮನೆ ಮನಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ.
ಕನ್ನಡದ ಸಂಸ್ಕೃತಿಯನ್ನು ವಿಕೃತಿಗೊಳಿಸಿ ನಮ್ಮ ನೆಲದ ಮಣ್ಣಿನ ಸಂಸ್ಕೃತಿಯನ್ನು ಅಪವಿತ್ರಗೊಳಿಸುವ ಕೆಲಸ ಮಾಡಬಾರದು. ನಮ್ಮದು ಗಾಂಧಿಯನ್ನು ಗೌರವಿಸುವ ಸಂಸ್ಕೃತಿಯಾಗಿಯೇ ಉಳಿಯಬೇಕು ಗೋಡ್ಸೆ ಸಂಸ್ಕೃತಿಯನ್ನು ಬೆಳೆಸುವ ಕೆಲಸಕ್ಕೆ ಯಾರೂ ಪ್ರೋತ್ಸಾಹ ನೀಡಬಾರದು ಎಂದು ಮನವಿ ಮಾಡಿದ ಸಾಹಿತಿ ನಾಗವಾರ ಮ.ಸು.ಕೃಷ್ಣಮೂರ್ತಿ ಅವರು ನಾಡಿನ ಶ್ರೇಷ್ಠ ಸಾಹಿತಿಗಳಾಗಿದ್ದು ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
ನೂರಕ್ಕೂ ಹೆಚ್ಚಿನ ಪುಸ್ತಕಗಳನ್ನು ರಚಿಸಿರುವ ಕೃಷ್ಣಮೂರ್ತಿ ಅವರ ಕೊಡುಗೆಯು ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾಗಿದೆ ಎಂದು ಅಭಿಮಾನದಿಂದ ಹೇಳಿದರು.ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ರಿಜಿಸ್ಟಾರ್ ಎ.ಎಸ್.ನಾಗರಾಜು, ಸಾಹಿತಿ ಕೃಷ್ಣಮೂರ್ತಿ ಅವರ ಪತ್ನಿ ಇಂದಿರಾ, ಕಣಿವೆ ಪ್ರಕಾಶನದ ಶಿವಾನಂದ, ಸಾಹಿತಿ ಮಹೇಶ್ ಹರವೇ, ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ವಿದ್ಯಾನಗರ ರಮೇಶ್, ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಗೌರವಾಧ್ಯಕ್ಷ ನಾಯಸಿಂಗನಹಳ್ಳಿ ನಾಗರಾಜು, ಪ್ರಧಾನ ಕಾರ್ಯದರ್ಶಿ ಕೆ.ಪಿ.ಬೋರೇಗೌಡ, ಸಾಹಿತಿ ಶಿ.ಕುಮಾರಸ್ವಾಮಿ, ಅನಿತಾಚೇತನ್, ಸವಿತಾರಮೇಶ್ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿನಿ ಶೀಲಾ, ವಿಶ್ರಾಂತ ದೈಹಿಕ ಶಿಕ್ಷಕ ಜೆ.ಬಿ.ಬೋರೇಗೌಡ ಮತ್ತು ಗಮಕಿ ಎಸ್.ಎಲ್.ರಂಗಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!