Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಭೀಕರ ರಸ್ತೆ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರ ದುರಂತ ಅಂತ್ಯ.

ಭೀಕರ ರಸ್ತೆ ಅಪಘಾತ: ಬಸವೇಶ್ವರ ಸ್ವಾಮೀಜಿ ಸೇರಿ ನಾಲ್ವರ ದುರಂತ ಅಂತ್ಯ.

Spread the love

ಧಾರವಾಡ(ಜ.26): ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕುಂದಗೋಳ ಪಟ್ಟಣದ ಶಿವಾನಂದ ಮಠದ ಶ್ರೀ ಬಸವೇಶ್ವರ ಸ್ವಾಮೀಜಿ ಸೇರಿದಂತೆ ನಾಲ್ವರು ಸಾವನ್ನಪ್ಪಿ, ಮೂವರಿಗೆ ಗಾಯಗಳಾದ ಘಟನೆ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ(4)ರಲ್ಲಿ ಇಂದು(ಭಾನುವಾರ) ನಡೆದಿದೆ.

ಮೃತ ನಾಲ್ವರಲ್ಲಿ ಉಳಿದ ಮೂವರ ಹೆಸರು ತಿಳಿದು ಬಂದಿಲ್ಲ. ಬಸಪ್ಪ ಪೂಜಾರ, ಸಿದ್ದಪ್ಪ ಇಂಗಳ್ಳಳ್ಳಿ, ಸೋಮಣ್ಣ ದೇಸಾಯಿ ಗಾಯಗೊಂಡವರಾಗಿದ್ದಾರೆ.

ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳು ಸೋಮಣ್ಣ ದೇಸಾಯಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯಾಗಿದ್ದಾರೆ. ಆಸ್ಪತ್ರೆಗೆ ವಿನಯ್ ಕುಲಕರ್ಣಿ ಭೇಟಿ ನೀಡಿ ಸೋಮಣ್ಣ ದೇಸಾಯಿ ಆರೋಗ್ಯ ವಿಚಾರಣೆ ಮಾಡಿದ್ದಾರೆ.ಶಿವಾನಂದ ಮಠದ ಸ್ವಾಮೀಜಿಗಳು ಇಂದು ಬೆಳಗ್ಗೆಯಷ್ಟೇ ಶಿವಾನಂದ ಮಠದ ಶಾಲೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ್ದರು.ಸ್ವಾಮೀಜಿ ಗಣರಾಜ್ಯೋತ್ಸವ ಮುಗಿಸಿ ಧಾರವಾಡದಲ್ಲಿ ನಡೆಯುತ್ತಿದ್ದ ಭಕ್ತರೊಬ್ಬರ ಮದುವೆಗೆ ಆಗಮಿಸುತ್ತಿದ್ದರು. ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Check Also

Featured Video Play Icon

ಯರಗುಪ್ಪಿ ಮುಖ್ಯ ರಸ್ಥೆಯಲ್ಲಿ ಗುಂಡಿಗಳದೇ ಕಾರುಬಾರು

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!