Breaking News
Hiring Reporter’s For more Information Contact Above Number 876 225 4007 . Program producer
Home / ಶಿಕ್ಷಣ / ಕರ್ನಾಟಕ / ಸರ್ಕಾರ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಸರ್ಕಾರ ನಡೆ ಖಂಡಿಸಿ ಎಬಿವಿಪಿ ಪ್ರತಿಭಟನೆ

ಹುಬ್ಬಳ್ಳಿ:- ವಿಶ್ವವಿದ್ಯಾಲಯಗಳಲ್ಲಿ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಮ್ (ಇಡಿಜಿಎಸ್) ತಂತ್ರಾಶ ಬಳಸುವ ವಿದ್ಯಾರ್ಥಿಗಳ ಹಣವನ್ನು ಸರ್ಕಾರ ಲೂಟಿ ಮಾಡಲು ಹೊರಟಿದೆ ಎಂದು ಆರೋಪಿಸಿ ನಗರದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಹಶಿಲ್ದಾರರ ಕಚೇರಿ ಎದುರು ಪ್ರತಿಭಟನೆ ಮಾಡಿತು.

ಶಿಕ್ಷಣವು ಸರ್ವರಿಗೆ ಸಿಗಬೇಕು. ಅದು ಮಾರಾಟದ ವಸ್ತುವಲ್ಲವೆಂದು ಹಿರಿಯರು ಸಾರಿ ಹೇಳಿದ್ದಾರೆ ಅದರಂತೆ ಕರ್ನಾಟಕಕ್ಕೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಬರುತ್ತಾರೆ. ಇದೆಲ್ಲದರ ನಡುವೆ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಅಂಕಪಟ್ಟಿಯಿಂದ ಹಣ ಮಾಡಲು ಹೊರಟಿದ್ದು, ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.

ರಾಜ್ಯ ಸರ್ಕಾರ ಜೂನ್ 5 ರಂದು ಹೊರಡಿಸಿದ ಆದೇಶದಂತೆ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಜನರೇಷನ್ ಸಿಸ್ಟಮ್ ತಂತ್ರಾಂಶ ಬಳಸಲು ಕಿಯೋನಿಕ್ಸ್ ಸಂಸ್ಥೆಗೆ ವಹಿಸಲು ಸೂಚಿಸಿದೆ. ಜೊತೆಗೆ ವಿವರಗಳಲ್ಲಿ ತಂತ್ರಜ್ಞಾನ ಬಳಕೆಗೆ ಎಬಿವಿಪಿ ಸ್ವಾಗತಿಸುತ್ತದೆ. ಆದರೆ ಇದರ ಹೆಸರಿನಲ್ಲಿ ಪ್ರತಿ ಅಂಕ ಅಂಕಪಟ್ಟಿಗೆ 154 ರೂ ಗಳನ್ನು  ವಿದ್ಯಾರ್ಥಿಗಳಿಂದ ವಸೂಲಿ ಮಾಡಲು ಹೊರಟಿರುವುದು ಖಂಡನೀಯ. ಅಂಕಪಟ್ಟಿ ತಯಾರಿಕೆ ಖರ್ಚನ್ನು 1 ರೂ ನಿಂದ 3 ರೂ ಗಳಿಗೆ ಏರಿಕೆ ಮಾಡಿದ ಹಿನ್ನಲೆಯಲ್ಲಿ ಸರಸರಿ 156 ರೂ ಗಳಿಗೆ ಅಂಕಪಟ್ಟಿ ದರ ಏರಿಕೆ ಮಾಡಿ ಆದೇಶ ಹೊರಡಿಸಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಇನ್ನೂ ಕಿಯೋನಿಕ್ಸ್ ಸಂಸ್ಥೆ ಎಲ್ಲಾ ವಿವಿಗಳ ಅಂಕಪಟ್ಟಿ ತಾನೇ ತಯಾರಿಸುತ್ತದೆಯೋ ಅಥವಾ ಅದನ್ನು ಅನ್ಯ ಕಂಪನಿಗಳಿಗೆ ನೀಡುತ್ತದೆಯೋ ಎಂದು ಗೊತ್ತಾಗಬೇಕು. ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ವಿಟಿಯು ರೀತಿಯ ತಾಂತ್ರಿಕ ವಿವಿಯನ್ನು ಬಳಸಿ ಸರ್ಕಾರ ಕೆಲಸ ಮಾಡಿಸಲು ಅವಕಾಶಗಳಿದ್ದರೂ ಸಹ ಅನ್ಯರಿಗೆ ಕೊಟ್ಟಿರುವುದು ಖಂಡನೀಯ. ಕೂಡಲೇ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಬೀಳದ ಹಾಗೇ ತಂತ್ರಜ್ಞಾನವನ್ನು ರಾಜ್ಯದ ಎಲ್ಲ ವಿವಿಗಳಲ್ಲಿ ಸಮರ್ಥವಾಗಿ ವಿಸ್ತರಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನೂರಾರು ಎಬಿವಿಪಿ ಕಾರ್ಯಕರ್ತರು ಇದ್ದರು.

 

Share

About Shaikh BIG TV NEWS, Hubballi

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!