Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಎಸಿಬಿ ಬಲೆಗೆ ಬಿದ್ದ ಕೃಷಿ ತಾಂತ್ರಿಕ‌ ಸಹಾಯಕ ಅಧಿಕಾರಿ.

ಎಸಿಬಿ ಬಲೆಗೆ ಬಿದ್ದ ಕೃಷಿ ತಾಂತ್ರಿಕ‌ ಸಹಾಯಕ ಅಧಿಕಾರಿ.

 

ಗುಂಡ್ಲುಪೇಟೆ: ಪಟ್ಟಣದ ಕೃಷಿ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿಯೊಬ್ಬರು ಹಣ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಸೋಮವಾರ ನಡೆದಿದೆ.

ಘಟನೆ ವಿವರ – ಗುಂಡ್ಲುಪೇಟೆಯಲ್ಲಿ ಕೃಷಿ ಪರಿಕರಗಳನ್ನು ಪೂರೈಸುವ ಕೆಲಸವನ್ನು ನಿರ್ವಹಿಸುತ್ತಿದ್ದರು ತಾಲೂಕಿನ ರೈತರಿಗೆ ಕೃಷಿ ಇಲಾಖೆ ಮೂಲಕ ಪರಿಕರಗಳನ್ನು ವಿತರಿಸುತ್ತಿದ್ದರು.. ಇತ್ತೀಚಿಗೆ ಪರಿಕರಗಳನ್ನು ಪಡೆಯಲು ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು ಇದಕ್ಕೆ ಕಾರಣ ಕೃಷಿ ಇಲಾಖೆ ಅಧಿಕಾರಿಗಳಿಗೆ ಕಮಿಷನ್ ನೀಡಿದರೆ ಮಾತ್ರ ಪರಿಕರಗಳನ್ನು ನೀಡಲಾಗುತ್ತದೆ ಎಂಬ ಗುಪ್ತ ಆರೋಪಗಳು ಕೇಳಿ ಬರುತ್ತಿದ್ದವು.. ಈ ವಿಚಾರವಾಗಿ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗುತ್ತಿದ್ದು ಸೋಮವಾರ ಸಂಜೆ ವೇಳೆ ಮಲ್ಲಯ್ಯ ನಪುರ ಗ್ರಾಮದ ರೈತರೋರ್ವರಿಂದ 10 ಸಾವಿರ ಹಣವನ್ನು ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಎಸಿಬಿ ಬಲೆಯಲ್ಲಿ ಬಂಧಿಯಾಗಿದ್ದಾರೆ..
ಸರ್ಕಾರದಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಕೃಷಿ ಉಪಕರಣ , ತುಂತುರು ನೀರಾವರಿ ವ್ಯವಸ್ಥೆ, ಕೃಷಿ ಹೊಂಡ , ಯಂತ್ರೋಪಕರಣಗಳ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಉಪಯೋಗ ಪಡೆಯಲು ಬಾರಿ ಹರಸಾಹಸ ಪಡಬೇಕಾದ ಸ್ಥಿತಿ ಎದುರಾಗಿತ್ತು ಎನ್ನಲಾಗುತ್ತಿದ್ದು ರೈತರು ಅಸಹಾಯಕರಾಗಿ ಹೋಗಿದ್ದರು. ಕಾರ್ಯಚರಣೆಯಲ್ಲಿ ವೃತ್ತ ನಿರೀಕ್ಷಕ ಶ್ರೀಕಾಂತ್ , ದೀಪಕ್, ಸಿಬ್ಬಂದಿಗಳು ಭಾಗವಹಿಸಿದ್ದರು…

ವರದಿ :ಮಹದೇವ ಪ್ರಸಾದ್ ಯಡಹುಂಡಿ. ಬಿಗ್ ಟಿವಿ ನ್ಯೂಸ್.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!