Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ರೈತನಿಂದ ಲಂಚ ಸ್ವೀಕಾರ ಮಾಡುತ್ತಿದ್ದಾಗ ಪೋಲಿಸ ಅಧಿಕಾರಿಗಳಿ ಎಸಿಬಿ ಬಲೆಗೆ

ರೈತನಿಂದ ಲಂಚ ಸ್ವೀಕಾರ ಮಾಡುತ್ತಿದ್ದಾಗ ಪೋಲಿಸ ಅಧಿಕಾರಿಗಳಿ ಎಸಿಬಿ ಬಲೆಗೆ

ಮಂಡ್ಯ:-  ಜಮೀನು ಸ್ವಾಧೀನಕ್ಕೆ ಸಂಬಂಧಿಸಿದ ವಿಚಾರಕ್ಕೆ ಪೊಲೀಸ್ ರಕ್ಷಣೆ ನೀಡಲು ರೈತನಿಂದ 22ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಈರೇಗೌಡ ಅವರನ್ನು  ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಮೇತ ಬಂಧಿಸಿದ್ದಾರೆ.

ರೈತ ಉಮೇಶಗೌಡ ತಮ್ಮ ಜಮೀನನ್ನು ಅಳತೆ ಮಾಡಿ ಸ್ವಾಧೀನಕ್ಕೆ ಪಡೆದುಕೊಳ್ಳಲು ಯಾವುದೇ ತಂಟೆ ತಕರಾರು ಬಾರದಂತೆ. ಪೊಲೀಸ್ ರಕ್ಷಣೆ ನೀಡುವಂತೆ ತಹಸೀಲ್ದಾರ್ ರವರು ಗ್ರಾಮಾಂತರ ಪೊಲೀಸರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ರೈತ ಉಮೇಶಗೌಡ ಅವರು ರಕ್ಷಣೆ ನೀಡುವಂತೆ ಎ.ಎಸ್.ಐ ಈರೇಗೌಡ ಅವರಲ್ಲಿ ಹಲವು ಭಾರಿ ಮನವಿ ಮಾಡಿದ್ದರು. ತಕರಾರು ಇರುವ ಜಮೀನಿಗೆ ರಕ್ಷಣೆ ನೀಡಬೇಕಾದರೆ  30ಸಾವಿರ ಲಂಚ ನೀಡಬೇಕು ಎಂದು ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ರೈತನಿಗೆ ಕಳೆದ ಎರಡು ತಿಂಗಳಿನಿಂದಲೂ ರಕ್ಷಣೆ ನೀಡಲು ಒಂದಲ್ಲ ಒಂದು  ಸಬೂಬು ಹೇಳುತ್ತಾ ಬಂದಿದ್ದರು. ಕೊನೆಗೆ ರೈತ ಉಮೇಶಗೌಡ ಅವರು ನನ್ನ ಬಳಿ ಹಣವಿಲ್ಲ ಸಾಲಮಾಡಿ 20ಸಾವಿರ ಕೊಡುತ್ತೇನೆ ದಯಮಾಡಿ ಜಮೀನು ಸ್ವಾಧೀನಕ್ಕೆ ಪಡೆಯಲು ರಕ್ಷಣೆ ಕೊಡಿ ಎಂದು   ಗೋಗರೆದು ,ಕೇಳಿಕೊಂಡಿದ್ದಾನೆ ಆದರೂ ಸಹ ಎ.ಎಸ್.ಐ ಈರೇಗೌಡ ಅವರು 25ಸಾವಿರಕ್ಕೆ ಒಪ್ಪಿಕೊಂಡು ಅಡ್ವಾನ್ಸ್ ಆಗಿ 22ಸಾವಿರ ನೀಡಬೇಕೆಂದು ಪಟ್ಟು ಹಿಡಿದುದ್ದಾರೆ.ಆಗ  ವಿಧಿಯಿಲ್ಲದೆ ರೈತ ಉಮೇಶಗೌಡ ಅವರು ಮಂಡ್ಯ ಬ್ರಷ್ಠಾಚಾರ ನಿಗ್ರಹ ದಳ (ಎಸಿಬಿ) ಇಲಾಖೆಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು.

Share

About solaragoppa

Check Also

ವಕೀಲರ ಬಳಿ ಮತಯಾಚನೆ

ಮಂಡ್ಯ ಜಿಲ್ಲಾ ಕೃಷ್ಣರಾಜಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರ ಬಳಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಡಾ.ನಾರಾಯಣಗೌಡ. ಮನೆ ಮನೆಯ ಭೇಟಿ …

Leave a Reply

Your email address will not be published. Required fields are marked *

error: Content is protected !!