Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಪಿ.ಕೆ.ಪಿ.ಎಸ್ ಸೊಸೈಟಿ ಮೇಲೆ ಹೊರಸಿರುವ ಆರೋಪ ಶುದ್ದ ಸುಳ್ಳು : ಸಹದೇವಪ್ಪ

ಪಿ.ಕೆ.ಪಿ.ಎಸ್ ಸೊಸೈಟಿ ಮೇಲೆ ಹೊರಸಿರುವ ಆರೋಪ ಶುದ್ದ ಸುಳ್ಳು : ಸಹದೇವಪ್ಪ

ಹುಬ್ಬಳ್ಳಿ, ನ.11- ಕುಂದಗೋಳ ತಾಲೂಕಿನ ಯಲಿವಾಳದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಮೇಲೆ ಚನ್ನಪ್ಪ ಡಫಳಿ ಹೊರಸಿರುವ ಆರೋಪಗಳು ಶುದ್ದ ಸುಳ್ಳು, ಹಂತ ಹಂತವಾಗಿ ಖಾಲಿ ಚೀಲ, ಬಾಡಗೆ ಹಣವನ್ನು ರೈತರಿಗೆ ಒದಗಿಸಲಾಗುತ್ತಿದೆ ಎಂದು ಸೊಸೈಟಿ ಸೆಕ್ರೆಟರಿ ಸಹದೇವಪ್ಪ ಹೊಸಕಟ್ಟಿ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲಿವಾಳದ ಪಿ.ಕೆ.ಪಿ.ಎಸ್ ಸೊಸೈಟಿ ಕಳೆದ ಹಲವಾರು ವರ್ಷಗಳಿಂದ ರೈತರ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಕಳೆದ 2017-18 ನೇ ಸಾಲಿನಲ್ಲಿ ಸೊಸೈಟಿ ವತಿಯಿಂದ ರೈತರ ಶೇಂಗಾವನ್ನು ಖರೀದಿ ಮಾಡಿ ನಾಫೆಡ್ ಗೆ ಕಳಿಸಿಕೊಡಲಾಗಿತ್ತು. ಆದರೆ ರೈತ ಚನ್ನಪ್ಪ ಡಫಳಿ ತನ್ನ ಸ್ವಾರ್ಥಕ್ಕಾಗಿ ಸಂಘದ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಇನ್ನೂ ಸಂಘವು 2017-18 ರಲ್ಲಿ ಒಟ್ಟು 30647 ಚೀಲ ಶೇಂಗಾ ಖರೀದಿ ಮಾಡಿದ್ದು, ಚನ್ನಪ್ಪ ಡಫಳಿ ಅವರು 30603 ಚೀಲ ಖರೀದಿ ಮಾಡಿದ್ದಾರೆ, ಕಳೆದ 10 ತಿಂಗಳಿಂದ ಹಣಕಾಸು ಬಿಡುಗಡೆ ಮಾಡಿಲ್ಲ, ಠರಾವು ನಕಲು ಕೊಟ್ಟಿಲ್ಲ, ಅಧಿಕಾರಿಗಳಿಗೆ ಲಕ್ಷಗಟ್ಟಲೆ ಲಂಚ ಕೊಟ್ಟಿದ್ದಾರೆ, ಖಾಲಿ ವೋಚರ ಮೇಲೆ ಸಹಿ ತೆಗೆದುಕೊಂಡು ಸೊಸೈಟಿಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪ ಮಾಡಿದ್ದು ಶುದ್ದ ಸುಳ್ಳು, ಸೊಸೈಟಿಯು ರೈತರ ಖಾಲಿ ಚೀಲಗಳ ಹಣವನ್ನು 4 ತಿಂಗಳು 14 ದಿನಗಳ ಹಿಂದೆಯೇ ಕೊಟ್ಟಿದ್ದು, ಅಲ್ಲದೇ ಬ್ಯಾಂಕ್ ಪಾಸ್ ಬುಕ್ ನಲ್ಲಿ ಇದು ದಾಖಲಾಗಿದೆ. ಅಲ್ಲದೇ ಅವರು ಸಂಘಕ್ಕೆ ಠರಾವಿನ ನಕಲು ಪ್ರತಿ ಕೇಳಲು ಬಂದಿರುವುದೇ ಇಲ್ಲ. ಇನ್ನೂ ನಾಫೆಡ್ ನಿಯಮದ ಪ್ರಕಾರ ಒಬ್ಬ ರೈತ 42 ಚೀಲಗಳನ್ನು ಮಾತ್ರ ಕಳುಹಿಸಲು ಸಾಧ್ಯ, ಅಲ್ಲದೇ ಯಾವುದೇ ಖಾಲಿ ವೋಚರ್ ನಲ್ಲಿ ಸಹಿ ತೆಗೆದುಕೊಂಡಿಲ್ಲ. ಇದು ಸೊಸೈಟಿ ಹೆಸರು ಕೆಡಿಸಲು ಮಾಡಿರುವ ಆರೋಪವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ ಹುರಕಡ್ಲಿ, ನೀಲಪ್ಪ ಅಂಗಡಿ, ಮಹಾದೇವಪ್ಪ ಜವಾರಿ, ಚೆನ್ನಪ್ಪ ಹರಕುಣಿ ಸೇರಿದಂತೆ ಮುಂತಾದವರು ಇದ್ದರು.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!