Hiring Reporter’s For more Information Contact Above Number 876 225 4007 . Program producer
Home / Breaking News / ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ: ಸ್ಥಿತಿ ಗಂಭಿರ, ಆಸ್ಪತ್ರೆಗೆ ದಾಖಲು

ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ: ಸ್ಥಿತಿ ಗಂಭಿರ, ಆಸ್ಪತ್ರೆಗೆ ದಾಖಲು

Spread the love

ಚನ್ನೈ : ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನಿಸಿದ್ದು, ಪ್ರಾಥಮಿಕ ಮೂಲಗಳ ಪ್ರಕಾರ ಅವರ ಸ್ಥಿತಿ ಗಂಭಿವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. ಸೀಮನ್ ವಿರುದ್ಧ ಮಾತನಾಡಿದ್ದಕ್ಕಾಗಿ ಇತ್ತೀಚಿಗೆ ಸೀಮನ್ ಮತ್ತು ಅವರ ಪಕ್ಷದಿಂದ ತಾವು ಅನುಭವಿಸುತ್ತಿರುವ ಚಿತ್ರಹಿಂಸೆ ಬಗ್ಗೆ ಮಾತನಾಡುವ ವೀಡಿಯೊವನ್ನು ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಜಯಲಕ್ಷ್ಮಿ ಅಪ್‌ಲೋಡ್ ಮಾಡಿದ್ದರು. ಇದು ನನ್ನ ಕೊನೆಯ ವಿಡಿಯೋ ಮತ್ತು ಸೀಮನ್ ಮತ್ತು ಅವರ ಪಕ್ಷದ ಸದಸ್ಯರಿಂದಾಗಿ ಕಳೆದ ನಾಲ್ಕು ತಿಂಗಳಲ್ಲಿ ನಾನು ತೀವ್ರ ಒತ್ತಡದಲ್ಲಿದ್ದೇನೆ ಅಂಥ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದೇ ವೇಳೇ ಅವರು ವಿಡಿಯೋದಲ್ಲಿ ನನ್ನ ತಾಯಿ ಮತ್ತು ಸಹೋದರಿಯ ಕಾರಣದಿಂದಾಗಿ ಈ ದಿನಗಳಲ್ಲಿ ನಾನು ಬದುಕುಳಿಯಲು ಯತ್ನಿಸಿದೆ, ಅಂತ ಹೇಳಿರುವ ಅವರು ತಮಗೆ ಆಗಿರುವ ನೋವನ್ನು ತಿಳಿಸಿ, ನಾನು ಈಗಾಗಲೇ ನನ್ನ ಒಂದೆರಡು ಬಿಪಿ ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ, ಆದ್ದರಿಂದ ಸ್ವಲ್ಪ ಸಮಯದಲ್ಲಿ ನಾನು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದೇನೆ ಮತ್ತು ಕೆಲವೇ ಗಂಟೆಗಳಲ್ಲಿ ನಾನು ಸಾಯುತ್ತೇನೆ. ವಿಡಿಯೋ ನೋಡುವ ಅಭಿಮಾನಿಗಳಿಗೆ ನಾನು ತುಂಬಾ ಹಿಂಸೆ ನೀಡಿದ್ದೇನೆ ಎಂದು ಹೇಳಲು ಬಯಸುತ್ತೇನೆ ಅಂತ ಹೇಳಿಕೊಂಡಿದ್ದಾರೆ.

Check Also

ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿ ಸಿಮಿ ಮರಿಯಂ ಜಾರ್ಜ್‌

Spread the loveಕಲಬುರಗಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!