Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಪ್ರಸ್ತಾವನೆಗೆ ಒಪ್ಪಿಗೆ

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಪ್ರಸ್ತಾವನೆಗೆ ಒಪ್ಪಿಗೆ

Spread the love

ಆಂಧ್ರ ಪ್ರದೇಶದಲ್ಲಿ 3 ರಾಜಧಾನಿ ಹೊಂದುವ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

3 ರಾಜಧಾನಿಗಳನ್ನು ಹೊಂದಬೇಕು ಎಂದು ಪಟ್ಟು ಹಿಡಿದಿದ್ದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಹಲವು ವಿರೋಧಗಳ ನಡುವೆಯೂ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ.

ಕಾರ್ಯಾಂಯಾಂಗ ರಾಜಧಾನಿಯಾಗಿ ವಿಶಾಖಪಟ್ಟಣ, ಶಾಸಕಾಂಗ ರಾಜಧಾನಿಯಾಗಿ ಅಮರಾವತಿ, ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲು ಆಯ್ಕೆಯಾಗಿದೆ. ಈ ಮೂಲಕ, ಭಾರತದಲ್ಲಿ 3 ರಾಜಧಾನಿಗಳನ್ನು ಹೊಂದಿರುವ ಏಕೈಕ ರಾಜ್ಯವಾಗಿ ಆಂಧ್ರ ಹೊರಹೊಮ್ಮಿದೆ.

ಅಮರಾವತಿ ಬದಲಾವಣೆ ಏಕೆ? ತೆಲಂಗಾಣದಿಂದ ಪ್ರತ್ಯೇಕಗೊಂಡ ಆಂಧ್ರಪ್ರದೇಶಕ್ಕೆ ಅಮರಾವತಿಯೇ ರಾಜಧಾನಿ ಎಂದು ಬಹುತೇಕವಾಗಿ ನಿರ್ಧಾರವಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ದು ಅಮರಾವ‌ತಿಯನ್ನು ‘ಗ್ರೀನ್‌ ಕ್ಯಾಪಿಟಲ್‌’ ಮಾಡಲು 30 ಸಾವಿರಕ್ಕೂ ಅಧಿಕ ಎಕರೆ ಜಮೀನನ್ನು ಖರೀದಿಸಲು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು, ನೆರವನ್ನೂ ಪಡೆಯಲಾಗಿತ್ತು.

ಇನ್ನೇನು ಅಂತಿಮ ಹಂತ ತಲುಪಬೇಕು ಎನ್ನುವಷ್ಟರಲ್ಲಿ ಚಂದ್ರಬಾಬು ನಾಯ್ಡು ಅಧಿಕಾರ ಕಳೆದುಕೊಂಡರು. ನೂತನ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅಮರಾವತಿ ರಾಜಧಾನಿ ಯೋಜನೆ ರದ್ದುಪಡಿಸಿ, 3 ರಾಜಧಾನಿಗಳ ಪ್ರಸ್ತಾವ ಮಾಡಿದರು. ಹೆಚ್ಚು ರಾಜಧಾನಿಗಳಿರುವ ರಾಜ್ಯಗಳು ಹಿಮಾಚಲ ಪ್ರದೇಶ – ಶಿಮ್ಲಾ ಹಾಗೂ ಧರ್ಮಶಾಲಾ, ಮಹಾರಾಷ್ಟ್ರ – ಮುಂಬಯಿ ಹಾಗೂ ನಾಗ್ಪುರ.

ಮೂರು ನಗರಗಳಿಗೆ ರಾಜಧಾನಿ ಪಟ್ಟ
ಕಾರ್‍ಯಾಂಗ ರಾಜಧಾನಿಯಾಗಿರುವ ವಿಶಾಖಪಟ್ಟಣದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಕಚೇರಿಗಳು ಇರಲಿವೆ. ಅಮರಾವತಿಯಿಂದ ವಿವಿಧ ಸಚಿವಾಲಯಗಳು, ಇಲಾಖೆಗಳ ಕಚೇರಿಗಳು ವಿಶಾಖಪಟ್ಟಣಕ್ಕೆ ಸ್ಥಳಾಂತರವಾಗಲಿವೆ.

ಅಮರಾವತಿ: ಶಾಸಕಾಂಗ ರಾಜಧಾನಿಯಾಗಿರುವ ಅಮರಾವತಿಯಲ್ಲಿ ಈಗಾಗಲೇ ಸಹಸ್ರಾರು ಕೋಟಿ ರೂ. ವ್ಯಯಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ನಗರದಲ್ಲಿ ವಿಧಾನಸಭಾ ಕಲಾಪಗಳು ನಡೆಯಲಿವೆ.

ಕರ್ನೂಲು: ನ್ಯಾಯಾಂಗ ರಾಜಧಾನಿಯಾಗಿ ರುವ ಕರ್ನೂಲಿಗೆ ಹೈಕೋರ್ಟ್‌ ಸ್ಥಳಾಂತರ ಗೊಳ್ಳಲಿದೆ. ಹೈಕೋರ್ಟ್‌ ಹಾಗೂ ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿಗಳು ಈ ನಗರದಲ್ಲಿ ಇರಲಿವೆ.

ಕಾನೂನು ಸವಾಲು
ಜಗನ್‌ಮೋಹನ್‌ ರೆಡ್ಡಿ ಸರಕಾರ ರೂಪಿಸಿರುವ ಮೂರು ರಾಜಧಾನಿಗಳ ಕಾಯ್ದೆಯನ್ನು ವಿರೋಧಿಸಿ ರೈತರು ಈಗಾಗಲೇ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಆದರೆ, ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ. ಅಮರಾವತಿಯನ್ನು ರಾಜಧಾನಿಯನ್ನಾಗಿಸಲು ರೈತರಿಂದ 30 ಸಾವಿರಕ್ಕೂ ಅಧಿಕ ಭೂಮಿಯನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ಅಮರಾವತಿಯನ್ನು ಕೈಬಿಟ್ಟಿರುವುದರಿಂದ ಈ ವಿವಾದಗಳು ಇತ್ಯರ್ಥವಾಗಬೇಕಿದೆ.

Check Also

ರನ್​ವೇಯಿಂದ ಜಾರಿದ 191 ಪ್ರಯಾಣಿಕರಿದ್ದ ಏರ್​ ಇಂಡಿಯಾ ವಿಮಾನ: ಅಪ್ಪಳಿಸಿದ ರಭಸಕ್ಕೆ ಎರಡು ಭಾಗ!

Spread the loveತಿರುವನಂತಪುರಂ​: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕೋಳಿಕ್ಕೊಡ್​ ವಿಮಾನ ನಿಲ್ದಾಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!