Breaking News
Hiring Reporter’s For more Information Contact Above Number 876 225 4007 . Program producer
Home / Breaking News / 28 ಕ್ಕೆ ಅನಾಥರ ಮಾಯೆ ನಾಟಕ ಪ್ರದರ್ಶನ.

28 ಕ್ಕೆ ಅನಾಥರ ಮಾಯೆ ನಾಟಕ ಪ್ರದರ್ಶನ.

 

ಹುಬ್ಬಳ್ಳಿ: ನಗರದ ದೇವಾಂಗಪೇಟೆ ರಾಜಾಜಿನಗರದ ಸುನಿಧಿ ಸೌರಭ ವತಿಯಿಂದ ನ.28ರಂದು ಸಂಜೆ 6.30.ಕ್ಕೆ ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ’ಅನಾಥರ ಮಾಯೆ’ ನಾಟಕದ ಉಚಿತ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸೌರಭದ ಅಧ್ಯಕ್ಷ ಸುಭಾಸ ನರೇಂದ್ರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಶಕಗಳಿಂದ ಲಲಿತ ಕಲೆಗಳಿಗೆ ಪ್ರೋತ್ಸಾಹಿಸುತ್ತ ಬಂದಿರುವ ಕಲಾ ಸಂಸ್ಥೆಯ ವತಿಯಿಂದ ಪ್ರದರ್ಶಿಸಲ್ಪಡುತ್ತಿರುವ ಈ ನಾಟಕವು ಮನೋಜ್ಞ ಅಭಿನಯದಿಂದ ಎಲ್ಲರ ಮನಗೆದ್ದಿದ್ದು ಇದು ಉಚಿತ ಪ್ರದರ್ಶನವಾಗಿದೆ ಎಂದರು.
ಅನಾಥರ ಮಾಯೆ ನಾಟಕವು ತಮ್ಮ ರಚನೆ ಹಾಗೂ ಮನವರ್ಷಿ ನವಲ ಗುಂದರ ನಿರ್ದೇಶನದಲ್ಲಿ ಮೂಡಿ ಬಂದಿದೆ. ಅನಾಥರ ಮಾಯೆ ನಾಟಕ ದಲ್ಲಿ ಅವಳಿನಗರದ 20ಕ್ಕೂ ಅಧಿಕ ಹವ್ಯಾಸಿ ಕಲಾವಿದರು ಅಭಿನಯಿಸು ತ್ತಿದ್ದು, ಸಿಂಧೂತಾಯಿ ಸಪಕಾಳರ ಪಾತ್ರದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ, ನಟಿ ವೀಣಾ ಮೋಡಕ್ ಅಭಿನಯಿಸಲಿದ್ದಾರೆ. ಕಳೆದ ನಾಟಕದಲ್ಲಿ ವೀಣಾ ಅಠವಾಲೆ ಅವರ ಅಭಿನಯ ಮೆಚ್ಚಿ ಸಾರ್ವಜನಿ ಕರಿಂದ 25ಸಾವಿರ ರೂ. ದೇಣಿಗೆ ಸಂಗ್ರಹವಾಗಿತ್ತು. ಆ ಹಣವನ್ನು ಪುಣೆಯಲ್ಲಿರುವ ಸಿಂಧೂತಾಯಿಯ ಅನಾಥ ಆಶ್ರಮಕ್ಕೆ ನೀಡಲಾಗಿದೆ ಎಂದು ನರೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವೀಣಾ ಮೋಡಕ್, ಕಲಾ ಸೌರಭದ ಸಹ ಕಾರ್ಯದರ್ಶಿ ಸುನಿಧಿ ನರೇಂದ್ರ, ಅಜಿತ್ ಮತ್ತಿತರರು ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!