Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ವಿರಾಟ್ ಕೊಹ್ಲಿ ನೇತೃತ್ವದ ತಂಡವನ್ನು ಹಾಡಿ ಹೊಗಳಿದ ಅನಿಲ್ ಕುಂಬ್ಳೆ.

ವಿರಾಟ್ ಕೊಹ್ಲಿ ನೇತೃತ್ವದ ತಂಡವನ್ನು ಹಾಡಿ ಹೊಗಳಿದ ಅನಿಲ್ ಕುಂಬ್ಳೆ.

 

ನವದೆಹಲಿ: ಐಸಿಸಿ ಟೆಸ್ಟ್​ ಚಾಂಪಿಯನ್​​ ಟೂರ್ನಿ ಆರಂಭಗೊಂಡ ಬಳಿಕ ಟೀಂ ಇಂಡಿಯಾ ಆಡಿರುವ ಐದು ಟೆಸ್ಟ್​​ ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದು, ಈಗಾಗಲೇ 240 ಅಂಕಗಳೊಂದಿಗೆ ಟಾಪ್​​ ಒನ್​ ಸ್ಥಾನದಲ್ಲಿದೆ. ಈಗಾಗಲೇ ಎಲ್ಲ ಟಾಪ್​ ತಂಡಗಳಿಗೆ ಸೋಲಿನ ರುಚಿ ತೋರಿಸುತ್ತಿರುವ ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದ ಮೇಲೆ ಪ್ರಾಬಲ್ಯ ಸಾಧಿಸಲಿದೆ ಎಂದಿದ್ದಾರೆ. ಈ ಹಿಂದೆ ಮೂರು ವರ್ಷಗಳ ಹಿಂದೆ ನಾನು ಟೀಂ ಇಂಡಿಯಾ ಕೋಚ್​ ಆಗಿದ್ದ ವೇಳೆ ಸಹ ಈ ಮಾತನ್ನ ನಾನು ಹೇಳಿದ್ದೆ. ಸದ್ಯದ ತಂಡ ವಿಶ್ವ ಕ್ರಿಕೆಟ್​​ನಲ್ಲಿ ಪ್ರಾಬಲ್ಯ ಸಾಧಿಸುವ ಎಲ್ಲ ರೀತಿಯ ಕೌಶಲ್ಯ ಹೊಂದಿದ್ದು, ಈಗಾಗಲೇ ಅದು ಸಾಬೀತುಗೊಂಡಿದೆ ಎಂದಿದ್ದಾರೆ. ಇದು ಕೇವಲ ಮೈದಾನಕ್ಕಿಳಿಯುವ 11 ಪ್ಲೇಯರ್​ಗಳಲ್ಲಿ ಮಾತ್ರವಲ್ಲ. ಹೊರಗಡೆ ಕುಳಿತುಕೊಳ್ಳುವ ಬೆಂಚ್ ಪ್ಲೇಯರ್ಸ್​​ಗಳಲ್ಲೂ ಈ ಪವರ್​ ಇದೆ ಎಂದಿದ್ದಾರೆ. ಈಗಾಗಲೇ ವಿದೇಶಿ ಪ್ರವಾಸದಲ್ಲಿದ್ದ ವೇಳೆ ಸಹ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರುತ್ತಿದ್ದು, ಮುಂದಿನ ದಿನಗಳಲ್ಲೂ ಈ ರೀತಿಯ ಪ್ರದರ್ಶನ ಮೂಡಿ ಬರಲಿದೆ ಎಂದಿದ್ದಾರೆ. ಈ ಹಿಂದೆ 2016ರಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದ ಅನಿಲ್​ ಕುಂಬ್ಳೆ 2017ರಲ್ಲಿ ಮುಕ್ತಾಯಗೊಂಡ ಐಸಿಸಿ ಚಾಂಪಿಯನ್​ ಟ್ರೋಫಿ ನಂತರ ಕೊಹ್ಲಿ ಜತೆಗಿನ ವೈಮನಸ್ಸಿನಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆಲ್​ ಪಂಜಾಬ್​ ತಂಡದ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದಾರೆ.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!