Hiring Reporter’s For more Information Contact Above Number 876 225 4007 . Program producer
Home / Breaking News / ಡ್ರಗ್ಸ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಡ್ರಗ್ಸ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

Spread the love

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಡ್ರಗ್ಸ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಇ.ಡಿ. ವಿಚಾರಣೆಗೆ ಹಾಜರಾಗಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಇ.ಡಿ. ಅಧಿಕಾರಿಗಳು ಬಿನೀಶ್ ಕೊಡಿಯೇರಿಗೆ ಸಮನ್ಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಂತಿನಗರದಲ್ಲಿರುವ ಇ.ಡಿ‌ ಕಚೇರಿಗೆ ಆಗಮಿಸಿರುವ ಬಿನೀಶ್ ನನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಅನೂಪ್ ಮಹಮ್ಮದ್ ಜೊತೆ ಬಿನೀಶ್ ಗೆ ನಂಟಿದೆ ಎಂದು ತಿಳಿದುಬಂದಿದೆ. ಅಲ್ಲದೇ ವಿಚಾರಣೆ ವೇಳೆ ಅನೂಪ್ ಕೂಡ ಬಿನೀಶ್ ಕುರಿತು ಬಾಯ್ಬಿಟ್ಟಿದ್ದ.

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್, ಪಬ್ ತೆರೆಯಲು ಬಿನೀಶ್ ಕೊಡಿಯೇರಿ ಅನೂಪ್ ಗೆ 50 ಲಕ್ಷ ರೂ. ಹಣ ನೀಡಿದ್ದರು. ಅಲ್ಲದೇ ಅನೂಪ್ ಹಾಗೂ ಬಿನೀಶ್ ನಡುವೆ ಮಾರ್ಚ್ 31ರಿಂದ ಆ.19ರವರೆಗೆ 58 ಬಾರಿ ಫೋನ್ ಕರೆಗಳು ಹೋಗಿರುವ ಬಗ್ಗೆ ಕಾಲ್ ಲಿಸ್ಟ್ ನಲ್ಲಿ ಪತ್ತೆಯಾಗಿದೆ.

ಡ್ರಗ್ಸ್ ಪೆಡ್ಲರ್ ಅನೂಪ್ ಹಾಗೂ ಬಿನೀಶ್ ನಡುವೆ ಅಕ್ರಮ ಹಣ ವರ್ಗಾವಣೆ ಆರೋಪವೂ ಇದೆ. ಅಲ್ಲದೇ ಕೇರಳದ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿಯೂ ಬಿನೀಶ್ ಹೆಸರು ಕೇಳಿಬಂದಿದೆ. ಈ ಎಲ್ಲಾ ಪ್ರಕರಣದ ಬಗ್ಗೆ ಇಂದು ಬಿನೀಶ್ ಕೊಡಿಯೇರಿಯನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!