Hiring Reporter’s For more Information Contact Above Number 876 225 4007 . Program producer
Home / Breaking News / ಕಲಾವಿದೆ ಶಾಂತಮ್ಮ ಪತ್ತಾರ ಇನ್ನಿಲ್ಲ

ಕಲಾವಿದೆ ಶಾಂತಮ್ಮ ಪತ್ತಾರ ಇನ್ನಿಲ್ಲ

Spread the love

ಇಳಕಲ್ (ಬಾಗಲಕೋಟೆ ಜಿಲ್ಲೆ): ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗಭೂಮಿಯ ಹಿರಿಯ ಕಲಾವಿದೆ, ಗಾಯಕಿ ಶಾಂತಮ್ಮ ಪತ್ತಾರ (74) ನಗರದಲ್ಲಿ ಬುಧವಾರ ನಿಧನರಾದರು. ಅವರಿಗೆ ಮೂವರು ಪುತ್ರಿಯರು ಇದ್ದಾರೆ.

13ನೇ ವಯಸ್ಸಿನಲ್ಲಿ ಬಳ್ಳಾರಿಯ ಲಲಿತ ಕಲಾ ಸಂಘದ ಮೂಲಕ ರಂಗಭೂಮಿ ಪ್ರವೇಶಿಸಿದ ಶಾಂತಮ್ಮ, ಎಚ್‌.ಟಿ. ಮಹಾಂತೇಶ ಶಾಸ್ತ್ರಿಗಳ ನಿರ್ದೇಶನದ ‘ಅಕ್ಕ-ತಂಗಿ’ ನಾಟಕದ ‘ಮಾಧುರಿ’ ಪಾತ್ರದ ಮೂಲಕ ರಂಗಪಯಣ ಆರಂಭಿಸಿದ್ದರು.

ನಂತರ ರೇಣುಕಾಚಾರ್ಯ ನಾಟ್ಯ ಸಂಘ, ಕಮತಗಿಯ ಬಿ.ಆರ್‌. ಅರಿಶಿಣಗೋಡಿ ಅವರ ‘ಶ್ರೀ ಹುಚ್ಚೇಶ್ವರ ನಾಟ್ಯ ಸಂಘ’, ಬಸವರಾಜ ಗುಡಗೇರಿ ಅವರ ಸಂಗಮೇಶ್ವರ ನಾಟ್ಯ ಸಂಘ, ಮಹಾಕೂಟೇಶ್ವರ ನಾಟ್ಯ ಸಂಘ, ಶಿವಯೋಗಮಂದಿರದ ಕುಮಾರೇಶ್ವರ ನಾಟ್ಯ ಸಂಘ ಹೀಗೆ ಹಲವಾರು ಕಂಪನಿಗಳ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು.

ಕಂದಗಲ್‌ ಹನಮಂತರಾಯರು, ಎಚ್‌.ಆರ್‌. ಭಸ್ಮೆ, ಪಿ.ಬಿ. ಧುತ್ತರಗಿ, ಎಚ್‌.ಎನ್. ಹೂಗಾರ, ಆರ್‌.ಡಿ. ಕಾಮತ್‌ರಂತಹ ದಿಗ್ಗಜರ ಜತೆ ಶಾಂತಮ್ಮ ಕೆಲಸ ಮಾಡಿದ್ದರು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!