Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಅಥಣಿ ಕಾಗವಾಡ ಉಪಚುನಾವಣೆ : ಮತದಾರರಲ್ಲಿ ಗೊಂದಲ, ಮುಖಂಡರಲ್ಲಿ ವೈಮನಸ್ಸು

ಅಥಣಿ ಕಾಗವಾಡ ಉಪಚುನಾವಣೆ : ಮತದಾರರಲ್ಲಿ ಗೊಂದಲ, ಮುಖಂಡರಲ್ಲಿ ವೈಮನಸ್ಸು

ಚಿಕ್ಕೋಡಿ:- ಕಾಂಗ್ರೆಸ್ ಪಕ್ಷದ ಹದಿನೈದು ಶಾಸಕರ ಅನರ್ಹತೆ ಹಿನ್ನೆಲೆಯಲ್ಲಿ ಉಪಚುನಾವಣೆ ನಿಗದಿಯಾಗಿದ್ದು, ಸದ್ಯ ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಕಾಗವಾಡ ಮತಕ್ಷೆತ್ರಗಳಲ್ಲಿ ಚುನಾವಣೆ ರಂಗೇರಿದೆ.

ಬಿಜೆಪಿ ಮುಖಂಡ ಹಾಗೂ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ನಿನ್ನೆಯಷ್ಟೆ ಕಾಂಗ್ರೆಸ್ ಪಕ್ಷದ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಇಂದು ದಿನೇಶ್ ಗುಂಡೂರಾವ್ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ. ಸದ್ಯ ಅಖಾಡದಲ್ಲಿ ಯಾರು ಯಾವ ಪಕ್ಷದಿಂದ ಸ್ಪರ್ದಿಸುತ್ತಾರೆ? ಬೆಂಬಲ ಯಾರಿಗೆ ಅನ್ನುವ ಗೊಂದಲದಲ್ಲಿ ಮತದಾರ ಇದ್ದಾರೆ.

ಇನ್ನೂ ರಾಜು ಕಾಗೆ ಅವರಿಗೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಅಬ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಸಾಧ್ಯತೆ ಇದ್ದು. ರಾಜು ಕಾಗೆ ಬೆಂಬಲಿಗರು ಹಾಗೂ ಬಿಜೆಪಿಯ ಕಾರ್ಯಕರ್ತರಲ್ಲಿ ಸದ್ಯ ಗೊಂದಲ ಮೂಡಿದೆ. ಅನರ್ಹರಿಂದಲೇ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ ಅನರ್ಹ ಶಾಸಕರಿಗೆ ಟಿಕೆಟ್ ನೀಡಿದರೆ ಮೂಲ ಬಿಜೆಪಿಗರು ಬಂಡಾಯ ಏಳುವ ಸಾಧ್ಯತೆ ಸ್ಪಷ್ಟವಾಗಿದ್ದು. ರಾಜು ಕಾಗೆಗೆ ಟಿಕೆಟ್ ಇಲ್ಲ ಎಂದು ಬಿ ಎಸ್ ವೈ ಹೇಳಿಕೆ ಬೆನ್ನಲ್ಲೆ ಬಂಡಾಯದ ಮಾತು ಆಡಿರುವ ರಾಜು ಕಾಗೆ ನಡೆ ಏನಾಗಲಿದೆ ಹಾಗೂ ಅನರ್ಹತೆ ಕುರಿತು ನ್ಯಾಯಾಲಯದ ತಿರ್ಪು ‌ಏನಾಗಲಿದೆ ಅನ್ನುವದರ ಮೇಲೆ ಅನರ್ಹರ ನಡೆ ಕೂಡ ಏನಾಗಲಿದೆ ಅನ್ನುವದು ಸದ್ಯ ಕೂತುಹಲ ಮೂಡಿಸಿದೆ.

Share

About Shaikh BIG TV NEWS, Hubballi

Check Also

ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ವೈದ್ಯಕೀಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ…!

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯೊಬ್ಬರು ಡೇತ್‌ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯ ಪ್ರಾಥಮಿಕ …

Leave a Reply

Your email address will not be published. Required fields are marked *

error: Content is protected !!