Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಗೆಲುವಿನ ಹಾದಿಯಲ್ಲಿ ಆಸ್ಟ್ರೇಲಿಯಾ ತಂಡ.

ಗೆಲುವಿನ ಹಾದಿಯಲ್ಲಿ ಆಸ್ಟ್ರೇಲಿಯಾ ತಂಡ.

 

ಬ್ರಿಸ್ಬೇನ್‌, ಆಸ್ಟ್ರೇಲಿಯಾ (ಎಎಫ್‌ಪಿ): ಬ್ಯಾಟ್‌ನಿಂದಲೂ, ಚೆಂಡಿನಿಂದಲೂ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿತು. ಶನಿವಾರ, ಮೂರನೇ ದಿನದ ಆಟದ ನಂತರ ಆತಿಥೇಯರು 1-0 ಮುನ್ನಡೆ ಹಾದಿಯಲ್ಲಿ ‌ದಿಟ್ಟ ಹೆಜ್ಜೆಯಿಟ್ಟಿದ್ದಾರೆ.
ಡೇವಿಡ್‌ ವಾರ್ನರ್‌ (154) ಅವರ ನಂತರ ಮಾರ್ನಸ್‌ ಲಾಬುಚಾನ್‌ (185) ಕೂಡ ಭರ್ಜರಿ ಶತಕ ದಾಖಲಿಸಿ, ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 580 ರನ್‌ಗಳ ಭಾರಿ ಮೊತ್ತ ಪೇರಿಸಲು ನೆರವಾದರು. ಪಾಕ್‌ ಮೊದಲ ಇನಿಂಗ್ಸ್‌ನಲ್ಲಿ 240 ರನ್‌ ಗಳಿಸಿತ್ತು.

ಆಸ್ಟ್ರೇಲಿಯಾಕ್ಕೆ ಮತ್ತೆ ಬ್ಯಾಟಿಂಗ್‌ ಮಾಡಿಸಬೇಕಾದರೆ ಪಾಕ್‌ ಇನ್ನೂ 276 ರನ್‌ ಗಳಿಸಬೇಕಾಗಿದೆ.

ವಾರ್ನರ್‌ ಅವರನ್ನು ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಡಿಸಿ ಔಟ್‌ ಮಾಡುವ ಮೂಲಕ, 16 ವರ್ಷದ ವೇಗಿ ನಸೀಮ್‌ ಷಾ ಟೆಸ್ಟ್‌ನಲ್ಲಿ ಮೊದಲ ವಿಕೆಟ್‌ ಪಡೆದರು. ಕ್ರೀಸ್‌ಗೆ ಬಂದ ಇನ್ನೊಬ್ಬ ಅಪಾಯಕಾರಿ ಆಟಗಾರ ಸ್ಟೀವನ್‌ ಸ್ಮಿತ್‌ ಬೌಂಡರಿಯೊಡನೆ ಇನಿಂಗ್ಸ್‌ ಆರಂಭಿಸಿದಾಗ ಪಾಕ್‌ ಪಾಳಯ ಢವಗುಟ್ಟಿತ್ತು. ಆದರೆ ಲೆಗ್‌ ಸ್ಪಿನ್ನರ್‌ ಯಾಸಿರ್‌ ಷಾ ಅವರನ್ನು ಬೌಲ್ಡ್‌ ಮಾಡಿದರು. ವಿಶೇಷ ಎಂದರೆ ಆರು ಟೆಸ್ಟ್ ಪಂದ್ಯಗಳಲ್ಲಿ ಏಳನೇ ಬಾರಿ ಸ್ಮಿತ್‌ ಅವರನ್ನು ಯಾಸಿರ್‌ ಬಲೆಗೆ ಕೆಡವಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಆಯಷಸ್‌ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಸ್ಟೀವನ್‌ ಸ್ಮಿತ್‌ ಗಾಯಾಳಾಗಿ ಟೆಸ್ಟ್‌ ಇತಿಹಾಸದ ಮೊದಲ ‘ಕಂಕಷನ್‌ ಸಬ್‌ಸ್ಟಿಟ್ಯೂಟ್‌’ ಆಗಿದ್ದ ಲಾಬುಚಾನ್‌ ನಾಲ್ಕು ಅರ್ಧ ಶತಕಗಳನ್ನು ದಾಖಲಿಸಿದ್ದರು. ಇಲ್ಲಿ 25 ವರ್ಷದ ಆಟಗಾರ ಮೊದಲ ಬಾರಿ ಅರ್ಧ ಶತಕವನ್ನು ಭರ್ಜರಿ ಶತಕವಾಗಿ ಪರಿವರ್ತಿಸಿದರು. 279 ಎಸೆತಗಳನ್ನು ಎದುರಿಸಿ 20 ಬೌಂಡರಿ ಬಾರಿಸಿದರು.
ಮೂರನೇ ದಿನದಾಟ ಮುಗಿದಾಗ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 64 ರನ್‌ ಗಳಿಸಿ ಕುಂಟುತಿತ್ತು.

Share

About Admin BIG TV NEWS

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!