Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕಬ್ಬಡ್ಡಿ / ಶ್ರೀಲಂಕಾ ವಿರುದ್ದ ಗೆಲುವಿನ ನಗೆ ಬೀರಿದ ಆಸ್ಟ್ರೇಲಿಯಾ ಪಡೆ.

ಶ್ರೀಲಂಕಾ ವಿರುದ್ದ ಗೆಲುವಿನ ನಗೆ ಬೀರಿದ ಆಸ್ಟ್ರೇಲಿಯಾ ಪಡೆ.

 

ಮೆಲ್ಬೋರ್ನ್​​​: ಪಾಕಿಸ್ತಾನಕ್ಕೆ ಟಿ-20 ಕ್ರಿಕೆಟ್​​ನಲ್ಲಿ ಸೋಲಿನ ರುಚಿ ತೋರಿಸಿದ್ದ ಶ್ರೀಲಂಕಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ​ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ. ಶ್ರೀಲಂಕಾ ವಿರುದ್ಧ ಮೆಲ್ಬರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 142 ರನ್​ ಗಳಿಸಿತ್ತು. ತಂಡದ ಪರ ವಿಕೆಟ್​ ಕೀಪರ್​ ಕುಸಾಲ್​ ಪೆರೆರಾ 57 ರನ್ ಕಲೆ ಹಾಕಿದ್ರು. David Warnerವಾರ್ನರ್​, ಫಿಂಚ್​​ನಿಗದಿತ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ತು. ನಾಯಕ ಆ್ಯರೊನ್​ ಫಿಂಚ್​​ 37 ಹಾಗೂ ವಾರ್ನರ್​​ ಅಜೇಯ 57ರನ್​ ಕೂಡಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಕೊನೆಯದಾಗಿ ತಂಡ 17.4 ಓವರ್​​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 145ರನ್​ಗಳಿಸಿ ಮಾಡಿ ಜಯಭೇರಿ ಬಾರಿಸಿತು. ಈ ಮೂಲಕ ವಾರ್ನರ್​ ಆಡಿರುವ ಮೂರು ಟಿ-20 ಪಂದ್ಯಗಳಿಂದ ಅಜೇಯರಾಗುಳಿದು 217 ರನ್ ​ಗಳಿಕೆ ಮಾಡಿದರು. ಪಂದ್ಯಶ್ರೇಷ್ಠ ಹಾಗು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗೆ ಅವರು ಭಾಜನರಾದರು. ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ ಕ್ರಿಕೆಟ್​ ಸರಣಿಗಾಗಿ ವಿಶ್ವದ ಎಲ್ಲಾ ತಂಡಗಳು ಸಜ್ಜುಗೊಳ್ಳುತ್ತಿವೆ. ಇದೀಗ ಆಸ್ಟ್ರೇಲಿಯಾಗೆ ಡೇವಿಡ್​ ವಾರ್ನರ್​ ಹಾಗೂ ಸ್ಟೀವ್​ ಸ್ಮಿತ್​ ಕಮ್​ಬ್ಯಾಕ್ ಮಾಡಿ ತಂಡದ ಆತ್ಮವಿಶ್ವಾಸ ಹಚ್ಚಿಸಿದ್ದಾರೆ.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!