Hiring Reporter’s For more Information Contact Above Number 876 225 4007 . Program producer
Home / Admin BIG TV NEWS

Admin BIG TV NEWS

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

ಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಕರ್ನಾಟಕದಲ್ಲಿ ಮಾನ್ಸೂನ್ ರೌದ್ರಾವತಾರ ತಾಳಿದ್ದು …

Read More »

ಉಪನ್ಯಾಸಕ ಹುದ್ದೆ ನೇಮಕಾತಿಗೆ ಮುಹೂರ್ತ ಫಿಕ್ಸ್

ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆ ನೇಮಕಾತಿಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಸೋಮವಾರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕೌನ್ಸೆಲಿಂಗ್ ನಡೆಸಿ ಸ್ಥಳ ನಿಯುಕ್ತಿ ಮಾಡಲು …

Read More »

ಕಾವೇರಿ ನದಿ ಪಾತ್ರದ ಜನರಿಗೆ ಶುರುವಾಯಿತ್ತು ಭೀತಿ

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೊಡಗಿನ ತಲಕಾವೇರಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್​ಎಸ್​ಗೆ ನೀರಿನ ಒಳಹರಿವು ಹೆಚ್ಚಾಗಿದೆ. ಅದೇ …

Read More »

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ

ಗದಗ: ಸರ್ಕಾರಿ ಆಸ್ಪತ್ರೆ ಎಂದರೆ ಕಳಪೆ ಎನ್ನುವ ಮನೋಭಾವ ಹಲವರದ್ದು. ಇದು ಬಡವರಿಗಾಗಿ ಮಾತ್ರ ಇರುವಂಥದ್ದು, ಆದ್ದರಿಂದಲೇ ಈ ಆಸ್ಪತ್ರೆಗೆ ಶ್ರೀಮಂತರು ಬರುವುದೇ ಇಲ್ಲ. ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದೇ ಬಹುತೇಕ ಎಲ್ಲರೂ ಆಡಿಕೊಳ್ಳುವುದು …

Read More »

ಪ್ರವಾಹದ ನೀರು ಉಕ್ಕಿ ಹರಿಯುವಾಗ ಸೆಲ್ಫಿ ತೆಗೆದರೆ ಎನ್ನು ಆಗುತ್ತಾ ಗೊತ್ತಾ…

ಹಾಸನ: ಪೊಲೀಸ್ ಇಲಾಖೆಯ ಎಚ್ಚರಿಕೆ ಮೀರಿ ನೀರಿನ ಬಳಿ ಸೆಲ್ಫಿ ತೆಗೆಯಲು ಮುಂದಾದುವ ಪುಂಡರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಸಲಾಗುವುದು ಎಂದು ನಾಮ ಫಲಕ ಹಾಕುವಂತೆ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ. …

Read More »

ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬೆಂಗಳೂರು- ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಹಣವಿಲ್ಲದೆ ರಾಜ್ಯಸರ್ಕಾರ ಕೈ ಚೆಲ್ಲುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. …

Read More »

ಅಮಿತ್ ಶಾಗೆ ಕೋವಿಡ್ ಪರೀಕ್ಷೆ ನಡೆಸಿಲ್ಲ: ಗೃಹ ಸಚಿವಾಲಯ ಸ್ಪಷ್ಟನೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿರುವುದಾಗಿ ಬಿಜೆಪಿ ಸಂಸದ ಮನೋಜ್ ತಿವಾರಿ ಟ್ವೀಟ್ ಮಾಡಿ, ಆಮೇಲೆ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ವಾರದ ಹಿಂದೆ …

Read More »

SSLC Result : ಪಾಸ್ ಆದ ವಿದ್ಯಾರ್ಥಿಗಳಿಗೆ ಮೊಬೈಲ್‌ಗೆ ಎಸ್‌ಎಂಎಸ್

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್ ಸಂದೇಶದ ಮೂಲಕ ಅಂಕಗಳ ವಿವರ ತಲುಪಲಿದೆ. ಇದಕ್ಕೆ‌ ಪ್ರತ್ಯೇಕ ನೋಂದಣಿ‌ ಅಗತ್ಯ ಇಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ …

Read More »

ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಮೋದಿ

ನವದೆಹಲಿ: ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಇದೇ ವೇಳೆ 8.5 ಕೋಟಿ ರೈತರಿಗೆ ಕಿಸಾನ್​ ಸಮ್ಮಾನ್​ ಯೋಜನೆಯ 6ನೇ ಕಂತಿನ 17 ಸಾವಿರ ಕೋಟಿ ರೂ. …

Read More »

ಅಮಿತ್ ಶಾ ಕೊರೋನಾದಿಂದ ಗುಣಮುಖ

ನವದೆಹಲಿ : ಕೊರೋನಾದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಕೊರೋನಾ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿದೆ. ಈ ಹಿಂದೆ ಕರೋನವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದ ಮತ್ತು ಚಿಕಿತ್ಸೆಗಾಗಿ ಗುರಗಾಂವ್‌ನ …

Read More »

ಕೇರಳ ವಿಮಾನ ದುರಂತದ ಹಿಂದಿನ ಕಾರಣ ಬಹಿರಂಗ.?

ಕೇರಳದ ಕೋಯಿಕ್ಕೋಡ್ ನಲ್ಲಿ ನಲ್ಲಿ ಶುಕ್ರವಾರ ನಡೆದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಹದಿನೆಂಟು ಮಂದಿ ಮೃತಪಟ್ಟಿದ್ದಾರೆ. ಈ ದುರಂತದ ಹಿಂದಿನ ಕಾರಣವನ್ನು ಪತ್ತೆ ಹಚ್ಚುವ …

Read More »

ರೈತರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಕೃಷಿ ಮೂಲಸೌಕರ್ಯ ನಿಧಿಯಡಿ ವಿವಿಧ ಸೌಲಭ್ಯ ಒದಗಿಸುವ 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಪ್ರಧಾನಿ ಇಂದು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಯೋಜನೆಗೆ ಚಾಲನೆ …

Read More »

ಜನಸಾಗರ ಸೆಳೆಯುತ್ತಿದೆ ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ

ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ ಪ್ರತಿಮೆಯೊಂದಕ್ಕೆ ನಮಿಸಲು ಇಟಲಿಯನ್ನರು ಒಂದೆಡೆ ಸೇರಿದ್ದಾರೆ. ಈ ಘಟನೆಯು, ಇಲ್ಲಿನ ಕಾರ್ಮಿಯಾನೋ ಲೆಚ್ಚೆ ಎಂಬ ಊರಿನ ಪಾವೋಲಿನೋ ಅರ್ನೆಸಾನೋ ಚೌಕದ ಬಳಿ ಘಟಿಸಿದೆ. 1943ರಲ್ಲಿ ಸ್ಥಾಪಿಸಲಾದ ಪ್ರತಿಮೆಯ …

Read More »

ಬಾದಾಮಿ ಕ್ಷೇತ್ರದಲ್ಲಿ ನೆರೆ ಮುನ್ನೆರಿಕೆ ವಹಿಸಲು ಡಿಸಿಗೆ ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಪ್ರವಾಹ ಭೀತಿ ಎದುರಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದ ಗ್ರಾಮಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಅವರೊಂದಿಗೆ ದೂರವಾಣಿ ಮೂಲಕ …

Read More »

5 ಜಿಲ್ಲೆಗಳಲ್ಲಿ ಇಂದು ‘ರೆಡ್ ಅಲರ್ಟ್’

ಬೆಂಗಳೂರು: ರಾಜ್ಯದ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆ.9ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. …

Read More »

ನಟ ಸಂಜಯ್‌ ದತ್ತ್‌ ಆರೋಗ್ಯದಲ್ಲಿ ತೀವ್ರ ಏರುಪೇರು: ಆಸ್ಪತ್ರೆಗೆ ದಾಖಲು

ಬಾಲಿವುಡ್ ನಟ ಸಂಜಯ್ ದತ್ ಅವರು ಶನಿವಾರ ಸಂಜೆ ಉಸಿರಾಟದ ತೊಂದರೆ ಹಾಗೂ ಎದೆನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ನಟ ಸಂಜಯ್ ದತ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ . …

Read More »

ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ: ಪ್ರಮೋದ್​ ಮುತಾಲಿಕ್​

ವಿಜಯಪುರ: ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್​ ಮುತಾಲಿಕ್​ ಹೇಳಿದ್ದಾರೆ. ಬಾರ್, ಮಾಲ್​ಗಳನ್ನು ತೆರೆಯಲು ಅವಕಾಶ ಕೊಡ್ತಾರೆ, ಗಣಪತಿಗೆ ಏಕೆ ಅವಕಾಶ ಇಲ್ಲ? …

Read More »

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದ ಬಿಎಸ್ ವೈ

ಬೆಂಗಳೂರು- ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ಬಗ್ಗೆ ಸಂತಸವ್ಯಕ್ತಪಡಿಸಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಗ್ಗೆ …

Read More »

ಮುಕೇಶ್ ಅಂಬಾನಿ ಈಗ ವಿಶ್ವದ 4ನೇ ಅತಿದೊಡ್ಡ ಶ್ರೀಮಂತ

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದೀಗ ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಕೇಶ್‌ ಯೂರೋಪಿನ ಶ್ರೀಮಂತ ವ್ಯಕ್ತಿ ಬರ್ನಾಲ್ಡ್‌ ಅರ್ನಾಲ್ಟ್‌ರನ್ನೇ ಹಿಂದಿಕ್ಕಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ …

Read More »

ತೋಟಗಾರಿಕೆ ಪಿತಾಮಹ ಡಾ. ಎಂ.ಹೆಚ್. ಮರಿಗೌಡ ಅವರ 104 ನೇ ಜನ್ಮದಿನ

ಬೆಂಗಳೂರು: ತೋಟಗಾರಿಕೆ ಪಿತಾಮಹ ಡಾ. ಎಂ.ಹೆಚ್. ಮರಿಗೌಡ ಅವರ 104 ನೇ ಜನ್ಮದಿನದ ಅಂಗವಾಗಿ ತೋಟಗಾರಿಕೆ ದಿನ ಆಚರಿಸಲಾಯಿತು. ಲಾಲ್ ಭಾಗ್ ನಲ್ಲಿರುವ ಮರಿಗೌಡ ಅವರ ಪುತ್ತಳಿಗೆ ತೋಟಗಾರಿಕೆ ಸಚಿವ ಡಾ| ನಾರಾಯಣಗೌಡ ಅವರು …

Read More »

ಮುಂಬೈ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದಲ್ಲಿನ ಎರಡನೇಯ ಬ್ಯುಸಿಯಾಗಿರುವ ವಿಮಾನ ನಿಲ್ದಾಣ ಎನಿಸಿಕೊಂಡಿದೆ. o ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇತ್ತೀಚಿಗೆ ಬಿಡುಗಡೆ ಮಾಡಿರುವ ಅಂಕಿಸಂಖ್ಯೆಗಳ ಪ್ರಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ …

Read More »

ವಿಮಾನ ದುರಂತ: ಮೃತಪಟ್ಟ ಕುಟುಂಬಕ್ಕೆ ಪರಿಹಾರ ಘೋಷಿಸಿದ ಕೇರಳ

ತಿರುವನಂತಪುರಂ: ಕೋಳಿಕ್ಕೋಡ್ ವಿಮಾನ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕೇರಳ ಸರ್ಕಾರ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಶುಕ್ರವಾರ ರಾತ್ರಿ ದುಬೈನಿಂದ ಕೇರಳದ ಕೋಳಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನ …

Read More »

ಬಾಲಿವುಡ್ ‘ನಟ ಅಭಿಷೇಕ್ ಬಚ್ಚನ್’ ಕೊರೋನಾದಿಂದ ಗುಣಮುಖ

ನವದೆಹಲಿ : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರಿಗೂ ಜುಲೈ 11ರಂದು ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಮೂಲಕ ಬಿಗ್ ಬೀ ಅಮಿತಬ್ ಬಚ್ಚನ್ ಹಾಗೂ ಪುತ್ರ ಅಭಿಷೇಕ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿ …

Read More »

ಕೊರೊನಾ ಆತಂಕದ ನಡುವೆಯೇ ಗುಡ್ ನ್ಯೂಸ್‌

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 6670 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 1,64,924 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 3951 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದುವರೆಗೆ 84,232 …

Read More »

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ ಹತ್ಯೆ ಪ್ಲಾನ್ ನಡೆದಿತ್ತು. ಮರುದಿನ …

Read More »

ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2020-21 ನೇ ಸಾಲಿನ ವಿಕಲಚೇತನರಿಗೆ ವಿದ್ಯಾರ್ಥಿ ವೇತನ ಮತ್ತು ಪ್ರೋತ್ಸಾಹಧನ ಯೋಜನೆಯಡಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಒಂದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗಿನ …

Read More »

ಉದ್ಯೋಗಕಾಂಕ್ಷಿಗಳಿಗೆ SBIನಿಂದ ಗುಡ್‌ ನ್ಯೂಸ್‌

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸರ್ಕಲ್ ಆಧಾರಿತ ಅಧಿಕಾರಿಗಳ (ಸಿಬಿಒ) ಹುದ್ದೆಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 16 ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ …

Read More »

ಇನ್ನು ಮೂರೇ ದಿನಕ್ಕೆ KRS ಜಲಾಶಯ ಭರ್ತಿ: ಜನರಲ್ಲಿ ಹೆಚ್ಚಿದ ಆತಂಕ

ಮಂಡ್ಯ : ಮಂಡ್ಯ, ಮೈಸೂರು ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಜಲಾಶಯ ಭರ್ತಿಯಾಗುವ ಹಂತಕ್ಕೆ ಬಂದಿದೆ. ಕೆ.ಆರ್.ಎಸ್. ಡ್ಯಾಂ ಮೇಲ್ಭಾಗದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬಹುತೇಕ …

Read More »

ಗ್ರಾಮೀಣ ಭಾಗಗಳಲ್ಲಿ ಎಂಎಸ್‌ಐಎಲ್ ಮದ್ಯದಂಗಡಿ ತೆರೆಯುವ ಚಿಂತನೆಯನ್ನು ಕೈಬಿಡಿ : ಕುಮಾರಸ್ವಾಮಿ

ಬೆಂಗಳೂರು : ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿ ಬಿದ್ದಿರುವ ಅಬಕಾರಿ ಇಲಾಖೆ ಆನ್ಲೈನ್ ಮೂಲಕ ‘ಮನೆ ಬಾಗಿಲಿಗೆ ಮದ್ಯ’ ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್‌ಐಎಲ್ ಮದ್ಯದಂಗಡಿ ತೆರೆಯುವ ಪ್ರಸ್ತಾವನೆ ಅಥವಾ ಚಿಂತನೆಯನ್ನು ಕೈಬಿಡುವಂತೆ ಮಾಜಿ …

Read More »

ಮನೆಯಲ್ಲೇ ಕುಳಿತು ಸ್ಮಾರ್ಟ್‌ ಫೋನ್‌ ಮೂಲಕ ʼಪಡಿತರ ಚೀಟಿʼಯನ್ನು ಪಡೆಯಲು ಹೀಗೆ ಮಾಡಿ

ನವದೆಹಲಿ : ಭಾರತದಲ್ಲಿ ಒನ್ ನೇಷನ್ ಒನ್ ರೇಷನ್ ಕಾರ್ಡ್ ಪರಿಚಯಿಸಿದಾಗಿನಿಂದ ರೇಷನ್ ಕಾರ್ಡ್‌ನ ಮಹತ್ವ ಹೆಚ್ಚಾಗಿದೆ. ಇದನ್ನು ಅಗ್ಗದ ಪಡಿತರಕ್ಕಾಗಿ ಮಾತ್ರವಲ್ಲ, ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ. ಇದರ ಪ್ರಾಮುಖ್ಯತೆ ಈಗ ಆಧಾರ್ ಕಾರ್ಡ್ …

Read More »

ವರುಣನ ಆರ್ಭಟಕ್ಕೆ ನಡುಗಿದ ಕರಾವಳಿ ಭಾಗ

ಮಂಗಳೂರ: ದ.ಕ. ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕು ಸಹಿತ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಭಾರಿ ಗಾಳಿ ಮಳೆ ಮುಂದುವರಿದಿದ್ದು, ನೆರೆ-ಪ್ರವಾಹ, ಗುಡ್ಡ ಕುಸಿತ, ಮನೆಗಳಿಗೆ ಹಾನಿ ಮೊದಲಾದವುಗಳಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕುಕ್ಕೆ …

Read More »

ತಬ್ಲೀಗ್‌ ಸಮಾವೇಶ: 9 ವಿದೇಶಿಯರಿಗೆ 10 ವರ್ಷ ನಿರ್ಬಂಧ

ಬೆಂಗಳೂರು: ತಬ್ಲೀಗ್‌ ಜಮಾತ್ ಸಮಾವೇಶದ ಅಂಗವಾಗಿ ರಾಜ್ಯದಲ್ಲಿದ್ದ ಒಂಬತ್ತು ವಿದೇಶಿಯರ(ದಕ್ಷಿಣ ಆಫ್ರಿಕಾ ಮತ್ತು ಇಂಡೋನೇಷ್ಯಾದವರು) ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದು ಪಡಿಸಿರುವ ಹೈಕೋರ್ಟ್, ಮುಂದಿನ 10 ವರ್ಷ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂಬ ಪ್ರಮಾಣ …

Read More »

ರನ್​ವೇಯಿಂದ ಜಾರಿದ 191 ಪ್ರಯಾಣಿಕರಿದ್ದ ಏರ್​ ಇಂಡಿಯಾ ವಿಮಾನ: ಅಪ್ಪಳಿಸಿದ ರಭಸಕ್ಕೆ ಎರಡು ಭಾಗ!

ತಿರುವನಂತಪುರಂ​: ದುಬೈನಿಂದ 191 ಪ್ರಯಾಣಿಕರನ್ನು ಹೊತ್ತು ಕೇರಳ ತಲುಪಿದ ಏರ್​ ಇಂಡಿಯಾ ವಿಮಾನ ಕೋಳಿಕ್ಕೊಡ್​ ವಿಮಾನ ನಿಲ್ದಾಣ ರನ್​ವೇನಲ್ಲಿ ಸ್ಕಿಡ್​ ಆಗಿದ್ದು, ಅಪ್ಪಳಿಸಿದ ರಭಸಕ್ಕೆ ಎರಡು ಭಾಗವಾಗಿದೆ. ಶುಕ್ರವಾರ ರಾತ್ರಿ 7.40ರ ಸುಮಾರಿಗೆ ಭಾರಿ …

Read More »

ದೇಶದ ಮೊದಲ ಕಿಸಾನ್ ರೈಲಿಗೆ ಚಾಲನೆ

ಬೆಳಗಾವಿ: ದೇಶದ ಮೊಟ್ಟ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಹಸಿರುನಿಶಾನೆ ತೋರಿದ ಕಾರ್ಯಕ್ರಮವನ್ನು ಇಲ್ಲಿನ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ …

Read More »

ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮಂಡ್ಯ: ಬಿಸಿಯೂಟ ನೌಕರರಿಗೆ ಏಪ್ರಿಲ್‌ನಿಂದ ವೇತನ ಪಾವತಿ ಮಾಡಬೇಕು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸೋಂಕಿಗೆ ತುತ್ತಾದ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ₹10 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ, …

Read More »

ರಾಷ್ಟ್ರೀಯ ಶಿಕ್ಷಣ ನೀತಿಯು 21 ನೇ ಶತಮಾನದ ಭಾರತಕ್ಕೆ ಅಡಿಪಾಯ ಹಾಕಲಿದೆ : ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ‘ರಾಷ್ಟ್ರೀಯ ಶಿಕ್ಷಣ ನೀತಿಯಡಿ ಉನ್ನತ ಶಿಕ್ಷಣದಲ್ಲಿ ಪರಿವರ್ತನಾ ಸುಧಾರಣೆಗಳ ಸಮಾವೇಶ’ ಉದ್ಘಾಟಿಸಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ : – …

Read More »

ಉದ್ಯೋಗಿಗಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಗ್ರಾಚುಟಿ ಮಿತಿ ಒಂದು ವರ್ಷಕ್ಕೆ ಇಳಿಕೆ ಮಾಡಲಾಗುವುದು ಎಂದು ಹೇಳಲಾಗಿದೆ. ಗ್ರಾಚುಟಿ ಪಾವತಿಗೆ ಐದು ವರ್ಷಗಳ ಸೇವೆ ಕಡ್ಡಾಯ ಎಂಬ ನಿಯಮವನ್ನು ಒಂದು ವರ್ಷಕ್ಕೆ ಇಳಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. …

Read More »

ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ

ನವದೆಹಲಿ : ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಗುರುವಾರ ತನ್ನ ನಿಧಿ ಆಧಾರಿತ ಸಾಲ ದರದ (ಎಂಸಿಎಲ್‌ಆರ್) ಕನಿಷ್ಠ ವೆಚ್ಚವನ್ನು ವಿವಿಧ ಸಾಲಗಾರರಗೆ ಅನ್ವಯವಾಗುವಂತೆ 30 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿತಗೊಳಿಸಿದೆ. ರಾತ್ರಿಯ ಮತ್ತು ಒಂದು …

Read More »

ಚೌಡಯ್ಯ ಫಲಕ ತೆರವು ಗೊಳಿಸಲು ಡಿಎಸ್‌ಎಸ್‌ ಆಗ್ರಹ

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಪಕ್ಕದಲ್ಲಿ ಒಂದು ವಾರದ ಹಿಂದೆ ರಾತ್ರೋ ರಾತ್ರಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕವನ್ನು ತಾಲ್ಲೂಕಿನ ಅರಿಕೇರಾ (ಕೆ) ಗ್ರಾಮದ ವೃತ್ತದಲ್ಲಿ ಹಾಕಿದ್ದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ …

Read More »

2500 ಕ್ಕೂ ಹೆಚ್ಚು ಚೀನೀ ಯೂಟ್ಯೂಬ್ ಚಾನೆಲ್ ಡಿಲೀಟ್‌ ಮಾಡಿದ ಗೂಗಲ್‌

ಭಾರತ ಚೀನಾ ನಡುವೆ ಎಲ್‌ಎಸಿಯಲ್ಲಿ ಉದ್ವಿಗ್ನತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಅಮೆರಿಕ ಕೂಡ ಚೀನಾದ ಮೇಲೆ ಕೋಪಗೊಂಡಿದೆ. ಈ ನಡುವೆ , ಯುಎಸ್ ಮತ್ತು ಯುಎಸ್ ಕಂಪನಿಗಳು ಚೀನಾದ ಮೇಲೆ ಕಟ್ಟುನಿಟ್ಟನ್ನು ಕ್ರಮಗಳನ್ನು …

Read More »

ಕೊರೊನಾ ಆತಂಕದ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್

ಕೊರೋನಾ ಚಿಕಿತ್ಸೆಯಲ್ಲಿ ಬಳಕೆಯಾಗುವ ರೆಮ್ ಡಿಸಿವರ್ ಔಷಧ ಸಿಗದೇ ಕೊರೊನಾ ಸೋಂಕಿತರು ಪರದಾಡುವಂತಾಗಿದೆ ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ಚಿಕಿತ್ಸೆಗೆ ರೆಮ್ ಡಿಸಿವರ್ ಔಷಧ ಬಳಕೆ ಮಾಡಲಾಗುತ್ತದೆ. ಕೊರೋನಾ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವ …

Read More »

ಆ.10ರಂದು SSLC ಫಲಿತಾಂಶ ಪ್ರಕಟ : ಸಚಿವ ಎಸ್ ಸುರೇಶ್ ಕುಮಾರ್

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆದಿದ್ದಂತ ರಾಜ್ಯದ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ, ಆಗಸ್ಟ್ 10ರಂದು ರಾಜ್ಯದಲ್ಲಿ ಪ್ರಕಟಗೊಳ್ಳಲಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ …

Read More »

ಭಾರೀ ಮಳೆಯಿಂದ ತತ್ತರಿಸಿದ ಜನತೆಗೆ ಮತ್ತೆ ಶಾಕಿಂಗ್ ನ್ಯೂಸ್

ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ. ಹವಾಮಾನ ಇಲಾಖೆ ವರದಿಯ ಅನ್ವಯ ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ …

Read More »

ಸತತ ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ಗೆ ಮತ್ತೊಂದು ಶಾಕ್

ನವದೆಹಲಿ: ಕೆಲವು ವರ್ಷಗಳಿಂದ ರಾಜಕೀಯವಾಗಿ ಭಾರಿ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿರುವ ಕೇಂದ್ರ ಕಚೇರಿಯನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಲೀಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಎಐಸಿಸಿ ಕೇಂದ್ರ ಕಚೇರಿ ಸೇರಿದಂತೆ …

Read More »

ಆಗಸ್ಟ್ 11ರವರೆಗೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇನ್ನು ನಾಲ್ಕು ದಿನ ಮಳೆಯಾಗುವ ಭೀತಿ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡಿನ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮುಂದುವರಿಸಲಾಗಿದೆ. ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ 4 …

Read More »

ಜಿ.ಸಿ.ಮುರ್ಮು ಭಾರತದ ನೂತನ ಸಿಎಜಿ

ನವದೆಹಲಿ: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ನೂತನ ಕಂಪ್ಟ್ರೋಲರ್ ಆಯಂಡ್ ಆಡಿಟ್ ಜನರಲ್​(ಸಿಎಜಿ) ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ನಿನ್ನೆ ತಡರಾತ್ರಿ ಈ …

Read More »

ಅಗ್ನಿ ಅವಘಡ : ಸಂತಾಪ ಸೂಚಿಸಿ ಪರಿಹಾರ ಘೋಷಿಸಿದ ಪ್ರಧಾನಿ

ಅಹ್ಮದಾಬಾದ್ : ಗುಜರಾತಿನ ಅಹ್ಮದಾಬಾದ್ ಕೋವಿಡ್-19 ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ರೂ.2ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಈ …

Read More »

‘ವರ್ಗಾವಣೆ’ ನಿರೀಕ್ಷೆಯಲ್ಲಿದ್ದ ಪಿಯು ಉಪನ್ಯಾಸಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ರಾಜ್ಯವನ್ನು ಕೊರೊನಾ ಕಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಇದರ ಮಧ್ಯೆಯೂ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯದ ಪರೀಕ್ಷೆ ನಡೆದಿದ್ದು ಫಲಿತಾಂಶವೂ ಹೊರಬಿದ್ದಿದೆ. ಸಿಇಟಿ …

Read More »

ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದ RBI

ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಪರಿಶೀಲನಾ ಸಭೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ನೆಮ್ಮದಿ ಸುದ್ದಿ ಸಿಕ್ಕಿಲ್ಲ. ಮೂರು ದಿನಗಳ ಕಾಲ ನಡೆದ ಈ ಸಭೆಯಲ್ಲಿ ರೆಪೊ ದರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ರೆಪೊ ದರದಲ್ಲಿ …

Read More »

ರಂಗಭೂಮಿ ಕಲಾವಿದ ಕೋಗಳಿ ಪಂಪಣ್ಣ ನಿಧನ

ಹೊಸಪೇಟೆ: ಹಿರಿಯ ರಂಗಭೂಮಿ ಕಲಾವಿದ ಕೋಗಳಿ ಪಂಪಣ್ಣ (78) ಅವರು ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.ಕೋಗಳಿ ಪಂಪಣ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬಳ್ಳಾರಿ ಜಿಲ್ಲೆ ಕೊಟ್ಟೂರು ತಾಲ್ಲೂಕಿನ ಕೋಗಳಿ ಗ್ರಾಮದ ಪಂಪಣ್ಣ ಅವರು ರಂಗಭೂಮಿ …

Read More »

ವರುಣನ ಆರ್ಭಟ: 6 ಕೆಳಹಂತದ ಸೇತುವೆಗಳು ಜಲಾವೃತ

ಬೆಳಗಾವಿ: ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಚಿಕ್ಕೋಡಿ ಭಾಗದ ಆರು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಇದರಿಂದ …

Read More »

2020ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಸಾಧ್ಯತೆ!

ಕರ್ನಾಟಕ ಸೆಕಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ಈ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ. ಜುಲೈ 20ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ …

Read More »

ನವರಂಗಪುರ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಎಂಟು ರೋಗಿಗಳ ಸಜೀವ ದಹನ

ಅಹಮದಾಬಾದ್​: ನವರಂಗಪುರದ ಶ್ರೇಯ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಭಾರಿ ಅಗ್ನಿ ಅನಾಹುತ ಸಂಭವಿಸಿದ್ದು, 8 ರೋಗಿಗಳು ಸಜೀವ ದಹನವಾಗಿದ್ದಾರೆ. ಅಗ್ನಿ ಅನಾಹುತ ಸಂಭವಿಸುತ್ತಲೇ ಆಸ್ಪತ್ರೆಯಲ್ಲಿದ್ದ 35 ರೋಗಿಗಳನ್ನು ಸ್ಥಳಾಂತರಿಸುವಲ್ಲಿ ಆಡಳಿತ ಮಂಡಳಿ ಯಶಸ್ವಿಯಾಗಿದೆ. ಶ್ರೇಯ್ …

Read More »

ಕೇಂದ್ರ ಸರ್ಕಾರದಿಂದ ಉದ್ಯೋಗಸ್ಥರಿಗೆ ಸಿಹಿ ಸುದ್ದಿ

ನವದೆಹಲಿ: ಗ್ರ್ಯಾಚುಟಿ ಪಾವತಿಗಾಗಿ ಐದು ವರ್ಷಗಳ ನಿರಂತರ ಸೇವೆಯ ಪ್ರಸ್ತುತ ನಿಯಂತ್ರಣವನ್ನು ಒಂದು ವರ್ಷಕ್ಕೆ ಇಳಿಸಬೇಕು ಎಂದು ಅಪಾರ್ಲಿಮೆಂಟರಿ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕ ಅಡೆತಡೆಗಳಿಂದಾ ಹೆಚ್ಚಿನ ಮಂದಿಯನ್ನು ಕೆಲಸದಿಂದ …

Read More »

ರಾಮ ಜನ್ಮಭೂಮಿ ಇಂದು ಮುಕ್ತವಾಗಿದೆ, ಮಂದಿರ ಮೇಲೆದ್ದು ನಿಲ್ಲಲಿದೆ: ಪ್ರಧಾನಿ ಮೋದಿ

ಅಯೋಧ್ಯೆ: ರಾಮ ಜನ್ಮಭೂಮಿ ಇಂದು ಮುಕ್ತವಾಗಿದೆ. ಎಲ್ಲಿ ಕೆಡವಲಾಗಿತ್ತೋ ಅಲ್ಲೇ ಮಂದಿರ ಮೇಲೆದ್ದು ನಿಲ್ಲಲಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ‘ಜೈ ಶ್ರೀರಾಮ್’ ಘೋಷಣೆ ಮೊಳಗಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ …

Read More »

ಆಗಸ್ಟ್ 7 ರಿಂದ ರೈತರಿಗಾಗಿ ‘ಫಾರ್ಮರ್ ಸ್ಪೆಷಲ್ ಪಾರ್ಸೆಲ್ ರೈಲು’ ಸಂಚಾರ : ಇಲ್ಲಿದೆ ಇದರ ಬಗ್ಗೆ ಮಾಹಿತಿ

ನವದೆಹಲಿ. ಕೊರೊನಾವೈರಸ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ರೈತರಿಗೆ ಸಹಾಯ ಮಾಡಲು ಭಾರತೀಯ ರೈಲ್ವೆ ದೊಡ್ಡ ಹೆಜ್ಜೆ ಇಟ್ಟಿದೆ. ರೈತರಿಗಾಗಿ ಕಿಸಾನ್ ವಿಶೇಷ ಪಾರ್ಸೆಲ್ ರೈಲು ಓಡಿಸಲು ರೈಲ್ವೆ ನಿರ್ಧರಿಸಿದೆ. ಸೆಂಟ್ರಲ್ ರೈಲ್‌ನ ‘ಕಿಸಾನ್ ಸ್ಪೆಷಲ್ ಪಾರ್ಸೆಲ್ …

Read More »

ಗೃಹ ಇಲಾಖೆ ಕಾರ್ಯದರ್ಶಿಯಾಗಿ ಡಿ.ರೂಪ ಅಧಿಕಾರ ಸ್ವೀಕಾರ

ಬೆಂಗಳೂರು: ಗೃಹ ಇಲಾಖೆಯ ಕಾರ್ಯದರ್ಶಿಯಾಗಿ ಐಪಿಎಸ್​ ಅಧಿಕಾರಿ ಡಿ.ರೂಪ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಹಲವು ಐಪಿಎಸ್ ಅಧಿಕಾರಿಗಳನ್ನ ಸರ್ಕಾರ ವರ್ಗಾವಣೆ ಮಾಡಿತ್ತು. ರೈಲ್ವೆ ಇಲಾಖೆಯ ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೂಪ ಅವರನ್ನ ಗೃಹ …

Read More »

ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ಇಂದು ನನಸು: H.D ಕುಮಾರಸ್ವಾಮಿ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಭಾರತೀಯರ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ. ಅದಕ್ಕೂ ಮಿಗಿಲಾಗಿ ಇದು ಭಾವನಾತ್ಮಕ ಸನ್ನಿವೇಶ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ …

Read More »

ಅಯೋಧ್ಯೆ ಪೂಜೆ: ‘ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ’- ಓವೈಸಿ

ಲಕ್ನೌ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರುತ್ತಿದೆ. ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ. ಆದರೆ ಮತ್ತೊಂದೆಡೆ ‘ಬಾಬರಿ ಮಸೀದಿ ಘಟನೆಯನ್ನು ಅಯೋಧ್ಯೆಯ ಪರಂಪರೆಯಿಂದ ಅಳಿಸಲಾಗುವುದಿಲ್ಲ’ …

Read More »

ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಅಯೋಧ್ಯೆಯಲ್ಲಿಂದು ಹಬ್ಬ. ವೇದ ಮಂತ್ರಗಳ ಪಠಣ, ಶಂಖ ನಾದಗಳ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದಾರೆ. ಇಂದು ಬೆಳಗ್ಗೆ ಅಯೋಧ್ಯೆಯ ರಾಮಜನ್ಮಭೂಮಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮಲಲ್ಲಾ ವಿಗ್ರಹಕ್ಕೆ …

Read More »

ಮಾಜಿ ಶಾಸಕ ವಾಟಾಳ್ ನಾಗರಾಜ್ ಪತ್ನಿ ನಿಧನ

ಬೆಂಗಳೂರು: ಮಾಜಿ ಶಾಸಕ ಕನ್ನಡ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಅವರಿಗೆ ಇಂದು ಪತ್ನಿ ವಿಯೋಗವಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಜ್ಞಾನಾಂಬಿಕೆ ವಾಟಾಳ್ ನಾಗರಾಜ್ (60ವರ್ಷ) ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ …

Read More »

ಐತಿಹಾಸಿಕ ಭವ್ಯ ರಾಮಮಂದಿರಕ್ಕೆ ಮೋದಿಯಿಂದ ಭೂಮಿಪೂಜೆ

ಲಕ್ನೋ: ಅಯೋಧ್ಯೆ ರಾಮಮಂದಿರ ಭೂಮಿ ಪೂಜನಾ ಕಾರ್ಯಕ್ರಮವು ಆಗಸ್ಟ್ 5 ರಂದು ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇವಾಲಯದ ಮುಖ್ಯ ಶಿಲೆಯನ್ನು ಗರ್ಭಗ್ರಹದಲ್ಲಿ ಇರಿಸುವ ಮೂಲಕ ದೇವಾಲಯದ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.ಐತಿಹಾಸಿಕ ಸಂಭ್ರಮಕ್ಕೆ ಉತ್ತರ …

Read More »

ಗಮನ ಸೆಳೆದ ಮೋದಿ ಸಾಂಪ್ರದಾಯಿಕ ಉಡುಗೆ

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾಗಲಿದ್ದಾರೆ. ನರೇಂದ್ರ ಮೋದಿ ದೆಹಲಿಯಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಮೋದಿ ಸಾಂಪ್ರದಾಯಿಕ ಧೋತಿ ಹಾಗೂ ಕುರ್ತಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮೋದಿ ಹಳದಿ ಮಿಶ್ರಿತ …

Read More »

ಮನೆಗೆಲಸದ ಮಹಿಳೆಯ ಸನ್ಮಾನಿಸಿ ಬೀಳ್ಕೊಡುಗೆ

ಕುಮಟಾ: ಪಟ್ಟಣದ ವಿವೇಕನಗರದ ಮನೆಯೊಂದರಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದ ಮಹಿಳೆಗೆ ನಿವೃತ್ತಿ ನೀಡಿ, ಆರ್ಥಿಕ ನೆರವಿನೊಂದಿಗೆ ಮನೆಯವರೆಲ್ಲ ಬೀಳ್ಕೊಟ್ಟರು. ದಯಾ ಹೆಗಡೆ ಹಾಗೂ ಗಣಪತಿ ಹೆಗಡೆ ದಂಪತಿ ಮನೆಯಲ್ಲಿ ಪುರಂದರಿ ನಾಯ್ಕ 25 …

Read More »

ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣ

ಬೆಂಗಳೂರು: ರಾಜ್ಯದಲ್ಲಿ ಕೊರೋನ ಆತಂಕದ ನಡುವೆಯೇ ನಡೆದಿದ್ದ ಎಸೆಸೆಲ್ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಅಂತಿಮಗೊಂಡಿದ್ದು, ಪರೀಕ್ಷೆ ಬರೆದಿರುವ 8.5 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಈ ವಾರದಲ್ಲಿಯೇ ನಿರ್ಧಾರವಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ 220 ಕೇಂದ್ರಗಳಲ್ಲಿ ಮೌಲ್ಯಮಾಪನ …

Read More »

ರಾಮ ಮಂದಿರ ಭೂಮಿ ಪೂಜೆ ಮಹೋತ್ಸವಕ್ಕೆ ಅಯೋಧ್ಯೆದ ಅಲಂಕಾರದ ಛಾಯಾಚಿತ್ರಗಳು ಇಲ್ಲಿದೆ ನೋಡಿ

ಅಯೋಧ್ಯೆ: ರಾಮ ಮಂದಿರ ಭೂಮಿ ಪೂಜೆಯನ್ನು ಒಂದು ಮಹೋತ್ಸವದ ರೀತಿಯಲ್ಲಿ ದೇಶದ ಜನ ಸಂಭ್ರಮಿಸುತ್ತಿದ್ದು, ರಾಮ ಹುಟ್ಟಿದ ನಾಡು ಅಯೋಧ್ಯೆ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಧ್ಯಾಹ್ನ 12:30 ರ ಆಸುಪಾಸಿನಲ್ಲಿ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ …

Read More »

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ಸ್ಟೇಜ್ ಕ್ಯಾರಿಯೇಜ್ ಬಸ್ ಗಳ ಪ್ರಯಾಣ ದರವನ್ನು ಪರಿಷ್ಕರಿಸಿದ್ದು ಇದೇ ಮೊದಲ ಬಾರಿಗೆ ಗರಿಷ್ಠ ದರವನ್ನು ನಿಗದಿ ಮಾಡಿದೆ. ದರ ಹೆಚ್ಚಳದಿಂದ ಪ್ರಯಾಣಿಕರಿಗೆ ಹೊರೆಯಾಗಲಿದೆ ಎಂದು ಹೇಳಲಾಗಿದೆ. ಖಾಸಗಿ …

Read More »

ಮುಂದಿನ ಕೆಲವು ಗಂಟೆಗಳಲ್ಲಿ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ

ನವದೆಹಲಿ : ಮುಂದಿನ ಕೆಲವು ಗಂಟೆಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಮುಂದಿನ ಕೆಲವು ಗಂಟೆಗಳಲ್ಲಿ ಕರ್ನಾಟಕದಲ್ಲಿ ಮಳೆ ಕಾಣಿಸಬಹುದು. ಅಲ್ಲದೆ, ಹವಾಮಾನ ಚಟುವಟಿಕೆಗಳು …

Read More »

ಆಗಸ್ಟ್ 8 ರ ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

ಆಗಸ್ಟ್ 8 ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆಗಸ್ಟ್ 8 ರವರೆಗೆ ಉಡುಪಿ, ದಕ್ಷಿಣ ಕನ್ನಡ, …

Read More »

ವೇತನದ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು : ವೇತನದ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ವೇತನಕ್ಕಾಗಿ ಶಿಕ್ಷಣ ಇಲಾಖೆ ಮುಂಗಡ 3 …

Read More »

ರಾಜ್ಯದೆಲ್ಲೆಡೆ ನಾಳೆ ಪೊಲೀಸ್ ಸರ್ಪಗಾವಲು!

ಬೆಂಗಳೂರು: ರಾಜ್ಯದೆಲ್ಲೆಡೆ ಬುಧವಾರ (ಆ.5)​ ಪೊಲೀಸ್​ ಸರ್ಪಗಾವಲು ಇರಲಿದೆ. ಕಮಿಷನರೇಟ್ ಹಾಗೂ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಯಾಗಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸ್​ ಪಡೆ ಸಜ್ಜಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ …

Read More »

ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿ ಸಿಮಿ ಮರಿಯಂ ಜಾರ್ಜ್‌

ಕಲಬುರಗಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ನೂತನ ಎಸ್‌ಪಿ ಆಗಿ ಸಿಮಿ ಮರಿಯಂ ಜಾರ್ಜ್‌ ಅವರು ನೇಮಕಗೊಂಡಿದ್ದಾರೆ. ಈ ಮೂಲಕ ಜಿಲ್ಲೆಗೆ ಮೊದಲ …

Read More »

ಯುಪಿಎಸ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಪ್ರದೀಪ್​​ ಸಿಂಗ್ ಟಾಪರ್​

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್​ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಪ್ರದೀಪ್​​ ಸಿಂಗ್​ ಮೊದಲ ಸ್ಥಾನ, ಜತಿನ್ ಕಿಶೋರ್ ಮತ್ತು ಪ್ರತಿಭಾ ವರ್ಮಾ …

Read More »

ಪ್ರಿನ್ಸಿಪಾಲ್ ಹುದ್ದೆ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಬಿಗ್ ಶಾಕ್

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 1242 ಸಹಾಯಕ ಪ್ರಾಧ್ಯಾಪಕರು ಮತ್ತು 310 ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ ಸರ್ಕಾರ ತಡೆ ನೀಡಿದೆ. ಇದರಿಂದಾಗಿ ಆಕಾಂಕ್ಷಿಗಳಿಗೆ ಭಾರಿ ನಿರಾಸೆಯಾಗಿದೆ. ಪ್ರಾಂಶುಪಾಲರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ …

Read More »

ಪಡಿತರ ಚೀಟಿದಾರರಿಗೆ ಆಹಾರ ಖಾತೆ ಸಚಿವರಿಂದ ಮತ್ತೊಂದು ಗುಡ್ ನ್ಯೂಸ್

ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ವಿತರಿಸುತ್ತಿರುವ ಪಡಿತರವನ್ನು ಸರಿಯಾದ ಸಮಯಕ್ಕೆ ಜನರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಇಲಾಖೆಯ …

Read More »

ಶಿರಾ ಶಾಸಕ ಸತ್ಯನಾರಾಯಣ ನಿಧನ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾ ಶಾಸಕ ಬಿ. ಸತ್ಯನಾರಾಯಣ ನಿಧನರಾಗಿದ್ದಾರೆ. ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಲೀವರ್ ಡ್ಯಾಮೇಜ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸತ್ಯನಾರಾಯಣರಿಗೆ ಲೀವರ್ ಟ್ರಾನ್ಸ್ ಪ್ಲಾಂಟ್​ಗೆ ಸಿದ್ಧತೆ ನಡೆಸಿದ್ದಾಗಲೇ ನಿಧನರಾಗಿದ್ದಾರೆ. …

Read More »

ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ರಾಷ್ಟ್ರೀಯ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಡಿ ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ಐಡಿ ಕಾರ್ಡ್ ನೀಡಲಾಗುವುದು. ಈ ಮೂಲಕ ಇ – ರೆಕಾರ್ಡ್ಸ್ ಸಂಗ್ರಹಿಸಲಾಗುವುದು. ಆಸ್ಪತ್ರೆಗೆ ದಾಖಲಾದ …

Read More »

6, 8ನೇ ತರಗತಿ ಶೈಕ್ಷಣಿಕ ಕ್ಯಾಲೆಂಡರ್‌ ಬಿಡುಗಡೆ

ಹೊಸದಿಲ್ಲಿ: ಕೇಂದ್ರ ಪಠ್ಯ ಕ್ರಮದ 6 ಮತ್ತು 8ನೇ ತರಗತಿಗಾಗಿ ಮುಂದಿನ ಎರಡು ತಿಂಗಳ ಬದಲಿ ಶೈಕ್ಷಣಿಕ ಕ್ಯಾಲೆಂಡರನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಕೇಂದ್ರ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಈ ಪಠ್ಯಕ್ರಮವನ್ನು ಬಿಡುಗಡೆ …

Read More »

ಆರೋಗ್ಯ ಸೇತು ಆಯಪ್ ಕಡ್ಡಾಯವೇ: ಹೈಕೋರ್ಟ್ ಪ್ರಶ್ನೆ

ಬೆಂಗಳೂರು: ವಿಮಾನ ಪ್ರಯಾಣಿಕರು ಆರೋಗ್ಯ ಸೇತು ಆಯಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ(ಎಎಐ) ಹೈಕೋರ್ಟ್‌ ನಿರ್ದೇಶನ ನೀಡಿದೆ. ಹಲವು ಸೇವೆಗಳಿಗೆ ಆಯಪ್ ಬಳಕೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ …

Read More »

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ ಮೊದಲೇ ತರುಣ್ ಸುಧೀರ್ ನಿರ್ದೇಶನದಲ್ಲಿ ಉಮಾಪತಿ ಶ್ರೀನಿವಾಸಗೌಡ ನಿರ್ಮಾಣದಲ್ಲಿ ಹಾಗೂ ದರ್ಶನ್ ನಾಯಕರಾಗಿರುವ ಹೊಸ ಚಿತ್ರದ …

Read More »

ಕಾಶ್ಮೀರದಲ್ಲಿ ಯೋಧ ಕಣ್ಮರೆ

ಶ್ರೀನಗರ: ಯೋಧರೊಬ್ಬರು ಕಣ್ಮರೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಕುಲಗಾಮ್‌ ಜಿಲ್ಲೆಯಲ್ಲಿ ಅವರ ವಾಹನವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಯೋಧನನ್ನು ದುಷ್ಕರ್ಮಿಗಳು ಅಪಹರಿಸಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ‘ಸೋಫಿಯಾನ್‌ ಜಿಲ್ಲೆಯ …

Read More »

ಸಿಎಂ ಯಡಿಯೂರಪ್ಪ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ: ಮಣಿಪಾಲ್ ಆಸ್ಪತ್ರೆ

ಬೆಂಗಳೂರು: ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದನೆ ನೀಡುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ಸೋಮವಾರ ಮಾಹಿತಿ ನೀಡಿದ್ದಾರೆ. ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ …

Read More »

ಲಾಕ್‌ಡೌನ್‌ ತೆರವು: ಗರಿಗೆದರಿದ ವ್ಯಾಪಾರ

ಹಾವೇರಿ: ‘ಭಾನುವಾರದ ಲಾಕ್‌ಡೌನ್‌’ ಅನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ ಕಾರಣ, ನಗರದಲ್ಲಿ ವ್ಯಾಪಾರ ವಹಿವಾಟು ಗರಿಗೆದರಿತು. ಬಟ್ಟೆ, ಎಲೆಕ್ಟ್ರಾನಿಕ್, ಪ್ಲಾಸ್ಟಿಕ್‌, ಕಿರಾಣಿ, ಸ್ಟೇಷನರಿ, ಬೇಕರಿ ಮಳಿಗೆಗಳು ಹಾಗೂ ಹೋಟೆಲ್‌ಗಳನ್ನು ತೆರೆಯಲಾಗಿತ್ತು. ಜನರು ವಸ್ತುಗಳನ್ನು ಖರೀದಿಸಲು …

Read More »

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆ

ಬೆಂಗಳೂರು: ರಾಜ್ಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ. ಜೋರು ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ …

Read More »

ಕೊರೋನಾ ಸೋಂಕಿನಿಂದ ಸಿಎಂ BSY ಆಸ್ಪತ್ರೆಗೆ ದಾಖಲು : ಶೀಘ್ರ ಚೇತರಿಕೆಗೆ ಗಣ್ಯರ ಹಾರೈಕೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚೇತರಿಕೆಗೆ ಗಣ್ಯರು ಹಾರೈಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ …

Read More »

ಟಿಕ್ ಟಾಕ್ ಖರೀದಿಸುವ ಯೋಜನೆಯಿಂದ ಹಿಂದೆ ಸರಿದ ಮೈಕ್ರೋಸಾಫ್ಟ್

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟಿಕ್ ಟಾಕ್ ನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡುತ್ತಿದ್ದಂತೆಯೇ ಆ ಸಂಸ್ಥೆಯನ್ನು ಖರೀದಿಸುವ ಯೋಜನೆಯಿಂದ ಮೈಕ್ರೋಸಾಫ್ಟ್ ಹಿಂದೆ ಸರಿದಿದೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ …

Read More »

ದೇವಳಗಳ ಆದಾಯದಲ್ಲಿ ಗೋಶಾಲೆಗೆ ನೆರವು: ಕೋಟ ಶ್ರೀನಿವಾಸ ಪೂಜಾರಿ

ನೀಲಾವರ(ಬ್ರಹ್ಮಾವರ): ‘ರಾಜ್ಯದ ಎ ಮತ್ತು ಬಿ ಶ್ರೇಣಿಯ ದೇವಸ್ಥಾನಗಳ ವಾರ್ಷಿಕ ಆದಾಯದ ಶೇ 2ರಷ್ಟು ಮೊತ್ತವನ್ನು ಆಯಾ ಜಿಲ್ಲೆಗಳ ನೋಂದಾಯಿತ ಗೋಶಾಲೆಗಳಿಗೆ ನೆರವಿನ ರೂಪದಲ್ಲಿ ನೀಡಲು ಅನುವಾಗುವಂತೆ ಶೀಘ್ರದಲ್ಲಿ ಮುಜರಾಯಿ ಇಲಾಖೆಯಿಂದ ಆದೇಶ ಹೊರಡಿಸಲಾಗುವುದು’ …

Read More »

ಸುಲಭ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದೊಂದಿಗೆ ಇಂಡಿಯನ್ ಬ್ಯಾಂಕ್ ಬಡ್ಡಿ ದರ ಇಳಿಕೆ ಮಾಡಿದೆ. ಕೃಷಿ ಚಟುವಟಿಕೆ ಸಂಬಂಧಿತ ಚಿನ್ನದ ಸಾಲದ ಮೇಲಿನ ಬಡ್ಡಿ ದರವನ್ನು ಜುಲೈ 22 ರಿಂದ …

Read More »

ಸ್ವದೇಶಿ ರಾಖಿಯಿಂದ ಚೀನಾಕ್ಕೆ ಭಾರಿ ನಷ್ಟ

ನವದೆಹಲಿ: ಈ ವರ್ಷದ ರಕ್ಷಾಬಂಧನ ಹಬ್ಬಕ್ಕೆ ಸ್ವದೇಶಿ ರಾಖಿಗಳ ಮಾರಾಟ ಹೆಚ್ಚಾಗಿದ್ದು, ಚೀನಾ ತಯಾರಿಸಿ ರುವ ರಾಖಿಯನ್ನು ಜನರು ನಿರಾಕರಿಸಿದ್ದಾರೆ. ಹೀಗಾಗಿ ಚೀನಾಕ್ಕೆ -ಠಿ; 4 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಖಿಲ ಭಾರತೀಯ …

Read More »

`SBI’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ : ನೀವು ಸ್ಟೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಆದರೆ ನೀವು ಇದನ್ನು ತಿಳಿದಿರಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಎಸ್‌ಬಿಐ ಇತ್ತೀಚೆಗೆ ತನ್ನ ಗ್ರಾಹಕರನ್ನು ಎಚ್ಚರಿಸಿದೆ. ಈ …

Read More »

ಚೀನಾಕ್ಕೆ ಮತ್ತೊಂದು ಬಿಗ್ ಶಾಕ್ ನೀಡಿದ ಆಯಪಲ್ ಕಂಪನಿ

ವಾಷಿಂಗ್ಟನ್ : ಚೀನಾಕ್ಕೆ ಆಯಪಲ್ ಕಂಪನಿ ಬಿಗ್ ಶಾಕ್ ನೀಡಿದ್ದು, ಚೀನಾದ 26 ಸಾವಿರ ಗೇಮ್ ಗಳು ಸೇರಿ ಸುಮಾರು 29,800 ಅಪ್ಲಿಕೇಶನ್ ಗಳನ್ನು ಆಯಪಲ್ ಕಂಪನಿ ತೆಗೆದುಹಾಕಿದೆ. ಈ ಬಗ್ಗೆ ಮಾಹಿತಿ ನೀಡಿರುವ …

Read More »

ರಾಮ ಮಂದಿರಕ್ಕಾಗಿ ಕರ್ನಾಟಕದಿಂದ ಮಣ್ಣು, ನೀರು ರವಾನೆ!

ಬೆಂಗಳೂರು: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಐತಿಹಾಸಿಕ ರಾಮಮಂದಿರ ನಿರ್ಮಾಣದ ಭೂಮಿಪೂಜೆ ಸಮಾರಂಭ ನಡೆಯಲಿದ್ದು, ರಾಜ್ಯದಿಂದಲೂ ತನ್ನದೇ ಆದ ಕೊಡುಗೆಯನ್ನು ನೀಡಲಾಗುತ್ತಿದೆ. ಪ್ರಮುಖ ನದಿಗಳು ಮತ್ತು ಕೆಲವು ಧಾರ್ಮಿಕ ಸ್ಥಳಗಳಲ್ಲಿ ಸಂಗ್ರಹಿಸಿದ ಮಣ್ಣನ್ನು ಕೊಡುಗೆಯಾಗಿ …

Read More »

ಸಿಎಂ ಬಿ.ಎಸ್​.ಯಡಿಯೂರಪ್ಪನವರಿಗೆ ಕರೊನಾ ಸೋಂಕು: ಆಸ್ಪತ್ರೆಗೆ ದಾಖಲು​

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರಿಗೆ ಕರೊನಾ ಸೋಂಕು ತಗುಲಿದೆ. ಅವರೇ ಈ ಬಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ. ನನ್ನ ಕರೊನಾ ಪರೀಕ್ಷಾ ವರದಿ ಪಾಸಿಟಿವ್​ ಎಂದು ಬಂದಿದೆ. ರೋಗ ಲಕ್ಷಣಗಳು ಇಲ್ಲದೆ ಹೋದರೂ ಮುನ್ನೆಚ್ಚರಿಕಾ ಕ್ರಮವಾಗಿ, …

Read More »

ಕಾಗ್ರೆಂಸ್ ಯುವ ನಾಯಕರ ವಿರುದ್ಧ ಹಿರಿಯ ನಾಯಕರು ತಿರುಗೇಟ

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದ ಈಗಿನ ದುಸ್ಥಿತಿಗೆ ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರೇ ಕಾರಣ ಎಂದು ಆರೋಪಿಸಿದ್ದ ಯುವ ನಾಯಕರ ವಿರುದ್ಧ ಹಿರಿಯ ನಾಯಕರು ತಿರುಗಿ ಬಿದ್ದಿದ್ದಾರೆ. ಅವರೊಬ್ಬ ಅತ್ಯುತ್ತಮ ಆಡಳಿತಕಾರ ಎಂದು ಬಣ್ಣಿಸಿದ್ದಾರೆ. …

Read More »

ಆಸ್ಪತ್ರೆಯಿಂದ ಬಿಡುಗಡೆಯಾದ ಅಮಿತಾಬ್ ಬಚ್ಚನ್

ನವದೆಹಲಿ : ಕೊವಿಡ್ -19 ಗಾಗಿ ಅವರ ತಂದೆ ಅಮಿತಾಬ್ ಬಚ್ಚನ್ ಅಂತಿಮವಾಗಿ ಸೊಂಕಿನಿಂದ ಮುಕ್ತರಾಗಿದ್ದು, ಈ ನಡುವೆ ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ …

Read More »

ಕೊರೊನಾ ವೈರಸ್ ಗೆ ಔಷಧ : ಡಾ. ಗಿರಿಧರ ಕಜೆಗೆ ನೋಟಿಸ್

ಬೆಂಗಳೂರು : ಕೊರೊನಾ ವೈರಸ್ ಗೆ ಆಯುರ್ವೇದ ಔಷಧ ಕಂಡು ಹಿಡಿದಿದ್ದೇನೆ ಎಂದು ಹೇಳಿದ್ದ ಡಾ. ಗಿರಿಧರ ಕಜೆಗೆ ಬಿಎಂಸಿಆರ್ ಐ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನೋಟಿಸ್ …

Read More »

ಶಾಲಾ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದ್ದು, ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಹೊಸ ಶಿಕ್ಷಣ ನೀತಿಯ ಅನ್ವಯ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಉಪಾಹಾರವನ್ನು ಕೂಡ …

Read More »

ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲು ಕೃಷಿ ವಿವಿ ಸಿದ್ಧತೆ

ರಾಯಚೂರು : ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲು ಅತ್ಯ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 14 ರಿಂದ …

Read More »

ಮೆಹಬೂಬ ಮುಫ್ತಿ ಬಿಡುಗಡೆ ಮಾಡುವಂತೆ ರಾಹುಲ್ ಗಾಂಧಿ ಒತ್ತಾಯ

ನವದೆಹಲಿ: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿರುವ ಜಮ್ಮು ಕಾಶ್ಮೀರದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಒತ್ತಾಯಿಸಿದ್ದಾರೆ. ಶುಕ್ರವಾರ ಮುಫ್ತಿ ಅವರ ಬಂಧನವನ್ನು ಮೂರು …

Read More »

ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ ಪ್ರಸ್ತಾವನೆಗೆ ಒಪ್ಪಿಗೆ

ಆಂಧ್ರ ಪ್ರದೇಶದಲ್ಲಿ 3 ರಾಜಧಾನಿ ಹೊಂದುವ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. 3 ರಾಜಧಾನಿಗಳನ್ನು ಹೊಂದಬೇಕು ಎಂದು ಪಟ್ಟು ಹಿಡಿದಿದ್ದ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಹಲವು ವಿರೋಧಗಳ ನಡುವೆಯೂ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. …

Read More »

ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ತಾಯಿಯನ್ನೇ ಹತ್ಯೆಗೈದ ಯುವಕ

ಮಂಡ್ಯ: ಕೊರೋನ ಸೋಂಕು ಹರಡುತ್ತದೆ ಮನೆಯಿಂದ ಹೊರ ಹೋಗಬೇಡ, ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಹೇಳಿದ ಹೆತ್ತ ತಾಯಿಯನ್ನೇ ಮಗ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಕೆ.ಆರ್.ರಸ್ತೆಯಲ್ಲಿ ಶನಿವಾರ ನಡೆದಿದೆ. ಶ್ರೀಲಕ್ಷ್ಮಿ …

Read More »

ರಕ್ಷಾ ಬಂಧನಕ್ಕೆ ಮಹಿಳೆಯರಿಗೆ ಬಂಪರ್ ಗಿಫ್ಟ್

ಲಖನೌ : ರಕ್ಷಾ ಬಂಧನ ನಿಮಿತ್ತ ಮಹಿಳೆಯರಿಗೆ ಉತ್ತರ ಪ್ರದೇಶದಿಂದ ಭರ್ಜರಿ ಗಿಫ್ಟ್ ನೀಡಿದ್ದು, ರಕ್ಷಾ ಬಂಧನ ನಿಮಿತ್ತ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡುತ್ತಿದೆ. ಹೌದು, ಉತ್ತರ ಪ್ರದೇಶ ಸರ್ಕಾರ, ಎಲ್ಲಾ ಮಾದರಿಯ …

Read More »

ನೀವು ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿದ್ದರೆ ಇಲ್ಲಿದೆ ಭರ್ಜರಿ ಅವಕಾಶ

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ 2020: ನೀವು ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿದ್ದರೆ ನಿಮಗಾಗಿ ಖಂಡಿತವಾಗಿಯೂ ಈ ಸುದ್ದಿ ಬಹಳ ಉಪಯೋಗವಾಗಲಿದೆ. ಗ್ರೂಪ್ ಸಿ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಾಗಿ ಅರ್ಜಿ ನಮೂನೆಯನ್ನು ಕರ್ನಾಟಕ ರಾಜ್ಯ …

Read More »

PUC, ಪದವಿ ಪಾಸಾಗಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಶುಭಸುದ್ದಿ

ಬೆಂಗಳೂರು: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ವೃಂದದ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಒಟ್ಟು 523 …

Read More »

ಹೊಸ ಮೊಬೈಲ್ ಖರೀದಿಸಬೇಕೆಂದುಕೊಂಡವರಿಗೆ ಗುಡ್ ನ್ಯೂಸ್

ನವದೆಹಲಿ: ಭಾರತಕ್ಕೆ ಮೊಬೈಲ್ ಕಂಪನಿಗಳು ಲಗ್ಗೆ ಇಡಲು ಸಜ್ಜಾಗಿವೆ. 11 ಲಕ್ಷ ಕೋಟಿ ರೂ. ಮೌಲ್ಯದ ಮೊಬೈಲ್ ಫೋನ್ ಗಳ ಉತ್ಪಾದನೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮುಂದಿನ ಐದು ವರ್ಷದಲ್ಲಿ 22 ದೇಶಿ ಮತ್ತು ವಿದೇಶಿ …

Read More »

ಇಲ್ಲದೆ ಓದಿ ಲಾಕ್ ಡೌನ್ ತೆರವು 3.0 ಮಾರ್ಗಸೂಚಿ

ದಾವಣಗೆರೆ: ಕೇಂದ್ರೀಯ ಗೃಹ ಮಂತ್ರಾಲಯದ ಆದೇಶ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದನ್ವಯ ಕಂಟೈನ್‍ಮೆಂಟ್ ವಲಯಗಳಲ್ಲಿ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸಲು ಹಾಗೂ ಕಂಟೈನ್‍ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಪುನಃ ಆರಂಭಿಸಲು …

Read More »

ಸ್ಟಾಫ್ ನರ್ಸ್ ಸಿಬ್ಬಂದಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವರಿಂದ ಸಿಹಿಸುದ್ದಿ!

ಬೆಂಗಳೂರು : ಸ್ಟಾಫ್ ನರ್ಸ್ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಈ ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಭರವಸೆ ನೀಡಿದರು. ಬಿಎಂಸಿಆರ್ ಐ ಮತ್ತು ಬೌರಿಂಗ್ ಮತ್ತು …

Read More »

ಅಡಿಕೆ ಬೆಳಗಾರರಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಅಡಕೆ ಬೆಳಗಾರರಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಡಿಕೆ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದ್ದು, ಈ ಹಿಂದೆ ಕೆಜಿಗೆ 200 ರೂ. ನಿಂದ …

Read More »

ಚೀನಾ ಆಯಪ್ಸ್​​ ಮೇಲೆ ಈಗ ಆಯಪಲ್​ನಿಂದ​ ಸ್ಟ್ರೈಕ್

ಚೀನಾದ ಆಯಪ್​​ಗಳಿಗೆ ದೈತ್ಯ ಆಯಪಲ್ ಕಂಪನಿ ಗೇಟ್​ಪಾಸ್​ ನೀಡಿದೆ. 26,000 ಗೇಮ್ಸ್ ಸೇರಿದಂತೆ ಒಟ್ಟು ​29,800 ಆಯಪ್​ಗಳನ್ನ ಆಯಪಲ್​​ ತನ್ನ ಚೈನೀಸ್​ ಆಯಪ್​​ ಸ್ಟೋರ್​ನಿಂದ ತೆಗೆದುಹಾಕಿದೆ ಅಂತಾ ಸಂಶೋಧನಾ ಸಂಸ್ಥೆ ಕಿಮೈ (Qimai) ತಿಳಿಸಿದೆ. …

Read More »

ನೂತನ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ: ಭಾವುಕರಾದ ಭಾಸ್ಕರ್ ರಾವ್

ಬೆಂಗಳೂರು: ನಗರದ ನೂತನ ಕಮಿಷನರ್ ಆಗಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ್ದಾರೆ. ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ನಿರ್ಗಮಿತ ಕಮಿಷನರ್ ಭಾಸ್ಕರ್ ರಾವ್ ಅವರು ಕಮಲ್ ಪಂತ್ ಅವರಿಗೆ ಬ್ಯಾಟನ್ ನೀಡಿ ಅಧಿಕಾರ ಹಸ್ತಾಂತರ …

Read More »

ವರ್ಕ್​ ಫ್ರಂ ಹೋಮ್​ ಕೇಳಿದ್ದೀರಿ, ಇದೀಗ ಶೂಟ್ಸ್​ ಫ್ರಂ ಹೋಮ್​ ಶುರು.

ಕರೊನಾ ಹಾವಳಿಯಿಂದ ಸಿನಿಮಾ ಇಂಡಸ್ಟ್ರಿ ತತ್ತರಿಸಿ ಹೋಗಿದೆ. ಇತ್ತ ಧಾರಾವಾಹಿ ಕ್ಷೇತ್ರ ಈಗಷ್ಟೇ ಸುಧಾರಿಸಿಕೊಳ್ಳುತ್ತಿದೆ. ಲಾಕ್​ಡೌನ್​ ಸಡಿಲವಾದ ಬೆನ್ನಲ್ಲೇ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಕರೊನಾ ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಹಿಂದಿಯ …

Read More »

ಕೇವಲ ಪ್ರಚಾರ ನಿರ್ವಹಣೆಯಿಂದ ಕೋವಿಡ್‌ ಎದುರಿಸಲು ಸಾಧ್ಯವಿಲ್ಲ: ಪ್ರಿಯಾಂಕಾ

ನವದೆಹಲಿ: ಕೇವಲ ಪ್ರಚಾರ ಹಾಗೂ ಮಾಧ್ಯಮಗಳನ್ನು ನಿರ್ವಹಿಸುವುದರ ಮೂಲಕ ಕೋವಿಡ್‌ ಯುದ್ಧವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆಯುವ …

Read More »

ಕರ್ನಾಟಕ ಮತ್ತು ಕೇರಳದಲ್ಲಿ ಐಸಿಸ್ ಭಯೋತ್ಪಾದಕರಿದ್ದಾರೆ ಎಚ್ಚರಿಕೆ !!

ನವದೆಹಲಿ: ಕೇರಳ ಮತ್ತು ಕರ್ನಾಟಕದಲ್ಲಿ ಐಸಿಸ್ ಭಯೋತ್ಪಾದಕರು ಗಮನಾರ್ಹ ಸಂಖ್ಯೆಯಲ್ಲಿ ಇದ್ದಾರೆ ಎಂದು ಯುಎನ್ ವರದಿಯಲ್ಲಿ ಎಚ್ಚರಿಸಿದೆ. ಭಾರತದ ಉಪಖಂಡದ ಭಯೋತ್ಪಾದಕ ಗುಂಪಿನ ಸದಸ್ಯ ಅಲ್-ಖೈದಾ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಿಂದ ಸುಮಾರು …

Read More »

ದೇಶದಲ್ಲಿ ಕೊರೋನಾ ವೈರಸ್ ಲಸಿಕೆಯಲ್ಲಿ ಮಹತ್ತರ ಮುನ್ನಡೆ: ತಜ್ಞರು

ಬೆಂಗಳೂರು: ಮಾರಕ ಕೊರೋನಾ ವೈರಸ್ ಗಾಗಿ ಲಸಿಕೆ ಕಂಡು ಹಿಡಿಯುವ ಕಾರ್ಯ ಭರದಿಂದ ಸಾಗಿದ್ದು, ದೇಶದಲ್ಲಿ ವಿವಿಧ ಕಂಪನಿಗಳು ಲಸಿಕೆಯ ಪ್ರಯೋಗ ನಡೆಸಿದ್ದು, ಒಟ್ಟಾರೆ 30 ಬಾರಿ ಪ್ರಯೋಗಗಳಲ್ಲಿ 20 ಬಾರಿ ಲಸಿಕೆಯಲ್ಲಿ ಮಹತ್ತರ …

Read More »

NEP ಅಧ್ಯಕ್ಷರಾದ ಕಸ್ತೂರಿ ರಂಗನ್ ಅವರಿಗೆ ಸಿಎಂ ಅಭಿನಂದನೆ

ಬೆಂಗಳೂರು : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಇಂದು‌ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ (NEP) ಅಧ್ಯಕ್ಷರಾದ ಹಿರಿಯ ವಿಜ್ಞಾನಿ ಶ್ರೀ ಕಸ್ತೂರಿ ರಂಗನ್ ಅವರನ್ನು ಭೇಟಿಯಾಗಿ‌ ಅವರಿಗೆ ಅಭಿನಂದನೆ ಸಲ್ಲಿಸಿದರು. ಉಪ …

Read More »

ಪಾಕಿಸ್ತಾನದ ಸಹೋದರಿಯಿಂದ ಪ್ರಧಾನಿ ಮೋದಿಗೆ ಬಂತು ರಕ್ಷಾಬಂಧ

ಅಹಮದಾಬಾದ್​: ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನದ ಸಹೋದರ ಖಾಮರ್​ ಮೊಹಸಿನ್​ ಶೇಖ್​ ರಕ್ಷಾಬಂಧನ ನಿಮಿತ್ತ ರಾಖಿಯನ್ನು ಕಳುಹಿಸಿಕೊಟ್ಟಿದ್ದಾರೆ. ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದು, ಅವರ ಕೈಗೆ ರಾಖಿ ಕಟ್ಟಲು ಸಾಧ್ಯವಾಗದಿರುವುದಕ್ಕೆ ಬೇಸರ …

Read More »

ʼಅನ್ನದಾತʼರಿಗೆ ಕೇಂದ್ರ ಸರ್ಕಾರದಿಂದ‌ ಗುಡ್‌ ನ್ಯೂಸ್

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರನೇ ಕಂತು ಶೀಘ್ರವೇ ರೈತರ ಖಾತೆ ಸೇರಲಿದೆ. ಈ ಬಾರಿ ಸುಮಾರು 10 ಕೋಟಿ ರೈತರು 2 – 2 ಸಾವಿರ ರೂಪಾಯಿಗಳನ್ನು ಪಡೆಯಲಿದ್ದಾರೆ. ಕೊರೊನಾ …

Read More »

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್

ರಾಜ್ಯದಲ್ಲಿ ಕೊರೊನಾ ವಕ್ಕರಿಸಿಕೊಂಡಿರುವ ಪರಿಣಾಮ ಈ ಹಿಂದೆ ಲಾಕ್ಡೌನ್ ಜಾರಿಗೊಳಿಸಿದ್ದು, ಇದರಿಂದ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಹೀಗಾಗಿ ಇದನ್ನು ನಿಭಾಯಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತ್ತು. ಸದ್ಯಕ್ಕೆ ಯಾವುದೇ ಹೊಸ …

Read More »

ಕೆಎಂಎಫ್ ನೌಕರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇದರ ಮಧ್ಯೆಯೂ ಹಲವು ಇಲಾಖೆಗಳ ಸಿಬ್ಬಂದಿ ಜೀವದ ಹಂಗು ತೊರೆದು ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ಕೆಎಂಎಫ್ ನೌಕರರು ಸಹ ಸೇರಿದ್ದಾರೆ. ಇದೀಗ ಈ ನೌಕರರಿಗೆ ಕೆಎಂಎಫ್ …

Read More »

ಬಿಜೆಪಿ ಪದಾಧಿಕಾರಿಗಳ ನೇಮಕ: ವಿಜಯೇಂದ್ರ, ಶೋಭಾಗೆ ಉಪಾಧ್ಯಕ್ಷ ಸ್ಥಾನ

ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ ಪ್ರಮುಖ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಪದಾಧಿಕಾರಿಗಳು …

Read More »

ಮುಖ್ಯಮಂತ್ರಿ ಬಿಎಸ್ ವೈ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್..?

ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷರು ನೇಮಕವಾದ ಬರೋಬ್ಬರಿ 11 ತಿಂಗಳ ನಂತರ ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತರಿಗೆ ಹೆಚ್ಚಿನ ಸ್ಥಾನ ನೀಡಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ …

Read More »

ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಅಧಿಕಾರಿ

ದೇಶದ ಜನತೆಯನ್ನು ಬಿಡದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ಈಗಾಗಲೇ ಹಲವರ ಜೀವವನ್ನು ಬಲಿ ಪಡೆದಿದೆ. ಕರ್ನಾಟಕದಲ್ಲೂ ಕೊರೊನಾ ಅಬ್ಬರಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತಿಮ ದರ್ಶನವನ್ನೂ ಸಹ …

Read More »

ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

ಆಗಸ್ಟ್ 15ರೊಳಗೆ ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಶಿಕ್ಷಕರ ವರ್ಗಾವಣೆ ಕುರಿತು …

Read More »

ಕೊರೋನಾ ತಡೆ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ಮಾಸ್ಕೋ: ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೊನಾ ಸೋಂಕು ತಡೆಯುವ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದ್ದು ಅಂತಿಮಹಂತದ ಪ್ರಯೋಗಗಳು ಬಾಕಿ ಇವೆ. ಅನೇಕ ದೇಶಗಳ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆಯ ವಿವಿಧ ಹಂತಗಳ ಪ್ರಯೋಗ ಯಶಸ್ವಿಯಾಗಿದೆ. ಮಾನವ ಕ್ಲಿನಿಕಲ್ …

Read More »

ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಆಗಸ್ಟ್ 31ರ ವರೆಗೆ ವಿಸ್ತರಣೆ

ನವದೆಹಲಿ: ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಶುಕ್ರವಾರ ತಿಳಿಸಿದೆ. ಭಾರತದಿಂದ ಹೊರಹೋಗುವ ಇಲ್ಲವೇ ಒಳಬರುವ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಆಗಸ್ಟ್ …

Read More »

ಬ್ಯಾಂಕ್ ಗ್ರಾಹಕರ ಗಮನಕ್ಕೆ : ಇಲ್ಲಿದೆ ನೋಡಿ `ಆಗಸ್ಟ್’ ತಿಂಗಳ ರಜಾ ದಿನಗಳ ಪಟ್ಟಿ

ಬೆಂಗಳೂರು : ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕ್ ರಜಾ ದಿನಗಳ ಬಗ್ಗೆ ಮುಖ್ಯ ಮಾಹಿತಿ, ಆಗಸ್ಟ್ ತಿಂಗಳಲ್ಲಿ ಬ್ಯಾಂಕುಗಳಿಗೆ 12 ದಿನ ರಜೆ ಇರಲಿದೆ ಎಂದು ತಿಳಿದುಬಂದಿದೆ. ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿ …

Read More »

ಕೃಷಿ ಸಚಿವ ಬಿ.ಸಿ.ಪಾಟೀಲ್ ಗೆ ಕೊರೊನಾ ಸೋಂಕು ದೃಢ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಕೃಷಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತು ಟ್ವೀಟ್ …

Read More »

ಉದ್ಯೋಗಾಕಾಂಕ್ಷಿಗಳಿಗೆ `KPSC’ಯಿಂದ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಭರ್ಜರಿ ಸಿಹಿಸುದ್ದಿ ನೀಡಿದ್ದು, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ವೃಂದದ ವಿವಿಧ ಹುದ್ದೆಗಳ ಭರ್ತಿಗೆ ಕೆಪಿಎಸ್ ಸಿ ಅಧಿಸೂಚನೆ ಹೊರಡಿಸಿದೆ. …

Read More »

ಹಜ್ ಯಾತ್ರೆಗೂ ತಟ್ಟಿದ ಕೊರೊನಾ ಬಿಸಿ: ಫೋಟೋ ವೈರಲ್

ಮುಸ್ಲಿಮರ ಪವಿತ್ರ ಕ್ಷೇತ್ರವಾಗಿರುವ ಮೆಕ್ಕಾ ಮದೀನಾದ ಹಜ್ ಯಾತ್ರೆಯೂ ಈ ಬಾರಿ‌ ಕೊರೊನಾ ಹೊಡೆತಕ್ಕೆ ಸಿಲುಕಿದ್ದು, ಕೇವಲ ಸಾವಿರ ಲೆಕ್ಕದಲ್ಲಿ ಜನರು ಆಗಮಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೆಕ್ಕಾ ಮದೀನದ ಹಜ್ ಯಾತ್ರೆಯ ವೇಳೆ ಕಾಬಾ …

Read More »

SSLC’ ಫಲಿತಾಂಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಬೆಂಗಳೂರು: 2019-20 ನೇ ಸಾಲಿನ ‘SSLC’ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 8 ರೊಳಗೆ ಪ್ರಕಟ ಮಾಡಲಾಗುವುದು ಅಂತ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ …

Read More »

ಆದಾಯ ತೆರಿಗೆದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ : ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಬುಧವಾರ (ಜುಲೈ 29) 2018-19ರ ಹಣಕಾಸು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಿದೆ. ಕೋವಿಡ್ …

Read More »

ಸರ್ಕಾರದ ಆದೇಶ ಉಲ್ಲಂಘಿಸಿದ 19 ಆಸ್ಪತ್ರೆಗಳಿಗೆ ಬಿಗ್ ಶಾಕ್

ಬೆಂಗಳೂರು: ಸರ್ಕಾರದ ಆದೇಶ ಉಲ್ಲಂಘಿಸಿದ 19 ಆಸ್ಪತ್ರೆಗಳಿಗೆ ಸರ್ಕಾರದಿಂದ ಬಿಗ್ ಶಾಕ್ ನೀಡಲಾಗಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗೆ ಬೆಡ್ ಮೀಸಲಿಡದ ಹಿನ್ನೆಲೆಯಲ್ಲಿ 19 ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದು ಮಾಡಲಾಗಿದೆ. ಬಿಬಿಎಂಪಿ ದಕ್ಷಿಣ ವಲಯ …

Read More »

ರಾಜ್ಯದ ‘ಅನ್ಲಾಕ್ 3’ ಮಾರ್ಗಸೂಚಿ :ಮೂರನೇ ಹಂತದ ಅನ್ ಲಾಕ್ ನಲ್ಲಿ ಏನಿದೆ..?ಏನಿಲ್ಲ..?

ಬೆಂಗಳೂರು : ರಾಜ್ಯದಲ್ಲಿ ಆಗಸ್ಟ್​​ 1ರಿಂದ ಮೂರನೇ ಹಂತದ ಅನ್​ಲಾಕ್​ ಜಾರಿಗೆ ಬರಲಿದೆ. ಈ ವೇಳೆ ಹಿಂದಿದ್ದ ಕೆಲವು ನಿರ್ಬಂಧಗಳನ್ನು ಸಡಿಲಿಸಿದ್ದು, ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ಯಥಾವತ್ತಾಗಿ …

Read More »

ಇಂದಿನಿಂದ ಶುರುವಾಗಲಿದೆ ಕೋವಿಡ್ -19 ರಾಪಿಡ್ ಆಂಟಿಜೆನ್ ಉಚಿತ ಪರೀಕ್ಷೆ

ಬೆಂಗಳೂರು: ಬಿಬಿಎಂಪಿಯಿಂದ ಇಂದಿನಿಂದ ಕೋವಿಡ್ -19 ರಾಪಿಡ್ ಆಂಟಿಜೆನ್ ಉಚಿತ ಪರೀಕ್ಷೆಯನ್ನು ನಡೆಸಲಿದೆ. ಇದು ಪರೀಕ್ಷೆಯಾಗಿದೆ ಇದೇ ವೇಳೇ ಬಿಬಿಎಂಪಿ ತಿಳಿಸಿದೆ. ನೀವು COVID-19 ರೋಗಲಕ್ಷಣಗಳನ್ನು ಹೊಂದಿದ್ದರೆ (ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ತಲೆನೋವು, …

Read More »

ಪ್ರಮಾಣ ವಚನ ಸ್ವೀಕರಿಸಿದ ಐವರು ನೂತನ ಪರಿಷತ್ ಸದಸ್ಯರು

ಬೆಂಗಳೂರು-ವಿಧಾನಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದ ಐವರು ನೂತನ ಸದಸ್ಯರು ಇಂದು ಮೇಲ್ಮನೆ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸದಸ್ಯರಿಗೆ ವಿಧಾನಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅಧಿಕಾರ ಗೌಪ್ಯತೆ ಬೋಧಿಸಿದರು. …

Read More »

ಉದ್ಯೋಗಿಗಳಿಗೆ ಬಿಗ್‌ ಶಾಕ್

ನೌಕರರ ಭವಿಷ್ಯ ನಿಧಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ರಿಯಾಯಿತಿ ಜುಲೈ 31ರಂದು ಮುಗಿಯಲಿದೆ. ಆಗಸ್ಟ್ ಒಂದರಿಂದ ಹಳೆ ನಿಯಮವೇ ಜಾರಿಗೆ ಬರಲಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ, ಇಪಿಎಫ್ ಕೊಡುಗೆಯನ್ನು ಶೇಕಡಾ 4ಕ್ಕೆ …

Read More »

ಬೆಂಗಳೂರು ಸ್ಥಿತಿ ಭಯಾನಕ, ಚಿತಾಗಾರ-ಸ್ಮಶಾನಗಳ ಮುಂದೆ ಗಂಟೆಗಟ್ಟಲೆ ಕ್ಯೂ..!

ಬೆಂಗಳೂರು- ರಾಜಧಾನಿ ಬೆಂಗಳೂರಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು ರಶ್… ಎಲ್ಲ ಚಿತಾಗಾರ, ಸ್ಮಶಾನಗಳ ಮುಂದೆ ಸಾಲು ಸಾಲು ಆಯಂಬುಲೆನ್ಸ್‍ಗಳು… ಪಾರ್ಥಿವ ಶರೀರಗಳನ್ನಿಟ್ಟುಕೊಂಡು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕಿನಿಂದ ಮೃತಪಟ್ಟವರು ಮತ್ತು ಇನ್ನಿತರ …

Read More »

ಹೈನುಗಾರಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು : ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ (ಕಿಟಸರ್ಡ್) ಸಂಸ್ಥೆಯಿಂದ 2020ರ ಆಗಸ್ಟ್ 5ರಿಂದ 14ರವರೆಗೆ ಹತ್ತು ದಿನಗಳ ಕಾಲ ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಇದಕ್ಕಾಗಿ ಅರ್ಹ …

Read More »

ಬೆಳಗಾವಿಯಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಐವರು ಪೋಲೀಸರ ಬಲೆಗೆ

ಬೆಳಗಾವಿ: ಮಹಿಳೆಯರನ್ನು ಇಟ್ಟುಕೊಂಡು ವ್ಯಕ್ತಿಯನ್ನು ಐದು ಲಕ್ಷ ರೂ.ಗೆ ಬೇಡಿಕೆ ಇಟ್ಟು ಹನಿ ಟ್ರ್ಯಾಪ್ ಮೂಲಕ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಹಾಗೂ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಅಥಣಿಯ ಸದಾಶಿವ …

Read More »

ಆಗಸ್ಟ್‌ 31ರವರೆಗೆ ಮಹಾರಾಷ್ಟ್ರ ಕಂಪ್ಲೀಟ್‌ ಲಾಕ್‌ಡೌನ್..!

ಮಹಾರಾಷ್ಟ್ರ: ರಾಜ್ಯದಲ್ಲಿ ಕೊರೊನಾ ಸೋಂಕು ಊಹೆಗೂ ನಿಲುಕದಷ್ಟು ಏರುತ್ತಿರುವುದರಿಂದ ಮಹಾರಾಷ್ಟ್ರ ಸರ್ಕಾರ, ಆಗಸ್ಟ್‌ 31ರ ವರೆಗೆ ರಾಜ್ಯಾದ್ಯಂತ ಲಾಕ್‌ಡೌನ್‌ ಅನ್ನು ವಿಸ್ತರಿಸುತ್ತಿರುವುದಾಗಿ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ಪ್ರಸ್ತುತ 4 ಲಕ್ಷ ಸೋಂಕಿತರಿದ್ದು, ಭಾರತದಲ್ಲೇ ಅತ್ಯಧಿಕ ಸೋಂಕಿತರನ್ನು …

Read More »

ಚಿತ್ರರಂಗಕ್ಕೆ ಮತ್ತೆ ಶಾಕ್: ಇನ್ನೊಬ್ಬ ಯುವ ನಟ ಆತ್ಮಹತ್ಯೆಗೆ ಶರಣು

ಕೊರೊನಾ ಮಧ್ಯೆ ಚಿತ್ರರಂಗದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗ್ತಿವೆ. ಮರಾಠಿ ನಟ ಅಶುತೋಷ್ ಭಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶುತೋಷ್‌ಗೆ 32 ವರ್ಷ ವಯಸ್ಸು. ಅಶುತೋಷ್ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಪೊಲೀಸರ ಪ್ರಕಾರ, …

Read More »

ಚೀನಾಕ್ಕೆ ಮತ್ತೊಂದು ಪೆಟ್ಟು ನೀಡಲು ಮುಂದಾದ ಭಾರತ

ಬೆಂಗಳೂರು: ಗಡಿ ಸಂಘರ್ಷದ ಬೆನ್ನಲ್ಲೇ ಚೀನಾದ ಅನೇಕ ಆಯಪ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರವು, ಈಗ ಆ ರಾಷ್ಟ್ರಕ್ಕೆ ಆರ್ಥಿಕವಾಗಿ ಮತ್ತೊಂದು ಪೆಟ್ಟು ನೀಡಲು ಮುಂದಾಗಿದೆ. ಸರ್ಕಾರವು ತನ್ನ ನೆರೆಯ ರಾಷ್ಟ್ರಗಳ ಮೇಲೆ ಹೊಸ ವ್ಯಾಪಾರ …

Read More »

ಉಗ್ರರ ದಾಳಿ: 3 ಭಾರತೀಯ ಯೋಧರು ಹುತಾತ್ಮ

ಇಂಫಾಲ್: ಮಾಯನ್ಮಾರ್ ಗಡಿಯಲ್ಲಿನ ನಾಲ್ಕನೇ ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮ್ಯಾನ್ಮಾರ್‌ನ ಗಡಿಯ ಸಮೀಪ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಸ್ಥಳೀಯ ಗುಂಪಿನ ಪೀಪಲ್ಸ್ ಲಿಬರೇಶನ್ ಆರ್ಮಿಯ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!