Breaking News
Hiring Reporter’s For more Information Contact Above Number 876 225 4007 . Program producer
Home / ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ

ಆಟೋದಲ್ಲಿ ಬಿಟ್ಟು ಹೋದ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ

ಹುಬ್ಬಳ್ಳಿ:- ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನ್ನು ಆಟೋದಲ್ಲಿ ಬಿಟ್ಟು ಹೋದದನ್ನು ಮರಳಿ ಪೋಲಿಸರ ಮೂಲಕ ಬ್ಯಾಗ್ ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ.

ಟಿಪ್ಪು ನಗರದ ಮಹಮ್ಮದ್ ಜಾಫರ್ ಫನಿಬಂದ ಎಂಬುವರೇ ಬ್ಯಾಗ್ ಮರಳಿಸಿದ ಪ್ರಮಾಣಿಕ ಆಟೋ ಚಾಲಕನಾಗಿದ್ದು, ಆಟೋ ನಿಲ್ಲಿಸಿದ ಸಮಯದಲ್ಲಿ ಸೀಟಿನ ಹಿಂಭಾಗದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಇತ ಆ ಬ್ಯಾಗ್ ಮಾಲೀಕರನ್ನು ಹುಡುಕಿದ್ದಾರೆ ಆದರೆ ಅವರು ಸಂಪರ್ಕಕ್ಕೆ ಸಿಗದೇ ಹೋದಾಗ ಕಮರಿಪೇಟೆ ಪೋಲಿಸ ಠಾಣೆಗೆ ಬ್ಯಾಗ್ ನ್ನು ಒಪ್ಪಿಸಿದ್ದಾರೆ. ನಂತರ ಪೋಲಿಸರು ಬ್ಯಾಗ್ ಮಾಲೀಕರ ವಿಳಾಸ ಪತ್ತೆ ಹಚ್ಚಿದಾಗ ಬೆಂಗಳೂರು ಮೂಲಕ ಸಂತೋಷ ಸೋಳಂಕಿ ಅವರದ್ದು ಎಂದು ತಿಳಿದುಬಂದಿದೆ. ನಂತರ ಅವರನ್ನು ಠಾಣೆಗೆ ಕರೆಯಿಸಿಕೊಂಡು ಆಟೋ ಚಾಲಕನ ಸಮ್ಮುಖದಲ್ಲಿ ಬ್ಯಾಗ್ ಮರಳಿ ಒಪ್ಪಿಸಿದ್ದಾರೆ. ಇನ್ನೂ ಬಿಟ್ಟು ಹೋದ ಬ್ಯಾಗ್ ನಲ್ಲಿ ಲ್ಯಾಪ್‌ಟಾಪ್, ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದವು ಅವುಗಳನ್ನು ಹಾಗೇ ಇದ್ದ ಬ್ಯಾಗ್ ನ್ನು ಆಟೋ ಚಾಲಕ ಪ್ರಾಮಾಣಿಕತೆಯಿಂದ ಮರಳಿಸಿ ಪೋಲಿಸರು ಮತ್ತು ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

Share
error: Content is protected !!