Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಳಗಾವಿ / ಸ್ವಚ್ಚತೆ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ.

ಸ್ವಚ್ಚತೆ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ.

 

ಚಿಕ್ಕೋಡಿ: ದಾವಣಗೆರೆಯ ನವ್ಯ ದಿಶಾ ಹಾಗೂ ಗ್ರಾಮೀಣ ಕೂಟದ ಶೃತಿ ಸಂಸ್ಕೃತಿಕ ಕಲಾತಂಡ ಸಹಯೋಗದಲ್ಲಿ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನೀರು,ನೈರ್ಮಲ್ಯ, ಮತ್ತು ಸ್ವಚ್ಚತೆ ಕುರಿತು ಬೀದಿ ನಾಟಕ ಹಮ್ಮಿಕೊಳ್ಳಲಾಗಿತ್ತು..
ಈ ವೇಳೆ ಅಥಣಿ ಪಟ್ಟಣದ
ಪುರಸಭೆಯ ಹೆಲ್ತ ಇನ್ಸ್ಪೆಕ್ಟರ್ ಬಸವರಾಜ ಬೊಳಶೆಟ್ಟಿ ಪುರಸಭೆಯ ಸಿಬ್ಬಂದಿಗಳಾದ ಚನ್ನಪ್ಪ ಜಿರಗ್ಯಾಳ,ಮತ್ತು ಬಾಳು ಭಜಂತ್ರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ದಾವಣಗೆರೆಯ ತಮಟೆ ಬಾರಿಸುವ ಮೂಲಕ ಹೆಲ್ತ ಇನ್ಸ್ಪೆಕ್ಟರ್ ಬಸು ಬೋಳಶೆಟ್ಟಿ ಸಾಂಕೇತಿಕವಾದ ಬೀದಿ ನಾಟಕಕ್ಕೆ ಚಾಲನೆ ನೀಡಿದರು, ಕಲಾತಂಡದ ಕಲಾವಿದರಾದ ಡಿ ವೆಂಕಟೇಶ, ಚೇತನಾ,ಮಹಂತೇಶ್ ಮತ್ತು ಶರಣಯ್ಯ ತಂಡ ಬೀದಿ ನಾಟಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು…ಬಹಿರ್ದೆಸೆ ಮುಕ್ತ ಗ್ರಾಮಗಳಿಗೆ ಒತ್ತುಕೊಡಬೇಕು,ಶೌಚಾಲಯಗಳನ್ನು ಬಳಸಬೇಕು ನೀರು ನಿಲ್ಲದಂತೆ ನಿಗಾವಹಿಸಬೇಕು ಮತ್ತು ತ್ಯಾಜ್ಯ ವಿಂಗಡನೆಯ ಮೂಲಕ ಕಸ ವಿಲೇವಾರಿಗೆ ಸಹಕರಿಸಿ ಸ್ವಚ್ಚ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂಬುದು ಶೃತಿ ಕಲಾತಂಡದ ಬೀದಿ ನಾಟಕದ ಒಟ್ಟಾರೆ ಸಾರಾಂಶವಾಗಿದ್ದು ಜನಮೆಚ್ಚುಗೆಗೆ ಪಾತ್ರವಾಯಿತಲ್ಲದೆ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿ ಆಯಿತು.

Share

About Prakash s kamble BIG TV NEWS, Athani

Check Also

ಮಹಾರಾಷ್ಟ್ರದಲ್ಲಿ ತಗ್ಗಿದ ವರುಣನ ಆರ್ಭಟ.‌

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು …

Leave a Reply

Your email address will not be published. Required fields are marked *

error: Content is protected !!