Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ದಕ್ಷಿಣ ಕನ್ನಡ / ಅಯೋಧ್ಯೆ ತೀರ್ಪು ಪ್ರಕಟ: ಮಂಗಳೂರಿನಲ್ಲಿಯೂ ಬಿಗಿ ಭದ್ರತೆ.

ಅಯೋಧ್ಯೆ ತೀರ್ಪು ಪ್ರಕಟ: ಮಂಗಳೂರಿನಲ್ಲಿಯೂ ಬಿಗಿ ಭದ್ರತೆ.

ಮಂಗಳೂರು: ಅಯೋಧ್ಯಾ ತೀರ್ಪು ಹಿನ್ನಲೆಯಲ್ಲಿ ಮಂಗಳೂರು ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು .ಪೊಲೀಸ್ ಆಯುಕ್ತ ಡಾ ಹರ್ಷ ಅವರೇ ನಗರದ ವಿವಿಧೆಡೆ ಬಂದೋಬಸ್ತ ಉಸ್ತುವಾರಿ ನೋಡಿಕೊಂಡಿದ್ದರು .
ಅಯೋಧ್ಯಾ ತೀರ್ಪು ಹಿನ್ನಲೆಯಲ್ಲಿ ಮಂಗಳೂರು ನಗರದ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು .ನಗರ ಪೊಲೀಸ್ ಆಯುಕ್ತ ಡಾ ಹರ್ಷ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು .ಶಾಲಾ ಕಾಲೇಜು ಗಳಿಗೆ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ನೀಡಿದ್ದರು .ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು .
ಆದರೆ ಮಂಗಳೂರು ನಗರದಲ್ಲಿ ಜನ ಜೀವನ ಎಂದಿನಂತೆ ಇತ್ತು .ವಾಹನ ಸಂಚಾರ ಕೂಡ ಯಾವುದೇ ಅಡಚಣೆ ಇರಲಿಲ್ಲ ಖಾಸಗಿ ಬಸ್ ಕೆ ಯಸ್ ಆರ್ ಟಿ ಸಿ ಬಸ್ ಸಂಚಾರ ಕೂಡ ಎಂದಿನಂತೆ ಇತ್ತು .ಆದರೆ ಜನ ಸಂಚಾರ ವಿರಳವಾಗಿತ್ತು .ಆಯಾಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು .
ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಬಹಳಷ್ಟ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು .

Share

About SRINIVAS BIG TV NEWS, MANGALORE

Check Also

ನದಿಗೆ ಹಾರಿ ತಂದೆ – ಮಗ ಆತ್ಮಹತ್ಯೆ.

ಮಂಗಳೂರು : ಮಗುವಿನ ಜೊತೆಗೆ ತಂದೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ನೇತ್ರಾವತಿ …

Leave a Reply

Your email address will not be published. Required fields are marked *

error: Content is protected !!